ನಿಪ್ಪಾಣಿಯಲ್ಲಿ ಬಿಜೆಪಿ, ಕಾಂಗ್ರೆಸ್ ಕಿತ್ತಾಟ: ಶಾಸಕಿ ಶಶಿಕಲಾ ಜೊಲ್ಲೆಯಿದ್ದ ಕಾರ್ಯಮದಲ್ಲಿಯೇ ಗಲಾಟೆ

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಪಟ್ಟಣಕುಡಿ ಗ್ರಾಮದಲ್ಲಿ ಆಶ್ರಯ ಮನೆ ಹಂಚಿಕೆ ಕಾರ್ಯಕ್ರಮದ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ಗಲಾಟೆ ನಡೆದಿದ್ದು, ಶಾಸಕಿ ಶಶಿಕಲಾ ಜೊಲ್ಲೆ ಕಣ್ಣೀರು ಹಾಕಿದ ಘಟನೆ ನಡೆದಿದೆ. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಗೂ ಬೆಂಬಲಿಗರ ಗದ್ದಲದ ಹಿನ್ನೆಲೆ ಅಧಿಕಾರಿಗಳು ಕಾರ್ಯಕ್ರಮವನ್ನೇ ಮುಂದೂಡಿದ್ದಾರೆ.

ನಿಪ್ಪಾಣಿಯಲ್ಲಿ ಬಿಜೆಪಿ, ಕಾಂಗ್ರೆಸ್ ಕಿತ್ತಾಟ: ಶಾಸಕಿ ಶಶಿಕಲಾ ಜೊಲ್ಲೆಯಿದ್ದ ಕಾರ್ಯಮದಲ್ಲಿಯೇ ಗಲಾಟೆ
ನಿಪ್ಪಾಣಿಯಲ್ಲ ಬಿಜೆಪಿ, ಕಾಂಗ್ರೆಸ್ ಕಿತ್ತಾಟ
Image Credit source: Tv9 Kannada
Edited By:

Updated on: May 21, 2026 | 10:01 AM

ಬೆಂಗಳೂರು, ಮೇ 21: ನಿಪ್ಪಾಣಿ ಮತಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಿತ್ತಾಟ ನಡೆದಿದ್ದು, ಶಾಸಕಿ ಶಶಿಕಲಾ ಜೊಲ್ಲೆ ಕಾರ್ಯಕ್ರಮಕ್ಕೆ ನುಗ್ಗಿ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ನಡೆಸಿರುವ ಆರೋಪ ಕೇಳಿಬಂದಿದೆ. ನಿಪ್ಪಾಣಿ ತಾಲೂಕಿನ ಪಟ್ಟಣಕುಡಿ ಗ್ರಾಮದಲ್ಲಿ ನಡೆಯುತ್ತಿದ್ದ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಗೂ ಬೆಂಬಲಿಗರು ವಾಗ್ವಾದ ನಡೆಸಿದ್ದಾರೆ. ಪರಿಣಾಮ ಆಶ್ರಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಲಾಟರಿ ಮ‌ೂಲಕ 950 ಮನೆಗಳ ಹಂಚಿಕೆ ಕಾರ್ಯಕ್ರಮದಲ್ಲಿ ಗದ್ದಲ ಉಂಟಾಗಿದೆ.

ಆಶ್ರಯ ಕಮಿಟಿ ಅಧಿಕಾರಿಗಳು, ಸದಸ್ಯರ ಸಮ್ಮುಖದಲ್ಲಿ ಲಾಟರಿ ಮೂಲಕ ಮನೆಗಳ ವಿತರಣಾ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ವೇಳೆ ಏಕಾ ಏಕಿ ಬೆಂಬಲಿಗರ ಜೊತೆಗೆ ಕಾರ್ಯಕ್ರಮಕ್ಕೆ ನುಗ್ಗಿದ ಲಕ್ಷ್ಮಣರಾವ್ ಚಿಂಗಳೆ, ಬೇಕಾದವರಿಗೆ ನೀವು ಮನೆಗಳನ್ನ ಹಂಚಲು ಮುಂದಾಗಿದ್ದೀರಿ. ಮನೆಗಳ ಹಂಚಿಕೆಯಲ್ಲಿ ತಾರತಮ್ಯ ನಡೆದಿದೆ ಎಂದು ಶಾಸಕಿಗೆ ಜೊಲ್ಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮಕ್ಕೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ‌ಯನ್ನ ಏಕೆ ಕರೆದಿಲ್ಲಾ ಎಂದು ಪ್ರಶ್ನಿಸಿದ್ದು, ಈ ವೇಳೆ ಶಾಸಕಿ ಜೊಲ್ಲೆ ಹಾಗೂ ಚಿಂಗಳೆ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ಓದಿ: ಕಾಂಗ್ರೆಸ್​​ ‘ಪಟ್ಟದಾಟ’ಕ್ಕೆ ತೆರೆ ಯಾವಾಗ?; ಸಾಧ್ಯಾಸಾಧ್ಯತೆ ಬಗ್ಗೆ ‘ಕೈ; ಪಾಳಯದಲ್ಲೇ ಹೀಗೊಂದು ಚರ್ಚೆ

ಕಣ್ಣೀರು ಹಾಕಿದ ಶಶಿಕಲಾ ಜೊಲ್ಲೆ

ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆಯೂ ವಾಗ್ವಾದ ಶುರುವಾಗಿದ್ದು, ಕಾರ್ಯಕರ್ತರು ತಳ್ಳಾಡಿಕೊಂಡಿದ್ದಾರೆ. ವಾಗ್ವಾದ ತಾರಕ್ಕೆರುತ್ತಿದ್ದಂತೆ ಲಕ್ಷ್ಮಣರಾವ್ ಚಿಂಗಳೆಯನ್ನ ಪೋಲಿಸರು ಕರೆದುಕೊಂಡು ಹೋಗಿದ್ದು, ಗದ್ದಲ ಹಿನ್ನೆಲೆ ಮನೆಗಳ ಹಂಚಿಕೆ ಕಾರ್ಯಕ್ರಮವನ್ನು ಅಧಿಕಾರಿಗಳು ಮುಂದೂಡಿದ್ದಾರೆ. ಇದೇ ವೇಳೆ ಭಾವುಕರಾದ ಶಾಸಕಿ ಶಶಿಕಲಾ ಜೊಲ್ಲೆ ಭಾವುಕರಾಗಿ ಕಣ್ಣೀರು ಹಾಕಿದ ಪ್ರಸಂಗವೂ ನಡೆದಿದೆ. ಕಾರ್ಯಕ್ರಮ ರದ್ದಾದ ಬಳಿಕ ಮಹಿಳೆಯರ ಜೊತೆಗೆ ಮಾತನಾಡಿದ ಶಶಿಕಲಾ ಜೊಲ್ಲೆ, ಚಿಕ್ಕ ಮಕ್ಕಳ ಜೊತೆ ಮನೆ ಕನಸು ಕಟ್ಟಿಕೊಂಡು ನೀವು ಇಲ್ಲಿಗೆ ಬಂದಿದ್ದೀರಿ. ಆದರೆ ರಾಜಕೀಯ ಮಾಡಿ ಕಾರ್ಯಕ್ರಮವನ್ನ ಹಾಳು ಮಾಡಿದ್ದಾರೆ‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 10:00 am, Thu, 21 May 26

Follow Us