ಬೆಳಗಾವಿ: ಗಣಿ ಉದ್ಯಮಿಗಳಾದ ದೊಡ್ಡಣ್ಣವರ್ ಬ್ರದರ್ಸ್ ಮನೆ, ಕಚೇರಿ ಮೇಲೆ ಐಟಿ ದಾಳಿ

ಬೆಳಗಾವಿಯ ಪ್ರಮುಖ ಉದ್ಯಮಿಗಳಾದ ವಿನೋದ್ ಮತ್ತು ಪುರುಷೋತ್ತಮ ದೊಡ್ಡಣ್ಣವರ್ ಅವರ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಗೋವಾದಿಂದ ಆಗಮಿಸಿದ ಐಟಿ ಅಧಿಕಾರಿಗಳು ರಾತ್ರಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ದೊಡ್ಡಣ್ಣವರ್ ಬ್ರದರ್ಸ್‌ಗೆ ಸೇರಿದ ಗಣಿ ಮತ್ತು ಸಕ್ಕರೆ ಕಾರ್ಖಾನೆಗಳ ಮೇಲೆ ಈ ದಾಳಿ ನಡೆದಿದೆ. ಕಚೇರಿಯಲ್ಲಿ ಕುಟುಂಬಸ್ಥರನ್ನು ವಿಚಾರಣೆ ಮಾಡಲಾಗುತ್ತಿದೆ.

ಬೆಳಗಾವಿ: ಗಣಿ ಉದ್ಯಮಿಗಳಾದ ದೊಡ್ಡಣ್ಣವರ್ ಬ್ರದರ್ಸ್ ಮನೆ, ಕಚೇರಿ ಮೇಲೆ ಐಟಿ ದಾಳಿ
ಐಟಿ ದಾಳಿ
Edited By:

Updated on: Jan 28, 2025 | 2:13 PM

ಬೆಳಗಾವಿ, ಜನವರಿ 28: ಬೆಳಗಾವಿಯ (Belagavi) ಖ್ಯಾತ ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ್, ಪುರುಷೋತ್ತಮ ದೊಡ್ಡಣ್ಣವರ್ ಒಡೆತನದ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ದಾಳಿ ಮಾಡಿದ್ದಾರೆ. ದೊಡ್ಡಣ್ಣವರ್ ಬ್ರದರ್ಸ್​ ಗಣಿ, ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದಾರೆ. ಗೋವಾದಿಂದ ಆಗಮಿಸಿರುವ ಐಟಿ ಅಧಿಕಾರಿಗಳು ಒಟ್ಟು 5 ತಂಡಗಳಾಗಿ ಸೋಮವಾರ ಮಧ್ಯರಾತ್ರಿ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಐಟಿ ಅಧಿಕಾರಿಗಳು ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಕಚೇರಿಗೆ ದೊಡ್ಡಣ್ಣವರ್ ಕುಟುಂಬಸ್ಥರನ್ನು ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಲೋಕಾ ಬಲೆಗೆ ಬಿದ್ದ ಪ್ರಭಾರ ಪಿಡಿಒ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ‌.ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ದಯಾನಂದ್ ಅವರನ್ನು ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ. ದಯಾನಂದ್​ ಇ-ಖಾತೆ ಮಾಡಿಕೊಡಲು ಅಶ್ವತ್ಥ್​​​​ ಎಂಬುವರ ಬಳಿ ಹಣಕ್ಕೆ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 13 ಸಾವಿರ ಹಣ ಪಡೆಯುವಾಗ ಮಂಡ್ಯ ಲೋಕಾಯುಕ್ತ ಎಸ್​ಪಿ ಸುರೇಶ್ ಬಾಬು ನೇತೃತ್ವದ ತಂಡ ದಾಳಿ ನಡೆಸಿದೆ.

ಇದನ್ನೂ ಓದಿ: ‘ಗೇಮ್ ಚೇಂಜರ್’, ‘ಪುಷ್ಪ 2’ ನಿರ್ಮಾಪಕರಿಗೆ ಐಟಿ ಶಾಕ್; 65 ತಂಡಗಳಿಂದ ದಾಳಿ

ಹೊರ ರಾಜ್ಯದ ಡ್ರಗ್ ಪೆಡ್ಲರ್​​​ ಬಂಧನ

ಬೆಂಗಳೂರಿನಲ್ಲಿ ಹೊರರಾಜ್ಯದ ಓರ್ವ ಡ್ರಗ್ ಪೆಡ್ಲರ್​ನನ್ನು ಸಿಸಿ ಪೊಲೀಸರು ​​ಬಂಧಿಸಿದ್ದಾರೆ. ಬಂಧಿತನ ಬಳಿಯಿದ್ದ 10 ಲಕ್ಷ ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ್ದಾರೆ. ಸಿಸಿಬಿ ಮತ್ತು ಬ್ಯಾಡರಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಆಂದ್ರಪ್ರದೇಶದ ಮೂಲದ ಅರುಣ್ ಜಾಕೋಬ್ ಬಂಧಿತ ಆರೋಪಿ. ಆರೋಪಿ ಅರುಣ್​ ಸಿಂಥಟಿಕ್ ಡ್ರಗ್ಸ್ ಹಾಗೂ ಹೈಡ್ರೋ ಗಾಂಜಾ ಪೆಡ್ಲಿಂಗ್ ಮಾಡುತಿದ್ದನು. ನೈಜೀರಿಯಾ ಮೂಲದವರಿಂದ ಡ್ರಗ್ ಖರೀದಿಸಿ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡುತಿದ್ದ ವೇಳೆ ಬಂಧಿಸಲಾಗಿದೆ. ಆರೋಪಿ ಬಳಿ ಇದ್ದ 50 ಗ್ರಾಂ ಎಂಡಿಎಂಎ , 98 ಗ್ರಾಂ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:39 am, Tue, 28 January 25