ಉತ್ತರ ಕರ್ನಾಟಕ ಹಾಗೂ ಬೇರೆ ಬೇರೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ: ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ

| Updated By: ganapathi bhat

Updated on: Dec 24, 2021 | 3:42 PM

ಉತ್ತರ ಕರ್ನಾಟಕ ಬಗ್ಗೆ ದಕ್ಷಿಣ ಕರ್ನಾಟಕದವರು ಹೆಚ್ಚಾಗಿ ಚರ್ಚೆ ನಡೆಸಿದ್ದಾರೆ. ಉತ್ತರ ಕರ್ನಾಟಕ ನೀರಾವರಿ ಹಾಗೂ ಎಲ್ಲಾ ಸಮಸ್ಯೆ ಬೇಗನೇ ಬಗೆಹರಿಸುವುದುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕ ಹಾಗೂ ಬೇರೆ ಬೇರೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ: ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ
ಸಭಾಪತಿ ಬಸವರಾಜ ಹೊರಟ್ಟಿ (ಸಂಗ್ರಹ ಚಿತ್ರ)
Follow us on

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸದನದಲ್ಲಿ ಸಮಯ ಮೀಸಲಿಟ್ಟಿದ್ದೇವೆ. ಉತ್ತರ ಕರ್ನಾಟಕ ಹಾಗೂ ಬೇರೆ ಬೇರೆ ಸಮಸ್ಯೆ ಬಗ್ಗೆ ಚರ್ಚೆ ನಡೆದಿದೆ. ಎಲ್ಲಾ ಸದಸ್ಯರು ಸಹಕಾರ ನೀಡಿದ್ದಾರೆ. ಉತ್ತರ ಕರ್ನಾಟಕ ಬಗ್ಗೆ ದಕ್ಷಿಣ ಕರ್ನಾಟಕದವರು ಹೆಚ್ಚಾಗಿ ಚರ್ಚೆ ನಡೆಸಿದ್ದಾರೆ. ಉತ್ತರ ಕರ್ನಾಟಕ ನೀರಾವರಿ ಹಾಗೂ ಎಲ್ಲಾ ಸಮಸ್ಯೆ ಬೇಗನೇ ಬಗೆಹರಿಸುವುದುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದ್ದಾರೆ.

ಈ ಬಾರಿಯೂ ಕೊರೊನಾದಿಂದ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಯುತ್ತಾ ಅಂತ ಚರ್ಚೆಯಾಗಿತ್ತು. ಆದ್ರೆ ಉತ್ತರ ಕರ್ನಾಟಕ ಭಾಗದ ಸಿಎಂ, ಸಭಾಪತಿ, ಸಭಾಧ್ಯಕ್ಷರು ಇರುವುದರಿಂದ ನಾವು ಇಲ್ಲೇ ಮಾಡ್ಲೇಬೇಕು ಅಂತ ಚಳಿಗಾಲದ ಅಧಿವೇಶನ ಮಾಡಿದ್ದೇವೆ. ನಾನು ಸಿಎಂ ಬಳಿ ಎರಡು ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಜಂಟಿ ಅಧಿವೇಶನ ನಡೆಸಬೇಕು ಅಥವಾ ಹೆಚ್ಚು ದಿನವಾದ್ರೂ ನಡೆಸಬೇಕು ಅಂತ ಸಿಎಂ ಬಳಿ ಪ್ರಸ್ತಾಪ ಮಾಡಿದ್ದೇನೆ. ಶಾಸಕರ ಭವನ ಹಾಗೂ ಸೆಕ್ರೆಟರಿ ಕಚೇರಿಯಾಗ್ಬೇಕು ಅಂತ ಪ್ರಸ್ತಾಪ ಮಾಡಿದ್ದೇವೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಹೊಸದಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಸೆಮಿನಾರ್ ಮಾಡುತ್ತೇವೆ. ಯಾವರೀತಿ ಸದನದಲ್ಲಿ ಮಾತನಾಡಬೇಕು ಅಂತಾ ತಿಳಿಹೇಳುತ್ತೇವೆ. ಆದಷ್ಟು 40 ವರ್ಷದ ದಾಟಿದ ಅನುಭವಸ್ಥರನ್ನ ಆಯ್ಕೆಮಾಡಬೇಕೆಂದು ಎಲ್ಲಾ ಪಕ್ಷಗಳು ಮನವಿ ಮಾಡುತ್ತೇವೆ. ಇದು ಚಿಂತಕರ ಚಾವಡಿಯೇ ಆಗಬೇಕು. ಕೆಲವರು ಇತ್ತೀಚಿನ ಚುನಾವಣೆಯಿಂದ ಇದನ್ನ ಮುಚ್ಚಬೇಕು ಅಂತೆಲ್ಲ ಮಾತನಾಡಿದ್ದಾರೆ. ಇದನ್ನ ಸರಿಪಡಿಸುವ ಕೆಲಸವನ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

ಪರಿಷತ್‌ನಲ್ಲಿ ಧನವಿನಿಯೋಗ ಬಿಲ್-2021 ಅಂಗೀಕಾರ ಮಾಡಲಾಗಿದೆ. ಸುಮಾರು ಒಂದೂವರೆ ಗಂಟೆ ಚರ್ಚೆ ಬಳಿಕ ಅಂಗೀಕಾರವಾಗಿದೆ. ಪರಿಷತ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಧೇಯಕ ಮಂಡಿಸಿದ್ದಾರೆ.

ಪರಿಷತ್​​ನಲ್ಲಿ ಇಂದೇ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ?
ಪರಿಷತ್​​ನಲ್ಲಿ ಇಂದೇ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ಆಗಲಿದೆಯೇ ಎಂಬ ಬಗ್ಗೆ ಪ್ರಶ್ನೆ ಮೂಡಿದೆ. ಇಂದೇ ಬಿಲ್​ ಪಾಸ್​ ಮಾಡಿಕೊಳ್ಳಲು, ಸಿಎಂ, ಸಚಿವರ ಪ್ರಯತ್ನ ನಡೆಯುತ್ತಿದೆ. ಸಚಿವರು, ಪರಿಷತ್ ಸದಸ್ಯರುಗಳ ಜೊತೆ ಬೊಮ್ಮಾಯಿ ಚರ್ಚೆ ನಡೆಸುತ್ತಿದ್ದಾರೆ. ಚರ್ಚೆಗೆ ಅವಕಾಶ ನೀಡದೇ ಅಂಗೀಕಾರ ಮಾಡಿಕೊಳ್ಳಲು ಪ್ಲ್ಯಾನ್ ಹಾಕಿಕೊಳ್ಳಲಾಗಿದೆ. ಸಂಖ್ಯಾಬಲದ ಆಧಾರದ ಮೇಲೆ ಅಂಗೀಕಾರಕ್ಕೆ ಸರ್ಕಾರ ಯೋಜನೆ ಇದೆ ಎಂಬ ಬಗ್ಗೆ ಹೇಳಲಾಗುತ್ತಿದೆ.

ಮಧ್ಯಾಹ್ನದ ಪರಿಷತ್ ಕಲಾಪ ಕುತೂಹಲ ಮೂಡಿಸಿದೆ. ಕಲಾಪ ಆರಂಭಕ್ಕೂ ಮುನ್ನ 3 ಪಕ್ಷದವರಿಂದ ಕಾರ್ಯತಂತ್ರ ಹೆಣೆಯಲಾಗುತ್ತಿದೆ. 3 ಪಕ್ಷಗಳ ನಾಯಕರು ಬಲಾಬಲ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಕಲಾಪಕ್ಕೆ ಬರುವಂತೆ ಸದಸ್ಯರಿಗೆ ಕರೆ ಮಾಡುತ್ತಿದ್ದಾರೆ. ಮತಾಂತರ ನಿಷೇಧ ಬಿಲ್ ಮಂಡನೆಗೆ‌ ಬಿಜೆಪಿ ಮುಂದಾಗಿದೆ. ನಂತರ ಮಸೂದೆ ಅಂಗೀಕಾರ ಕಸರತ್ತಿಗೂ ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹತ್ತು ದಿನ 52 ಗಂಟೆಗಳ ಕಾಲ ವಿಧಾನಸಭೆ ಅಧಿವೇಶನ ನಡೆಸಲಾಗಿದೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಣೆ

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ನಮ್ಮ ಹಿಡನ್ ಅಲ್ಲ, ಓಪನ್ ಅಜೆಂಡಾ: ಆರಗ ಜ್ಞಾನೇಂದ್ರ

Published On - 3:34 pm, Fri, 24 December 21