ಬೆಳಗಾವಿಯಲ್ಲಿ ಬೆಳಂ ಬೆಳಗ್ಗೆ ರೌಡಿಗಳಿಗೆ ಶಾಕ್ ನೀಡಿದ ಖಾಕಿ: 26 ರೌಡಿಗಳ ಮನೆಗಳ ಮೇಲೆ ದಾಳಿ
ದೆಹಲಿ ಪೊಲೀಸರಿಂದ ಮೊಹಮ್ಮದ್ ಜುಬೇರ್ ಬಂಧನ ಕೇಸ್ ಸಂಬಂಧ ಜುಬೇರ್ನನ್ನ ಇಂದು ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ. ಮೊಬೈಲ್, ಲ್ಯಾಪ್ಟಾಪ್ ವಶಕ್ಕೆ ಪಡೆಯುವ ಸಲುವಾಗಿ ಇಂದು ಬೆಂಗಳೂರಿಗೆ ದೆಹಲಿ ಪೊಲೀಸರು ಕರೆತರಲಿದ್ದಾರೆ.
ಬೆಳಗಾವಿ: ನಗರದಲ್ಲಿ ಬೆಳಂ ಬೆಳಗ್ಗೆ ರೌಡಿಗಳಿಗೆ ಖಾಕಿ ಶಾಕ್ ನೀಡಿದ್ದು, ನಗರದ 26 ರೌಡಿ (Rowdy’s) ಗಳ ಮನೆಗಳ ಮೇಲೆ ದಿಢೀರ್ ದಾಳಿ ಮಾಡಿದರು. ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸರಿಂದ ರೇಡ್ ಮಾಡಿದ್ದು, ನಗರದಲ್ಲಿ ಜನರನ್ನ ಹೆದರಿಸುತ್ತಾ ರೌಡಿಸಂ ಮಾಡುತ್ತಿದ್ದರವರಿಗೆ ಖಾಕಿ ಶಾಕ್ ಕೊಟ್ಟಿದೆ. ದಾಳಿ ವೇಳೆ ತಲ್ವಾರ್, ಜಂಬೆ, ಚಾಕು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿವೆ. ಮಾರಕಾಸ್ತ್ರಗಳನ್ನ ಜಪ್ತಿ ಮಾಡಿ ಮೂವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರುಕ್ಮೀಣಿ ನಗರದ ಶ್ರೀಧರ್ ತಳವಾರ(29), ಮಹಾಧ್ವಾಚಾರ್ಯ ರೋಡ್ ವಿನಯ್ ಪ್ರಧಾನ್(45), ಖಂಜರ ಗಲ್ಲಿಯ ಅಲ್ತಾಫ್ ಸುಬೇದಾರ(36) ಬಂಧನವಾಗಿದೆ. ಇಂದು ಬೆಳಗ್ಗೆ 5ಗಂಟೆಗೆ ದಾಳಿ ನಡೆಸಿ ಮೂವರನ್ನ ಬಂಧಿಸಿ ಉಳಿದ ರೌಡಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಇದನ್ನೂ ಓದಿ; Gokak Falls: ಮನುಷ್ಯ ಧರ್ಮವನ್ನು ಅರಿತವನು ಹೀಗೆ ಕ್ರೂರಿಯಾಗಲಾರ
ಜುಬೇರ್ನನ್ನ ಇಂದು ಬೆಂಗಳೂರಿಗೆ ಕರೆತರುವ ಸಾಧ್ಯತೆ
ಬೆಂಗಳೂರು: ದೆಹಲಿ ಪೊಲೀಸರಿಂದ ಮೊಹಮ್ಮದ್ ಜುಬೇರ್ ಬಂಧನ ಕೇಸ್ ಸಂಬಂಧ ಜುಬೇರ್ನನ್ನ ಇಂದು ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ. ಮೊಬೈಲ್, ಲ್ಯಾಪ್ಟಾಪ್ ವಶಕ್ಕೆ ಪಡೆಯುವ ಸಲುವಾಗಿ ಇಂದು ಬೆಂಗಳೂರಿಗೆ ದೆಹಲಿ ಪೊಲೀಸರು ಕರೆತರಲಿದ್ದಾರೆ. ಬೆಂಗಳೂರಿನ ಫ್ರೇಜರ್ಟೌನ್ನಲ್ಲಿ ಮನೆ ಹೊಂದಿದ್ದ ಜುಬೇರ್, ಮನೆಗೆ ಕರೆತಂದು ಮಹಜರು ಜೊತೆಗೆ ಮೊಬೈಲ್ ಹಾಗೂ ಲ್ಯಾಪ್ಟಾಪ್ಗಾಗಿ ದೆಹಲಿ ಪೊಲೀಸರು ಶೋಧ ನಡೆಸಲಿದ್ದಾರೆ. ಜುಲೈ 2ರವೆರಗೂ ದೆಹಲಿ ಪೊಲೀಸರು ಆತನನ್ನು ಕಸ್ಟಡಿಗೆ ಪಡೆದಿದ್ದು, 2018ರಲ್ಲಿ ಮಾಡಿದ್ದ ಅಕ್ಷೇಪಾರ್ಹ ಟ್ವೀಟ್ ಸಂಬಂಧ ಸೆರೆ ಹಿಡಿಯಲಾಗಿದೆ.
ಡೇಟೈಂ ಆಫೀಸ್ ಡ್ಯೂಟಿ, ನೈಟ್ ಟೈಂನಲ್ಲಿ ಬೈಕ್ ಕಳ್ಳತನ
ಬೆಂಗಳೂರು: ಜಾಲಿರೇಡ್ಗಾಗಿ ಸೂಪರ್ ಬೈಕ್ಗಳ ಕದಿಯುತಿದ್ದ ಕಳ್ಳನನ್ನ ರಾಜಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಾಗರ್ ಬಂಧಿತ ಆರೋಪಿ. ಪ್ರತಿಷ್ಠಿತ ಕಂಪನಿಯಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದು, ಆದರೆ ಸೂಪರ್ ಬೈಕ್ಗಳ ಹುಚ್ಚು ಕಳ್ಳತನಕ್ಕೆ ದಾರಿ ಮಾಡಿದೆ. ಡೇಟೈಂ ಆಫೀಸ್ ಡ್ಯೂಟಿ, ನೈಟ್ ಟೈಂನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ. ಈ ಹಿಂದೆ ಜೈಲು ಸೇರಿ ಬಿಡುಗಡೆಯಾದ್ರು ಕೃತ್ಯ ಬಿಟ್ಟಿರಲಿಲ್ಲ. ಆರೋಪಿ ಬಂಧನದಿಂದ 11.6 ಲಕ್ಷ ಮೌಲ್ಯದ 8 ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ.