ಲಾಕ್ಡೌನ್ ಎಫೆಕ್ಟ್: ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಎಷ್ಟು ನಷ್ಟ?
ಬೆಳಗಾವಿ: ಕೊರೊನಾ ಮಹಾಮಾರಿಯನ್ನ ತಡೆಯಲು ದೇಶಾದ್ಯಂತ ಮಾರ್ಚ್ 23ರಿಂದ ಲಾಕ್ಡೌನ್ ಘೋಷಿಸಲಾಯಿತು. ಇದು ಧಾರ್ಮಿಕ ಕ್ಷೇತ್ರಗಳ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಇನ್ನು ಉತ್ತರ ಕರ್ನಾಟಕ ಶಕ್ತಿ ದೇವತೆ ಸವದತ್ತಿಯ ಯಲ್ಲಮ್ಮ ಟ್ರಸ್ಟ್ಗೂ ನಷ್ಟವಾಗಿದೆ. ಲಾಕ್ಡೌನ್ನಿಂದ ಭಕ್ತರು ಬರ್ತಿಲ್ಲ: ಹೌದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಕ್ತಿ ಕೇಂದ್ರ ರೇಣುಕಾ ಯಲ್ಲಮ್ಮ ಕ್ಷೇತ್ರ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಭಕ್ತರಿದ್ದಾರೆ. ಇಲ್ಲಿ ಹುಣ್ಣಿಮೆಯನ್ನು ಜಾತ್ರೆಯ ಮಾದರಿಯಲ್ಲೇ ಆಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಲಕ್ಷಾಂತರ […]
ಬೆಳಗಾವಿ: ಕೊರೊನಾ ಮಹಾಮಾರಿಯನ್ನ ತಡೆಯಲು ದೇಶಾದ್ಯಂತ ಮಾರ್ಚ್ 23ರಿಂದ ಲಾಕ್ಡೌನ್ ಘೋಷಿಸಲಾಯಿತು. ಇದು ಧಾರ್ಮಿಕ ಕ್ಷೇತ್ರಗಳ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಇನ್ನು ಉತ್ತರ ಕರ್ನಾಟಕ ಶಕ್ತಿ ದೇವತೆ ಸವದತ್ತಿಯ ಯಲ್ಲಮ್ಮ ಟ್ರಸ್ಟ್ಗೂ ನಷ್ಟವಾಗಿದೆ.
ಲಾಕ್ಡೌನ್ನಿಂದ ಭಕ್ತರು ಬರ್ತಿಲ್ಲ: ಹೌದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಕ್ತಿ ಕೇಂದ್ರ ರೇಣುಕಾ ಯಲ್ಲಮ್ಮ ಕ್ಷೇತ್ರ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಭಕ್ತರಿದ್ದಾರೆ. ಇಲ್ಲಿ ಹುಣ್ಣಿಮೆಯನ್ನು ಜಾತ್ರೆಯ ಮಾದರಿಯಲ್ಲೇ ಆಚರಣೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಕೂಡ ಸೇರುತ್ತಾರೆ. ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಆದ್ರೇ ಲಾಕ್ಡೌನ್ನಿಂದಾಗಿ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಿಲ್ಲ.
ಮಾರ್ಚ್ ತಿಂಗಳಲ್ಲಿ 4.48 ಕೋಟಿ, ಏಪ್ರಿಲ್ ತಿಂಗಳಲ್ಲಿ 78.68 ಲಕ್ಷ ಹಾಗೂ ಮೇ ತಿಂಗಳಲ್ಲಿ 71 ಲಕ್ಷ ರೂಪಾಯಿ ಹಾನಿ ಸಂಭವಿಸಿದೆ. ಒಟ್ಟು ದೇವಸ್ಥಾನಕ್ಕೆ 6 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ದೇವಸ್ಥಾನ ಟ್ರಸ್ಟ್ನ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ತಿಳಿಸಿದ್ದಾರೆ.
ಸಂಬಳ ಕಡಿತ ಮಾಡಿಲ್ಲ: ದೇವಸ್ಥಾನಕ್ಕೆ ಬರಬೇಕಿದ್ದ ಆದಾಯ ಬರದ ಕಾರಣ ಯಾರ ಸಂಬಳ ಕಡಿತ ಮಾಡಿಲ್ಲ. ದೇವಸ್ಥಾನ ಬಂದ್ ಇದ್ರೂ ನಿತ್ಯವೂ ಅರ್ಚಕರು ಕೇವಲ ಸಾಂಕೇತಿಕವಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ದೇವಸ್ಥಾನದಲ್ಲಿ 80ಕ್ಕೂ ಹೆಚ್ಚು ಜನ ಅರ್ಚಕರು ಹಾಗೂ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಇವರ ಸಂಬಳಕ್ಕೆ ಯಾವುದೇ ಕಡಿತವಿಲ್ಲ. ದೇವಸ್ಥಾನದ ಟ್ರಸ್ಟ್ ಹೆಸರಲ್ಲಿ ಇಟ್ಟಿರುವ ಠೇವಣಿ ಹಣದಿಂದ ಬಂದಿರೋ ಬಡ್ಡಿಯಲ್ಲಿ ಎಲ್ಲರೂ ವೇತನ ನೀಡಲಾಗುತ್ತಿದೆ.
ಇನ್ನೂ ದೇವಸ್ಥಾನದ ಆವರಣದಲ್ಲಿದ್ದ ಅಂಗಡಿಗಳಿಂದಲೂ ದೇವಸ್ಥಾನಕ್ಕೆ ಬಾಡಿಗೆ ಹಣ ಬರುತ್ತಿತ್ತು. ಸದ್ಯ ದೇವಸ್ಥಾನ ಬಂದ್ ಹಿನ್ನೆಲೆಯಲ್ಲಿ ಅಂಗಡಿಗಳಲ್ಲೂ ವ್ಯಾಪಾರ ಇಲ್ಲ. ಹೀಗಾಗಿ ಎಲ್ಲ ಅಂಗಡಿದಾರರು ಹಾನಿಯಲ್ಲಿದ್ದು ಬಾಡಿಗೆಯನ್ನ ತೆಗೆದುಕೊಳ್ಳಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ತಮಗೂ ಸಹಾಯಧನ ನೀಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.