ಬೆಳಗಾವಿ ಲೋಕಸಭಾ ಚುನಾವಣೆ ಅಖಾಡಕ್ಕೆ ಎಂಇಎಸ್ ಎಂಟ್ರಿ; ಬಿಜೆಪಿ-ಕಾಂಗ್ರೆಸ್​ಗೆ ಮತ ವಿಭಜನೆ ಆತಂಕ

ಬೆಳಗಾವಿ ಲೋಕಸಭಾ ಚುನಾವಣೆಯ ಕಣ ರಂಗೇರಿದೆ. ಒಂದು ಕಡೆ ಸಚಿವೆ ಲಕ್ಷ್ಮಿ ಹೆಬ್ಳಾಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಇಳಿದಿದ್ದು ಮತ್ತೊಂದೆಡೆ ಹಿರಿಯ ರಾಜಕಾರಣಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಣದಲ್ಲಿದ್ದಾರೆ. ಆದರೆ ಈಗ ಎಂಇಎಸ್​ ಕೂಡ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾಗಿದ್ದು ಮತ ವಿಭಜನೆ ಆಗುವ ಆತಂಕ ಎದುರಾಗಿದೆ.

ಬೆಳಗಾವಿ ಲೋಕಸಭಾ ಚುನಾವಣೆ ಅಖಾಡಕ್ಕೆ ಎಂಇಎಸ್ ಎಂಟ್ರಿ; ಬಿಜೆಪಿ-ಕಾಂಗ್ರೆಸ್​ಗೆ ಮತ ವಿಭಜನೆ ಆತಂಕ
ಎಂಇಎಸ್ ಸಭೆ
Follow us
| Updated By: ಆಯೇಷಾ ಬಾನು

Updated on: Mar 30, 2024 | 10:25 AM

ಬೆಳಗಾವಿ, ಮಾರ್ಚ್​.30: ಬೆಳಗಾವಿ ಲೋಕಸಭಾ ಚುನಾವಣೆ (Lok Sabha Election 2024) ಅಖಾಡಕ್ಕೆ ಎಂಇಎಸ್ (MES) ಎಂಟ್ರಿ ಕೊಡಲು ನಿರ್ಧರಿಸಿದ್ದು ಕಾಂಗ್ರೆಸ್ (Congress), ಬಿಜೆಪಿಗೆ (BJP) ಮತ ವಿಭಜನೆ ಆತಂಕ ತಲೆನೋವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೃಣಾಲ್‌ ಹೆಬ್ಬಾಳ್ಕರ್ ಸ್ಪರ್ಧೆ ಮಾಡುತ್ತಿದ್ದು ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಣಕ್ಕೆ ಇಳಿದಿದ್ದಾರೆ. ಆದರೆ ಮತ್ತೊಂದೆಡೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಎಂಇಎಸ್ ತೀರ್ಮಾನ ಮಾಡಿದ್ದು ಅಭ್ಯರ್ಥಿ ಆಯ್ಕೆಯ ಬಗ್ಗೆ ಫೈನಲ್ ನಿರ್ಧಾರ ಮಾತ್ರ ಬಾಕಿ ಇದೆ.

ಚಂದ್ರಕಾಂತ ಕೊಂಡೋಸ್ಕರ್ ಹಾಗೂ ಇನ್ನೂ ಇಬ್ಬರ ಹೆಸರು ಪ್ರಸ್ತಾಪವಾಗಿದ್ದು ಇನ್ನೆರಡು ದಿನಗಳಲ್ಲಿ ಎಂಇಎಸ್ ಅಭ್ಯರ್ಥಿ ಹೆಸರು ಫೈನಲ್ ‌ಮಾಡಲಿದೆ. ಬೆಳಗಾವಿ ಗ್ರಾಮೀಣದಲ್ಲಿ ಕಾಂಗ್ರೆಸ್​ಗೆ ಬೆಂಬಲವಾಗಿ ಮರಾಠ ಮತದಾರರು ನಿಂತಿದ್ದಾರೆ. ಎಂಇಎಸ್ ಅಭ್ಯರ್ಥಿ ಕಣಕ್ಕೆ ಇಳಿಸಿದ್ರೆ ಕಾಂಗ್ರೆಸ್ ಮತ‌ ವಿಭಜನೆ ಆಗುವ ಆತಂಕ ಹೆಚ್ಚಿದೆ. ಮತ್ತೊಂದೆಡೆ ಬಿಜೆಪಿಗೂ ಮರಾಠ ಮತದಾರರು ಗಟ್ಟಿ ಮತ ಬ್ಯಾಂಕ್ ಆಗಿದ್ದು ಎಂಇಎಸ್ ಅಭ್ಯರ್ಥಿ ಸ್ಪರ್ಧೆ ಮಾಡಿದ್ರೆ ಬಿಜೆಪಿಗೂ ಹೊಡೆತ ಬೀಳುವ ಸಾಧ್ಯತೆ ಇದೆ. ಎಂಇಎಸ್ ಚುನಾವಣೆಯಲ್ಲಿ ಯಾರಿಗೆ ದಾಳವಾಗುತ್ತದೆ ಎಂಬುದು ಕೂತುಹಲ.

ಇದನ್ನೂ ಓದಿ:  ಚುನಾವಣೆ ಬಂದ್ರೆ ಸಾಕು ಕುಮಾರಸ್ವಾಮಿ ಹಾರ್ಟ್​​ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ: ವ್ಯಂಗ್ಯವಾಡಿದ ಕಾಂಗ್ರೆಸ್​ ಶಾಸಕ

ಗಡಿ ವಿವಾದದಲ್ಲಿ ಕೇಂದ್ರದ ಗಮನ ಸೆಳೆಯಲು ಎಂಇಎಸ್ ಮತ್ತೊಮ್ಮೆ ಪ್ಲ್ಯಾನ್ ಮಾಡಿಕೊಂಡಿದೆ. ಗಲ್ಲಿಗೊಬ್ಬರಂತೆ ಎಂಇಎಸ್ ಚುನಾವಣೆ ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ. ಎಂಇಎಸ್ ಮುಖಂಡರ ಸಭೆಯಲ್ಲಿ ಹಲವರು ಈ ಬಗ್ಗೆ  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಡಿ ವಿಚಾರದಲ್ಲಿ ಇತ್ಯರ್ಥ ಪಡಿಸುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯವಹಿಸಿದೆ. ಹೀಗಾಗಿ 1996ರ ಪ್ಲ್ಯಾನ್ ಮತ್ತೊಮ್ಮೆ ಮುನ್ನಲೆಗೆ ತರಲು ಚಿಂತನೆ ನಡೆದಿದೆ.

1996ರಲ್ಲಿ 452 ಅಭ್ಯರ್ಥಿಗಳನ್ನು ಎಂಇಎಸ್ ಕಣಕ್ಕೆ ಇಳಿಸಿತ್ತು. ಚುನಾವಣೆ ಮತ ಪತ್ರ ಮುದ್ರಣ ಸೇರಿ ಆಯೋಗಕ್ಕೆ ಸವಾಲ್‌ ಹಾಕಿತ್ತು. ಆಗ ಆಯೋಗ ಎರಡು ತಿಂಗಳ ಕಾಲ ಚುನಾವಣೆ ಮುಂದೂಡಿತ್ತು. ಈಗ ಕೇಂದ್ರದ ಗಮನ ಸೆಳೆಯಲು ಇದೇ ಪ್ಲ್ಯಾನ್​ಗೆ ಎಂಇಎಸ್ ಚಿಂತನೆ ನಡೆಸಿದೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಮತ್ತು ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಒಟ್ಟು 452 ಅಭ್ಯರ್ಥಿ ಕಣಕ್ಕಿಸಲು ಮುಂದಾಗಿದೆ. ಬೆಳಗಾವಿ ಪಾಲಿಕೆ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ ಎಂಇಎಸ್ ಹಾಲಿ ಮಾಜಿ‌ ಸದಸ್ಯರನ್ನ ಕಣಕ್ಕಿಳಿಸಲು ಚಿಂತನೆ ನಡೆದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ