ಮಹಿಳಾ PSI ಅಶ್ಲೀಲ ವಿಡಿಯೋ ಪ್ರಕರಣ: ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕೋರ್ಟ್ ಮೆಟ್ಟಿಲೇರಿದ ಸಹಾಯಕ ಅಧೀಕ್ಷಕ

ಕೆಐಎಸ್‌ಎಫ್ ಮಹಿಳಾ ಪಿಎಸ್‌ಐ ಅಶ್ಲೀಲ ವಿಡಿಯೋವನ್ನು ಹಿಂಡಲಗಾ ಜೈಲಿಗೆ ತಪ್ಪಾಗಿ ಲಿಂಕ್ ಮಾಡಿ, ಜೈಲಿನ ಘನತೆಗೆ ಧಕ್ಕೆ ತಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಜೈಲಿನ ಸಹಾಯಕ ಅಧೀಕ್ಷಕರು ಸಂಧ್ಯಾ ನಾಗರಾಜ್ ಮತ್ತು ಸಾಯಿಕುಮಾರ್ ವಿರುದ್ಧ ಬೆಳಗಾವಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕ್ರಮಕ್ಕೆ ಕೋರಲಾಗಿದೆ.

ಮಹಿಳಾ PSI ಅಶ್ಲೀಲ ವಿಡಿಯೋ ಪ್ರಕರಣ: ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕೋರ್ಟ್ ಮೆಟ್ಟಿಲೇರಿದ ಸಹಾಯಕ ಅಧೀಕ್ಷಕ
ಹಿಂಡಲಗಾ ಜೈಲು ಮಾನಹಾನಿ ದೂರು
Edited By:

Updated on: Aug 25, 2026 | 3:48 PM

ಬೆಳಗಾವಿ, ಆ.25: ಕೆಐಎಸ್‌ಎಫ್ (KISF) ವಿಭಾಗದ ಮಹಿಳಾ ಪಿಎಸ್‌ಐ ಒಬ್ಬರ ಅಶ್ಲೀಲ ವಿಡಿಯೋ ಕಾಲ್ ದೃಶ್ಯಾವಳಿಯನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಲಿಂಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ಪ್ರಕರಣವೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಜೈಲಿನ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆ ತಂದ ಆರೋಪಿಗಳ ವಿರುದ್ಧ ಹಿಂಡಲಗಾ ಜೈಲಿನ ಸಹಾಯಕ ಅಧೀಕ್ಷಕರು ಬೆಳಗಾವಿಯ ಎರಡನೇ ಜೆಎಂಎಫ್‌ಸಿ (JMFC) ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

ಕೆಐಎಸ್‌ಎಫ್‌ನ ಮಹಿಳಾ ಪಿಎಸ್‌ಐ ಖಾಸಗಿ ವ್ಯಕ್ತಿಯೊಬ್ಬರ ಜೊತೆ ಬೆತ್ತಲೆಯಾಗಿ ಮಾತನಾಡಿದ್ದ ವಿಡಿಯೋ ಕಾಲ್ ದೃಶ್ಯಾವಳಿಯನ್ನು ‘Sandhya777nagraj’ ಎಂಬ ಇನ್‌ಸ್ಟಾಗ್ರಾಮ್ (Instagram) ಐಡಿಯಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಈ ವಿಡಿಯೋ ನಡೆದಿದ್ದು ಹಿಂಡಲಗಾ ಜೈಲಿನಲ್ಲಿ ಎಂದು ತಪ್ಪಾಗಿ ಉಲ್ಲೇಖಿಸಲಾಗಿತ್ತು.

ಈ ಪೋಸ್ಟ್‌ನಲ್ಲಿ ಗೃಹ ಸಚಿವರ ಭಾವಚಿತ್ರ ಹಾಗೂ ಕಾರಾಗೃಹ ಸುಧಾರಣೆ ಇಲಾಖೆಯ ಎಡಿಜಿಪಿ (ADGP) ಅವರ ಭಾವಚಿತ್ರಗಳನ್ನು ಬಳಸಿ ಜೈಲಿನ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿತ್ತು.ಸಾಮಾಜಿಕ ಕಾರ್ಯಕರ್ತೆ ಸಂಧ್ಯಾ ನಾಗರಾಜ್ ಹಾಗೂ ಈ ಹಿಂದೆ ಹಿಂಡಲಗಾ ಜೈಲಿನಲ್ಲಿದ್ದ ತುಮಕೂರು ಮೂಲದ ಕೈದಿ ಸಾಯಿಕುಮಾರ್ ವಿರುದ್ಧ ಈ ಖಾಸಗಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಮೆರವಣಿಗೆ: ಮದ್ಯ ಮಾರಾಟ ನಿಷೇಧ, ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ

ಹಿಂಡಲಗಾ ಜೈಲಿಗೂ ಮತ್ತು ವೈರಲ್ ಆಗಿರುವ ಮಹಿಳಾ ಪಿಎಸ್‌ಐಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅನಗತ್ಯವಾಗಿ ಅಶ್ಲೀಲ ವಿಡಿಯೋವನ್ನು ಜೈಲಿಗೆ ಲಿಂಕ್ ಮಾಡಿ ಕಾರಾಗೃಹದ ಘನತೆಗೆ ಚ್ಯುತಿ ತರಲಾಗಿದೆ ಎಂದು ಜೈಲು ಆಡಳಿತ ಸ್ಪಷ್ಟಪಡಿಸಿದೆ. ಎರಡನೇ ಜೆಎಂಎಫ್‌ಸಿ ಕೋರ್ಟ್‌ನ ಸರ್ಕಾರಿ ಅಭಿಯೋಜಕ (Public Prosecutor) ಮಹಾಂತೇಶ ಅವರ ಮೂಲಕ ಈ ದೂರು ಸಲ್ಲಿಕೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 356(2)(3) ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us