ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಕಂದಮ್ಮಗಳು ನಿಗೂಢ ಸಾವು; ಪೊಲೀಸರಿಂದ ತನಿಖೆ ಆರಂಭ

ಮೂರು ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇದೀಗ ಮೃತಪಟ್ಟಿವೆ. ಮೂರು ಪುಟ್ಟ ಮಕ್ಕಳ ಸಾವಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಕಂದಮ್ಮಗಳು ನಿಗೂಢ ಸಾವು; ಪೊಲೀಸರಿಂದ ತನಿಖೆ ಆರಂಭ
ಮೃತಪಟ್ಟಿರುವ ಪವಿತ್ರಾ, ಮಧು ಮತ್ತು ಚಿಕಿತ್ಸೆ ಪಡೆಯುತ್ತಿದ್ದ ಚೇತನ ಪೂಜಾರಿ
Edited By: sandhya thejappa

Updated on: Jan 16, 2022 | 2:05 PM

ಬೆಳಗಾವಿ: ಜಿಲ್ಲಾಸ್ಪತ್ರೆ ಬಿಮ್ಸ್​ನಲ್ಲಿ (BIMS) ಮೂರು ಮಕ್ಕಳು ನಿಗೂಢವಾಗಿ ಮೃತಪಟ್ಟಿವೆ. 13 ತಿಂಗಳ ಮಗು ಪವಿತ್ರಾ ಹುಲಗುರ್, 14 ತಿಂಗಳ ಮಗು ಮಧು ಉಮೇಶ್ ಕುರಗುಂದಿ ಮತ್ತು ಒಂದೂವರೆ ವರ್ಷದ ಚೇತನ ಪೂಜಾರಿ ಎಂಬ ಮಗು ಸಾವನ್ನಪ್ಪಿದೆ. ಮೂರು ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇದೀಗ ಮೃತಪಟ್ಟಿವೆ. ಮೂರು ಪುಟ್ಟ ಮಕ್ಕಳ ಸಾವಿಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ಆರಂಭವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕಾರಣ ಹೊರ ಬೀಳಲಿದೆ. ಮಕ್ಕಳ ಸಾವಿನ ಬಗ್ಗೆ ಕುಲಗೋಡ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿನ್ನೆ (ಜ.15) ಒಂದು ಮಗು ಮೃತಪಟ್ಟಿತ್ತು. ಇಂದು ಮತ್ತೆ ಎರಡು ಮಗು ಸಾವನ್ನಪ್ಪಿವೆ. ಬಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಸದ್ಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಮಕ್ಕಳಿಗೆ ರುಬೆಲ್ಲಾ ವ್ಯಾಕ್ಸಿನ್ ನೀಡಲಾಗಿತ್ತು. ಜ.12ರಂದು ಆರೋಗ್ಯ ಇಲಾಖೆ ಸಿಬ್ಬಂದಿ ರುಬೆಲ್ಲಾ ವ್ಯಾಕ್ಸಿನ್ ನೀಡಿದ್ದರು. ಇಂಜೆಕ್ಷನ್ ಪಡೆದ ಬಳಿಕ ವಾಂತಿ ಭೇದಿ ಆರಂಭವಾಯಿತು. ಕೂಡಲೇ ನಾವು ಆಸ್ಪತ್ರೆಗೆ ದಾಖಲು ಮಾಡಿದ್ರೂ ಮಕ್ಕಳು ಬದುಕಲಿಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಮಕ್ಕಳು ಸಾವನ್ನಪ್ಪಿವೆ ಅಂತ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ರುಬೆಲ್ಲ ವ್ಯಾಕ್ಸಿನ್ ಪಡೆದ ಬಳಿಕ ಮಕ್ಕಳು ಸಾವನ್ನಪ್ಪಿವೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಇದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಏನಾಗಿದೆ ಅಂತ ನೋಡಿಕೊಂಡು ಮಾತಾಡುತ್ತೇನೆ ಅಂತ ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. ಕ್ಲೀನಿಕಲ್ ಎಕ್ಸಾಮಿನೇಷನ್ ಮಾಡಬೇಕಾಗುತ್ತದೆ. ಮಾಡುತ್ತೇವೆ. ಪೋಸ್ಟ್ ಮಾರ್ಟಂ ಮಾಡಿದ ಬಳಿಕ ಸ್ಪಷ್ಟ ಕಾರಣ ಗೊತ್ತಾಗಲಿದೆ. ಲಸಿಕೆಯಿಂದಲೇ ಸಾವಾಗಿದೆಯಾ ಎಂಬ ವಿಚಾರ ಬಳಿಕ ತಿಳಿಯುತ್ತದೆ ಅಂತ ಹೇಳಿದರು.

ಇದನ್ನೂ ಓದಿ

ಅತಿಯಾದ ಹಿಂಸೆ, ಹಸಿಬಿಸಿ ಸೀನ್​ ಕಂಡು ಎಲ್ಲರೂ ಶಾಕ್​; ಅಂಥ ದೃಶ್ಯಗಳಿಗೆ ಕತ್ತರಿ, ಟ್ರೇಲರ್​ ಡಿಲೀಟ್

ಮತ್ತಿಕೆರೆಯ ಚೌಡೇಶ್ವರಿ ಬಸ್ ನಿಲ್ದಾಣದ ಬಳಿ 25 ಮರ ಕಟಾವು?; ಏಕಾಏಕಿ ಮರ ಕಡಿಯಲಾಗಿದೆ ಎಂದು ಸಾರ್ವಜನಿಕರ ಆಕ್ರೋಶ

Published On - 1:12 pm, Sun, 16 January 22

TV9 Web

TV9 Kannada

Read More
Loading...
Unable to load recommendations.
Follow Us