Relationship: ಸಂಗಾತಿಯ ತಪ್ಪನ್ನು ತಿಳಿಸಲು ಈ ವಿಧಾನ ಬಳಸಿ, ಜಗಳದಿಂದ ದೂರವಿರಿ
ದಾಂಪತ್ಯ ಎಂದ ಮೇಲೆ ವಾದ, ಪ್ರತಿವಾದಗಳೆರಡೂ ಸಾಮಾನ್ಯ, ಹಾಗೆಯೇ ವಿಷಯ ಎಷ್ಟೇ ಗಂಭೀರವಾಗಿರಲಿ, ಇಲ್ಲದೇ ಇರಲಿ ನೀವು ಯಾವ ಧಾಟಿಯಲ್ಲಿ ಹೇಳುತ್ತೀರಿ ಎಂಬುದರ ಮೇಲೆ ನಿಮ್ಮ ಸಂಗಾತಿಯ ಪ್ರತಿಕ್ರಿಯೆ ಅವಲಂಬಿತವಾಗಿರುತ್ತದೆ.
ದಾಂಪತ್ಯ ಎಂದ ಮೇಲೆ ವಾದ, ಪ್ರತಿವಾದಗಳೆರಡೂ ಸಾಮಾನ್ಯ, ಹಾಗೆಯೇ ವಿಷಯ ಎಷ್ಟೇ ಗಂಭೀರವಾಗಿರಲಿ, ಇಲ್ಲದೇ ಇರಲಿ ನೀವು ಯಾವ ಧಾಟಿಯಲ್ಲಿ ಹೇಳುತ್ತೀರಿ ಎಂಬುದರ ಮೇಲೆ ನಿಮ್ಮ ಸಂಗಾತಿಯ ಪ್ರತಿಕ್ರಿಯೆ ಅವಲಂಬಿತವಾಗಿರುತ್ತದೆ. ನೀವು ಹೇಳುವ ರೀತಿ ಚೆನ್ನಾಗಿದ್ದರೆ ನಿಮ್ಮ ಸಂಗಾತಿ ನಿಮ್ಮ ಭಾವನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಸಮಸ್ಯೆ ಬಗೆಹರಿಯಬೇಕೇ ವಿನಃ ವಾದಗಳಿಂದ ಮತ್ತಷ್ಟು ಹೆಚ್ಚಾಗಬಾರದು.
ಒಂದೊಮ್ಮೆ ನೀವು ನಿಮ್ಮ ಸಂಗಾತಿಯ ತಪ್ಪನ್ನೇ ಹೇಳುತ್ತಿದ್ದರೂ ಅದಕ್ಕೂ ಅದರದೇ ಆದ ರೀತಿ ಇದೆ. ನೀವು ಹೇಳುವ ರೀತಿ ಅಥವಾ ನೀವು ಬಳಸುವ ಶಬ್ದವು ನಿಮ್ಮ ಸಂಗಾತಿಯ ಗೌರವಕ್ಕೆ ಧಕ್ಕೆಯುಂಟುಮಾಡುವಂತಿರಬಾರದು. ನೀವು ವಾದ ಮಾಡುವ ಮೊದಲು ಈ ವಿಷಯಗಳು ನಿಮ್ಮ ಗಮನದಲ್ಲಿರಲಿ
ಮೃದುವಾಗಿ ಮಾತನಾಡಿ: ನೀವು ಮಾತನಾಡುವ ರೀತಿಯು ನಿಮ್ಮ ಸ್ವಭಾವವನ್ನು ತೋರಿಸುತ್ತದೆ. ಯಾವ ವಿಷಯವನ್ನಾದರೂ ಹೇಳಲು ಹಲವು ರೀತಿಗಳಿವೆ. ಆದರೆ ಹೇಳುವ ವಿಷಯ ಯಾವುದೇ ಇರಲಿ ಮೃದುವಾದ ಧ್ವನಿಯಲ್ಲಿ ಹೇಳಿದರೆ ಅದರಿಂದಾಗುವ ಲಾಭವೇ ಬೇರೆ.
ಭಾವನೆಗಳನ್ನು ವ್ಯಕ್ತಪಡಿಸಿ: ನಿಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಿ ಎಂದು ಯಾರೂ ಹೇಳುವುದಿಲ್ಲ, ನಿಮ್ಮ ಮನಸ್ಸಿನಲ್ಲಿರುವ ತಲ್ಲಣ, ನೋವು ಎಲ್ಲವನ್ನೂ ಹೊರಹಾಕುವ ಅಧಿಕಾರ ನಿಮಗಿದೆ. ಆದರೆ ಯಾರ ಮನಸ್ಸನ್ನು ನೋಯಿಸುವ ಅಧಿಕಾರ ನಿಮಗಿಲ್ಲ. ಹಾಗಾಗಿ ನೀವು ಯಾವುದೇ ವಿಷಯದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಚರ್ಚೆ ಮಾಡಬೇಕೆಂದಿದ್ದರೆ ಅವರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಿ, ವಿಷಯವನ್ನು ಸುಲಭವಾಗಿ ಅರ್ಥ ಮಾಡಿಸಿ.
ಸಂಗಾತಿಯನ್ನು ಕೆರಳಿಸಬೇಡಿ: ನೀವು ಹೇಳುತ್ತಿರುವ ವಿಷಯ ಎಷ್ಟು ಗಂಭೀರವಾದದ್ದು ಎಂಬುದನ್ನು ಸಾವಧಾನದಿಂದಲೇ ನಿಮ್ಮ ಸಂಗಾತಿಗೆ ಹೇಳಬಹುದು, ಆದರೆ ನಿಮ್ಮ ಮಾತುಗಳು ನಿಮ್ಮ ಸಂಗಾತಿಯನ್ನು ಕೆರಳಿಸುವಂತಿರಬಾರದು. ನಿಮಗೂ ಜವಾಬ್ದಾರಿ ಇದೆ: ನಿಮ್ಮ ಜವಾಬ್ದಾರಿಯನ್ನು ನೀವು ಅರಿತುಕೊಳ್ಳಿ, ನೀವು ಹೀಗೆ ಮಾತನಾಡುವುದರಿಂದ ನಿಮ್ಮ ಸಂಗಾತಿ ಮನಸ್ಸಿಗೆ ಎಷ್ಟು ನೋವು ಉಂಟಾಗಬಹುದು ಎಂಬ ಅರಿವಿರಲಿ. ಯಾವುದೇ ವಿಷಯವಿರಲಿ, ಸಂಗಾತಿಯದ್ದೇ ತಪ್ಪಿರಲಿ ಅದನ್ನು ಪ್ರೀತಿಯಿಂದಲೇ ಹೇಳಿ.
ಯೋಜನೆ ರೂಪಿಸಿ: ನೀವು ಕೋಪದಲ್ಲಿದ್ದೀರಾ ಯಾವುದೋ ವಿಷಯವನ್ನು ನಿಮ್ಮ ಸಂಗಾತಿಗೆ ಹೇಳಿ ಅವರ ಬಳಿ ಜಗಳವಾಡಲೇಬೇಕು ಎಂದುಕೊಂಡಿದ್ದೀರಾ, ಅಂತಹ ಸಮಯದಲ್ಲಿ ಸ್ವಲ್ಪ ಹೊತ್ತು ಕುಳಿತು ಯೋಚನೆ ಮಾಡಿ, ಸಂಗಾತಿ ಏನು ಬೇರೆಯವರಲ್ಲವಲ್ಲ, ನಿಮ್ಮವರಿಗೆ ನೀವು ದುಃಖ ನೀಡಿದರೆ ಹೇಗೆ ಎಂಬುದರ ಕುರಿತು ಸ್ವಲ್ಪ ಯೋಚಿಸಿ ಬಳಿಕ ನಿರ್ಧಾರ ತೆಗೆದುಕೊಳ್ಳಿ.
ನಿಮ್ಮ ಬಗ್ಗೆ ಅರಿಯಿರಿ: ಪ್ರತಿಯೊಬ್ಬರೂ ತಮ್ಮ ಬಗ್ಗೆ ತಾವು ಅರಿತಾಗ ಅದಕ್ಕಿಂತ ಹೆಚ್ಚಿನದು ಯಾವುದೂ ಇಲ್ಲ. ಹಾಗೆಯೇ ನಿಮ್ಮ ಮನಸ್ಸು ಏನು ಹೇಳುತ್ತದೆ ಹಾಗೆಯೇ ನಿಮ್ಮ ಸಂಗಾತಿಯ ಆಸೆಗಳೇನು ಎಂಬುದನ್ನು ಅರಿಯಿರಿ.
ಚಿಕ್ಕಪುಟ್ಟ ವಿಷಯಗಳೂ ಸಂತಸ ನೀಡಬಲ್ಲದು: ನೀವು ತೋರಿಸುವ ಕಾಳಜಿ, ಪ್ರೀತಿ ಕೆಲವೊಂದು ಸಣ್ಣ ಸಣ್ಣ ವಿಷಯಗಳು ಸಂತಸ ನೀಡಬಲ್ಲದು ಹಾಗೆಯೇ ಸಂಗಾತಿಯ ಅಟೆನ್ಷನ್ ನಿಮ್ಮ ಮೇಲೆ ಬರಬಹುದು.