AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dandruff Problem: ತಲೆಹೊಟ್ಟು, ತುರಿಕೆ ಸಮಸ್ಯೆಯೇ? ಇಲ್ಲಿದೆ ಪರಿಹಾರ

ತಲೆಯ ಹೊಟ್ಟಿನಿಂದಾಗಿ ನಿರಂತರ ತುರಿಕೆಯನ್ನು ಅನುಭವಿಸಬೇಕಾಗುತ್ತದೆ, ಹೇರ್ ಕಲರಿಂಗ್ ಅಥವಾ ಕೂದಲಿನಲ್ಲಿ ಎಣ್ಣೆಯ ಜಿಡ್ಡು ಉಳಿದುಕೊಳ್ಳುವುದು, ಬೆವರಿದಾದ ಆ ಬೆವರಿನಲ್ಲಿ ಧೂಳಿನ ಕಣಗಳು ಸೇರಿಕೊಳ್ಳುವುದರೊಂದಿಗೆ ತಲೆ ಹೊಟ್ಟು ಶುರುವಾಗುತ್ತದೆ.

Dandruff Problem: ತಲೆಹೊಟ್ಟು, ತುರಿಕೆ ಸಮಸ್ಯೆಯೇ? ಇಲ್ಲಿದೆ ಪರಿಹಾರ
Dandruff
TV9 Web
| Edited By: |

Updated on: Jun 30, 2022 | 9:00 AM

Share

ತಲೆಯ ಹೊಟ್ಟಿನಿಂದಾಗಿ ನಿರಂತರ ತುರಿಕೆಯನ್ನು ಅನುಭವಿಸಬೇಕಾಗುತ್ತದೆ, ಹೇರ್ ಕಲರಿಂಗ್ ಅಥವಾ ಕೂದಲಿನಲ್ಲಿ ಎಣ್ಣೆಯ ಜಿಡ್ಡು ಉಳಿದುಕೊಳ್ಳುವುದು, ಬೆವರಿದಾದ ಆ ಬೆವರಿನಲ್ಲಿ ಧೂಳಿನ ಕಣಗಳು ಸೇರಿಕೊಳ್ಳುವುದರೊಂದಿಗೆ ತಲೆ ಹೊಟ್ಟು ಶುರುವಾಗುತ್ತದೆ.

ಕೂದಲಿನ ಬುಡದಲ್ಲಿ ಎಣ್ಣೆ ಇಲ್ಲದೇ ಇದ್ದಾಗ ಕೂಡ ಶಿಲೀಂಧ್ರಗಳ ಸೋಂಕಿನಿಂದ ತಲೆಹೊಟ್ಟಿನ ಸಮಸ್ಯೆ ಕಂಡುಬರುತ್ತದೆ. ತಲೆಹೊಟ್ಟಿನ ಸಮಸ್ಯೆಗೆ ನೀವು ಮನೆಯಲ್ಲಿಯೇ ಕೆಲವೊಂದು ಮನೆಮದ್ದುಗಳನ್ನು ಪಾಲಿಸಬಹುದಾಗಿದೆ. ಆದರೆ ಈ ಮನೆಮದ್ದುಗಳ ಬಳಕೆಯನ್ನು ನೀವು ನಿಯಮಿತವಾಗಿ ಪಾಲಿಸಬೇಕು.

ಆಪಲ್ ಸೈಡರ್ ವಿನೆಗರ್: ಆಲ್ಕಲೈನ್ ವಿನೆಗರ್ ಅಲ್ಲಿರುವ ಆಸಿಡಿಕ್ ಅಂಶವು ವಿನೆಗರ್ ಅನ್ನು ಕೂದಲಿಗೆ ಹಾಕಿ ಮಸಾಜ್ ಮಾಡುವುದರಿಂದ ಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ತೆಂಗಿನ ಎಣ್ಣೆ: ತೆಂಗಿನೆಣ್ಣೆಯಲ್ಲಿ ನೈಸರ್ಗಿಕ ಅಂಶಗಳಿದ್ದು ಇದು ತುರಿಕೆ ಹಾಗೂ ಹೊಟ್ಟನ್ನು ಕಡಿಮೆ ಮಾಡುತ್ತದೆ. ತೆಂಗಿನೆಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಅದರಲ್ಲಿ ಹತ್ತಿಯನ್ನು ಅದ್ದಿ ಹತ್ತಿ ಮೂಲಕ ಕೂದಲಿಗೆ ಹಚ್ಚಿ.

ಬೇಕಿಂಗ್ ಸೋಡಾ: ಬೇಕಿಂಗ್ ಸೋಡಾದ ಜತೆಗೆ ನೀರು ಬೆರೆಸಿ ಕೂದಲಿಗೆ ಹಚ್ಚಿ 15 ನಿಮಿಷಗಳನ್ನು ಬಿಟ್ಟು ಕೂದಲು ತೊಳೆಯುವುದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗಲಿದೆ.

ಯೋಗರ್ಟ್​: ಕೋಲ್ಡ್​ ಯೋಗರ್ಟ್​ ಅನ್ನು ಕೂದಲಿಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ಕಡಿಮೆಯಾಗಲಿದೆ.

ಜೇನುತುಪ್ಪ: ಜೇನು ತುಪ್ಪದಲ್ಲಿ ಆಂಟಿ ಬಯಾಟಿಕ್ಸ್ ಇರುವ ಕಾರಣ ಬ್ಯಾಕ್ಟೀರಿಯಾದಿಂದ ನಿಮ್ಮ ಕೂದಲನ್ನು ದೂರಿಇರಿಸಬಲ್ಲದು.

ನಿಂಬೆ ರಸ: ನಿಂಬೆ ರಸದಲ್ಲಿರುವ ಆ್ಯಸಿಡಿಟಿ ಅಂಶದಿಂದ ತುರಿಕೆ ಕಸಿಮೆಯಾಗಲಿದೆ. ಕೂದಲಿಗೆ ಹಚ್ಚಿ 10 ನಿಮಿಷ ಹಾಗೆಯೇ ಬಿಟ್ಟು ನಂತರ ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಈ ವಿಧಾನ ಬಳಸಿ.

ಲೋಳೆಸರ: ಲೋಳೆಸರ ಅಥವಾ ಅಲೋವೆರಾ ನೈಸರ್ಗಿಕ ತಂಪಿನ ಗುಣಗಳನ್ನು ಹೊಂದಿದ್ದು ಇದು ತುರಿಕೆಯ ನೆತ್ತಿಯನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಅಲೊವೇರಾ ಜೆಲ್ ತೆಗೆದುಕೊಂಡು ಕೂದಲಿನ ಬುಡಕ್ಕೆ ನೆತ್ತಿಗೆ ಹಚ್ಚಿ ಹಾಗೂ 15-20 ನಿಮಿಷ ಹಾಗೆಯೇ ಬಿಡಿ. ಬಳಿಕ ತಲೆ ಸ್ನಾನ ಮಾಡಿ

ಈರುಳ್ಳಿ ರಸ: ಈರುಳ್ಳಿಯು ಆ್ಯಂಟಿಮೈಕ್ರೋಬಿಯಲ್‌ ಅಂಶಗಳು ಹೊಟ್ಟನ್ನು ಕಡಿಮೆ ಮಾಡುತ್ತವೆ. ರಸವನ್ನು ಕೂದಲಿಗೆ ಪೂರ್ತಿಯಾಗಿ ಹಚ್ಚಿ 20 ನಿಮಿಷ ಬಿಡಿ. ನಂತರ ಮೃದು ಶ್ಯಾಂಪೂವಿನಿಂದ ತಲೆಸ್ನಾನ ಮಾಡಿ.

ಈ ಮೇಲಿನ ಮಾಹಿತಿಯು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ