ಭಾರಿ ಮಳೆಯಿಂದ ರಸ್ತೆ ಸಂಚಾರ ಅಸ್ತವ್ಯಸ್ತ: ಬೆಳಗಾವಿ-ಮೀರಜ್ ನಡುವೆ ಹೆಚ್ಚುವರಿ ರೈಲು ಓಡಾಟ
ಭಾರಿ ಮಳೆಗೆ ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಈ ಹಿನ್ನಲೆ ಬೆಳಗಾವಿ ಮತ್ತು ಮಹಾರಾಷ್ಟ್ರದ ಮೀರಜ್ ನಡುವೆ ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗಲು ಬೆಳಗಾವಿ-ಮೀರಜ್ ನಡುವೆ ವಿಶೇಷ ಪ್ಯಾಸೆಂಜರ್ ರೈಲು ಓಡಾಟದ ಸೌಕರ್ಯ ಕಲ್ಪಿಸಿಕೊಡಲಾಗಿದೆ.
ಬೆಳಗಾವಿ, ಜು.30: ಕರ್ನಾಟಕ ಹಲವೆಡೆ ಮಳೆಯ ಅಬ್ಬರ ಜೋರಾಗಿದ್ದು, ಕೆಲವೆಡೆ ಗುಡ್ಡ ಕುಸಿದು ಅಥವಾ ಪ್ರವಾಹದಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ನಾಳೆಯಿಂದ ಆಗಸ್ಟ್ 4ರವರೆಗೆ ಪ್ರತಿ ದಿನ 2 ಟ್ರಿಪ್ ಬೆಳಗಾವಿ-ಮೀರಜ್ ನಡುವೆ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ(V Somanna) ಮಾಹಿತಿ ನೀಡಿದ್ದಾರೆ.
ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡ ಸಚಿವ ವಿ ಸೋಮಣ್ಣ
ಭಾರೀ ಮಳೆಯಿಂದ ರಸ್ತೆಗಳು ಹಾನಿಗೊಳಗಾಗಿರುವ ಕಾರಣ, ಬೆಳಗಾವಿ ಮತ್ತು ಮಹಾರಾಷ್ಟ್ರದ ಮೀರಜ್ ನಡುವೆ ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗಲು ಬೆಳಗಾವಿ-ಮೀರಜ್ ನಡುವೆ ವಿಶೇಷ ಪ್ಯಾಸೆಂಜರ್ ರೈಲು ಓಡಾಟದ ಸೌಕರ್ಯ ಕಲ್ಪಿಸಿಕೊಡಲಾಗಿದೆ.
ವೇಳಾಪಟ್ಟಿ :
ಬೆಳಗಾವಿ-ಮೀರಜ್ ರೈಲು : ಪ್ರತಿದಿನ ಬೆಳಿಗ್ಗೆ 6.00 ಕ್ಕೆ ಹೊರಟು 9.00 ಕ್ಕೆ ಮೀರಜ್…
— V. Somanna (@VSOMANNA_BJP) July 30, 2024
ಇದನ್ನೂ ಓದಿ:ಹಾಸನ: ಶಿರಾಡಿ ಘಾಟ್ನಲ್ಲಿ ಭಾರೀ ಭೂಕುಸಿತ, ಮಣ್ಣಿನಡಿ ಸಿಲುಕಿದ ಹಲವು ವಾಹನಗಳು
ಬೆಳಗಾವಿ ಮತ್ತು ಮಹಾರಾಷ್ಟ್ರದ ಮೀರಜ್ ನಡುವೆ ದೈನಂದಿನ ಪ್ರಯಾಣಿಕರಿಗೆ ಅನುಕೂಲವಾಗಲು ಬೆಳಗಾವಿ-ಮೀರಜ್ ನಡುವೆ ವಿಶೇಷ ಪ್ಯಾಸೆಂಜರ್ ರೈಲು ಓಡಾಟದ ಸೌಕರ್ಯ ಕಲ್ಪಿಸಿಕೊಡಲಾಗಿದೆ ಎಂದಿದ್ದಾರೆ.
ವೇಳಾಪಟ್ಟಿ ಹೀಗಿದೆ
ಬೆಳಗಾವಿ-ಮೀರಜ್ ರೈಲು: ಪ್ರತಿದಿನ ಬೆಳಿಗ್ಗೆ 6.00 ಕ್ಕೆ ಹೊರಟು 9.00 ಕ್ಕೆ ಮೀರಜ್ ತಲುಪಲಿದೆ. ಮರಳಿ ಬೆಳಿಗ್ಗೆ 9.50 ಕ್ಕೆ ಮೀರಜ್’ನಿಂದ ಹೊರಟು ಮಧ್ಯಾಹ್ನ 12.50 ಕ್ಕೆ ಬೆಳಗಾವಿ ತಲುಪಲಿದೆ.
ಬೆಳಗಾವಿ-ಮೀರಜ್ ರೈಲು : ಮಧ್ಯಾಹ್ನ 1.30 ರಿಂದ ಬೆಳಗಾವಿಯಿಂದ ಹೊರಟು ಸಂಜೆ 04.30 ಕ್ಕೆ ಮೀರಜ್ ತಲುಪಲಿದೆ. ಮರಳಿ ಸಂಜೆ 05.35 ಕ್ಕೆ ಮೀರಜ್’ನಿಂದ ಹೊರಟು ರಾತ್ರಿ 08.35 ಕ್ಕೆ ಬೆಳಗಾವಿ ತಲುಪಲಿದೆ.
ನಾಳೆ(ಜುಲೈ 31) ಯಿಂದ ಆಗಸ್ಟ್ 04ರ ವರೆಗೆ ಬೆಳಗಾವಿ-ಮೀರಜ್ ರೈಲು ದಿನಕ್ಕೆ 2 ಬಾರಿ ಓಡಾಟ ನಡೆಸಲಿದೆ. ಪ್ರಯಾಣಿಕರು ಈ ವಿಶೇಷ ರೈಲಿನ ಸದುಪಯೋಗ ಪಡೆಸಿಕೊಳ್ಳಬೇಕೆಂದು ಸಚಿವ ವಿ ಸೋಮಣ್ಣ ಅವರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ