Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಹಕರಿಂದ ಹಣ ಸಂಗ್ರಹಿಸಿ ಜಿಎಸ್‌ಟಿ ಕಚೇರಿಗೆ ಪಾವತಿಸದೇ ವಂಚನೆ, 132 ಕೋಟಿ ರೂ. ಭೇದಿಸಿದ ಅಧಿಕಾರಿಗಳು

ಗ್ರಾಹಕರಿಂದ ಹಣ ಸಂಗ್ರಹಿಸಿ ಅದನ್ನು ಜಿಎಸ್‌ಟಿ ಕಚೇರಿಗೆ ಪಾವತಿಸದೇ ನಕಲಿ ಇನ್‌ವಾಯ್ಸ್ ನೀಡುವ ಮೂಲಕ ಇನ್ಪುಟ್ ತೆರಿಗೆ ಪಡೆದಿದ್ದ. ಈ ಹಿನ್ನಲೆ ಗ್ರಾಹಕರು ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಜಿಎಸ್​ಟಿ ಅಧಿಕಾರಿಗಳು ಬರೋಬ್ಬರಿ 132 ಕೋಟಿ ರೂಪಾಯಿ ವಂಚನೆ ಪ್ರಕರಣವನ್ನು ಬೇಧಿಸಿದ್ದಾರೆ.

ಗ್ರಾಹಕರಿಂದ ಹಣ ಸಂಗ್ರಹಿಸಿ ಜಿಎಸ್‌ಟಿ ಕಚೇರಿಗೆ ಪಾವತಿಸದೇ ವಂಚನೆ, 132 ಕೋಟಿ ರೂ. ಭೇದಿಸಿದ ಅಧಿಕಾರಿಗಳು
ಆರೋಪಿ ನಕೀಬ್ ಮುಲ್ಲಾ
Follow us
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 11, 2024 | 4:50 PM

ಬೆಳಗಾವಿ, ಜು.11: ಬೆಳಗಾವಿ(Belagavi)ಯ ಕೇಂದ್ರಿಯ ಸರಕು ಮತ್ತು ಸೇವಾ ತೆರಿಗೆ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬರೋಬ್ಬರಿ 132 ಕೋಟಿ ರೂಪಾಯಿ ವಂಚನೆ ಪ್ರಕರಣವನ್ನು ಬೇಧಿಸಿದ್ದಾರೆ. ಫೆಡರಲ್‌ ಲಾಜಿಸ್ಟಿಕ್ ಮಾಲೀಕ ನಕೀಬ್ ನಜೀಬ್ ಮುಲ್ಲಾ ಬಂಧಿತ ಆರೋಪಿ. ಇನ್ನು ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಜಿಎಸ್‌ಟಿ(GST) ಪ್ರಧಾನ ಆಯುಕ್ತ ದಿನೇಶ್ ಪಾಂಗರಕರ, ‘23.82 ಕೋಟಿ ರೂ. ನಕಲಿ ಇನ್ಪುಟ್ ತೆರಿಗೆ ಕ್ರೆಡಿಟ್ ಒಳಗೊಂಡ 132 ಕೋಟಿ ರೂ. ನಕಲಿ ಜಿಎಸ್‌ಟಿ ಇನ್‌ವಾಯ್ಸ್​​ನ್ನು ಆರೋಪಿ ನಕೀಬ್ ಮುಲ್ಲಾ ಸೃಷ್ಠಿಸಿದ್ದ.

ಜಿಎಸ್‌ಟಿ ಕಚೇರಿಗೆ ಪಾವತಿಸದೇ ವಂಚನೆ

‘ಗ್ರಾಹಕರಿಂದ ಹಣ ಸಂಗ್ರಹಿಸಿ ಅದನ್ನು ಜಿಎಸ್‌ಟಿ ಕಚೇರಿಗೆ ಪಾವತಿಸದೇ ನಕಲಿ ಇನ್‌ವಾಯ್ಸ್ ನೀಡುವ ಮೂಲಕ ಇನ್ಪುಟ್ ತೆರಿಗೆ ಪಡೆದಿದ್ದ. ಜೊತೆಗೆ ಆರೋಪಿ ನಕೀಬ್ ಮುಲ್ಲಾ ಹೊಂದಿರುವ ಫೆಡರಲ್‌ ಲಾಜಿಸ್ಟಿಕ್ ಕಂಪನಿ ಕೂಡ ನಕಲಿ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ಈ ಕಂಪನಿ ಮೂಲಕವೇ ಅನೇಕ ಕಂಪನಿಗಳಿಗೆ ರಿರ್ಟನ್‌ಗಳು. ಇತರೆ ಜಿಎಸ್‌ಟಿ ಸೇವೆ ನೀಡುವುದಾಗಿ ನಕೀಬ್ ಮುಲ್ಲಾ ನಂಬಿಸಿದ್ದ. ಗ್ರಾಹಕರು ನೀಡಿದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಆರೋಪಿ ವಿರುದ್ಧ ಸಿಜಿಎಸ್‌ಟಿ ಕಾಯ್ದೆ 2024 ಸೆಕ್ಷನ್ 69ರ ನಿಬಂಧನೆಗಳ ಅಡಿ ಕೇಸ್ ದಾಖಲಾಗಿದ್ದು, ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಳಗಾವಿ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಇದನ್ನೂ ಓದಿ:ತುಮಕೂರು ಹೆಚ್​ಪಿ ಪೆಟ್ರೋಲ್ ಬಂಕ್​ನಲ್ಲಿ ವಂಚನೆ, ₹ 110ಕ್ಕೆ ಕೇವಲ 300ಮಿಲೀ ಪೆಟ್ರೋಲ್ !

 ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ಕಳ್ಳರು; ಟ್ರೀ ಗಾರ್ಡ್ ಕೂಡ ಬಿಡಲಿಲ್ಲ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಬದಿಯ ಗಿಡಗಳ ರಕ್ಷಣೆಗೆ ಹಾಕಿದ್ದ ಕಬ್ಬಿಣದ ಟ್ರೀ ಗಾರ್ಡ್​ನ್ನು ಕಳ್ಳರು ಬಿಡುತ್ತಿಲ್ಲ. ಚಪ್ಪಲಿ ಆಯ್ತು, ಶೂ ಆಯ್ತು, ಮನೆ ಮುಂದೆ ಇಟ್ಟಿರೋ ಹೂ ಕುಂಡ ಕೂಡ ಕದ್ದಿದಾಯ್ತು. ಈಗ ರಸ್ತೆಯಲ್ಲಿ ಹಚ್ಚ ಹಸಿರಿನ ಪ್ರಕೃತಿಗೆ ಗಿಡ ನೆಟ್ಟು ಟ್ರಿ ಗಾರ್ಡ್ ಹಾಕಿದ್ರೆ,  ಕಳ್ಳರು ಅದನ್ನು ಬಿಡ್ತಿಲ್ಲ. ಬನಶಂಕರಿಯ ರಸ್ತೆ ಬಳಿ ಜನರು ಗಿಡಗಳಿಗೆ ಹಾಕಿರುವ ಟ್ರೀ ಗಾರ್ಡ್​ನ್ನು ಕಳ್ಳ ಎಗರಿಸಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ