‘ಕೊಟ್ಟ ಕುದುರೆ ಏರಲಾಗದವನು ವೀರನೂ ಅಲ್ಲ, ಶೂರನೂ ಅಲ್ಲ‘

ಬೆಳಗಾವಿ: ಡಿಸೆಂಬರ್5 ರಂದು ನಡೆಯಲಿರುವ ಅಥಣಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ನಡೆದಂತಹ ಪ್ರಚಾರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟ್ಟಳ್ಳಿ ಸೇರಿದಂತೆ ಅನರ್ಹ ಶಾಸಕರಿಗೆ ಬೆವರಿಳಿಸಿದ್ದಾರೆ. ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಐವರನ್ನು ಮಂತ್ರಿ ಮಾಡುತ್ತೇನೆಂಬ ಹೇಳಿಕೆಗೆ ತಿರುಗೇಟು ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ಐವರನ್ನಲ್ಲ 15 ಜನರನ್ನ ಬೇಕಾದ್ರೆ ಮಂತ್ರಿ ಮಾಡಿ ಆದ್ರೆ ಮಹೇಶ ಕುಮಟ್ಟಳ್ಳಿಗೆ ಮಾತ್ರ ಪಾಠ ಕಲಿಸಿ.ಮಹೇಶ ಕುಮಟ್ಟಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅನ್ನೋವಂತಹ ಮಳ್ಳನಂತಿದ್ದಾರೆ. […]

‘ಕೊಟ್ಟ ಕುದುರೆ ಏರಲಾಗದವನು ವೀರನೂ ಅಲ್ಲ, ಶೂರನೂ ಅಲ್ಲ‘
sadhu srinath

|

Nov 24, 2019 | 2:13 PM

ಬೆಳಗಾವಿ: ಡಿಸೆಂಬರ್5 ರಂದು ನಡೆಯಲಿರುವ ಅಥಣಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ನಡೆದಂತಹ ಪ್ರಚಾರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟ್ಟಳ್ಳಿ ಸೇರಿದಂತೆ ಅನರ್ಹ ಶಾಸಕರಿಗೆ ಬೆವರಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ ಬೆಳಗಾವಿಯಲ್ಲಿ ಐವರನ್ನು ಮಂತ್ರಿ ಮಾಡುತ್ತೇನೆಂಬ ಹೇಳಿಕೆಗೆ ತಿರುಗೇಟು ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ಐವರನ್ನಲ್ಲ 15 ಜನರನ್ನ ಬೇಕಾದ್ರೆ ಮಂತ್ರಿ ಮಾಡಿ ಆದ್ರೆ ಮಹೇಶ ಕುಮಟ್ಟಳ್ಳಿಗೆ ಮಾತ್ರ ಪಾಠ ಕಲಿಸಿ.ಮಹೇಶ ಕುಮಟ್ಟಳ್ಳಿ ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅನ್ನೋವಂತಹ ಮಳ್ಳನಂತಿದ್ದಾರೆ.

ಹಾಲು ಕುಡಿದವರೆ ಬದುಕಲ್ಲ, ಇನ್ನು ವಿಷ ಕುಡುದವರು ಬದುಕುತ್ತಾರ: 2013 ಮತ್ತು 2018ರ ಚುನಾವಣೆಗೆ ಟಿಕೆಟ್ ಕೊಡಿಸಲು ನಾನೂ ಸಹಾಯ ಮಾಡಿದ್ದೆ. ಒಳ್ಳೇಯವರು, ಸುಸಂಸ್ಕೃತರು ಇದಾರೆ ಅಂದಕೊಂಡಿದ್ವಿ ಆದ್ರೆ ಅವರು ದ್ರೋಹ ಮಾಡಿದ್ದಾರೆ. ಹೆತ್ತ ತಾಯಿಗೆ ದ್ರೋಹ ಮಾಡಿದ್ದಾರೆ. ಹಾಲು ಕುಡಿದ ಮಕ್ಕಳು ಬದುಕುತ್ತಿಲ್ಲ ಇನ್ನು ವಿಷ ಕುಡಿದವರು ಇವರು ಬದುಕುತ್ತಾರಾ? ಜನ್ಮಕೊಟ್ಟ ತಾಯಿ ಒಬ್ಬರಿದ್ರೆ ಜಗತ್ತನ್ನು ತೋರಿಸಿದ ತಾಯಿ ನಮ್ಮ ಪಕ್ಷ. ಅಂತಹ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ.

ಅನುದಾನ ಕೊಡದಿದ್ದಕ್ಕೆ ಇವರೆಲ್ಲ ಪಕ್ಷ ಬಿಟ್ಟು ಹೋಗಿದ್ದಾರಂತೆ. ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕೊಟ್ಟಷ್ಟು ಅನುದಾನ ನಮಗೆ ಕೊಡಲಿಲ್ಲ ಅಂತಾ ಹೇಳಿದ್ದಾರೆ‌. ಅನುದಾನ ಕೇಳೋಕೆ ಆಗದೇ ಇವರೇನು ಬಾಯಲ್ಲಿ ಕಡಬು ಇಟ್ಟುಕೊಂಡಿದ್ದರಾ? ಮಂತ್ರಿಗಳ‌ ಕಾಲು, ಕೈ ಹಿಡಿದು ಕೇಳಿ ಅನುದಾನ ಪಡೆಯಬಹುದಿತ್ತು. ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ ಎಂದು ಅನರ್ಹ ಶಾಸಕರ ವಿರುದ್ಧ ವ್ಯಂಗವಾಡಿದ್ದಾರೆ.

ಅತೀ ವಿನಯಂ ಚೋರ್ ಲಕ್ಷಣಂ: ನಾನು ಅನುದಾನ ತಂದಿದ್ದೇನೆ ಅಂತಾ ನಿಮಗ್ಯಾಕೆ ಹೊಟ್ಟೆ ಉರಿ. ಹೆಣ್ಣು ಮಗಳಾಗಿ ಹನ್ನೆರಡು ನೂರು ಕೋಟಿ ಅನುದಾನ ತಂದಿದ್ದೇನೆ. ನೀವು ಗಂಡಸರಾಗಿ‌ ನಿಮಗೆ ಅನುದಾನ ತರೋಕೆ ಆಗಲಿಲ್ವ. ಇವರು ಮಳ್ಳನಂಗೆ ಸೋಗು ಹಾಕುವುದು ಕೈ ಮುಗಿಯೋದು ಮಾಡ್ತಾರೆ. ಆದ್ರೆ ಇವರದು ಅತೀ ವಿನಯಂ ಚೋರ್ ಲಕ್ಷಣಂ. ನನ್ನ ಮಾತು ಬಿರುಸು ಇರಬಹುದು ನಾವು ಕಿತ್ತೂರು ಸಂಗೊಳ್ಳಿ ರಾಯಣ್ಣನ ನಾಡಿನವರು.

ಜಮಖಂಡಿಯಲ್ಲಿ ಆನಂದ ನ್ಯಾಮಗೌಡರ, ಕುಂದಗೋಳದಲ್ಲಿ ಕುಸುಮಾ ಶಿವಳ್ಳಿ, ಗುಂಡುಪ್ಲೇಟ್‌ಯಲ್ಲಿ ಗೀತಾ ಮಹಾದೇವಪ್ರಸಾದರನ್ನು ಗೆಲ್ಲಿಸಲು ಸಹಾಯ ಮಾಡಿದೆ. ಈಗ ನಾಲ್ಕನೇಯ ಉಪಚುನಾವಣೆಗೆ ಗಜಾನನ ಮಂಗಸೂಳಿಯವರನ್ನು ಗೆಲ್ಲಿಸಬೇಕಿದೆ. ನಾನು ಅಥಣಿ ಜನರಿಗೆ ಏನೂ ಮಾಡಲು ಆಗದಿದ್ರು ಬೆಳಗಾವಿ ರಾಜಕಾರಣ ಬದಲು ಮಾಡಿ ತೋರಿಸ್ತೀನಿ, ಬೆಳಗಾವಿ ಜಿಲ್ಲಾ ರಾಜಕಾರಣ ಬದಲಾಗಬೇಕಿದೆ ಎಂದಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada