ಅತಿಯಾದ ಹಿಂಸೆ, ಹಸಿಬಿಸಿ ಸೀನ್ ಕಂಡು ಎಲ್ಲರೂ ಶಾಕ್; ಅಂಥ ದೃಶ್ಯಗಳಿಗೆ ಕತ್ತರಿ, ಟ್ರೇಲರ್ ಡಿಲೀಟ್
Nay Varan Bhat Loncha Kon Nay Koncha: ಈ ಸಿನಿಮಾದ ಹಸಿಬಿಸಿ ದೃಶ್ಯಗಳನ್ನು ನೋಡಿ ಪ್ರೇಕ್ಷಕರಿಗೆ ಶಾಕ್ ಆಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಈ ಟ್ರೇಲರ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಸ್ತುತ ಸಂದರ್ಭದಲ್ಲಿ ಚಿತ್ರರಂಗದ ವಹಿವಾಟು ಕುಸಿದಿದೆ. ಕೊರೊನಾ ವೈರಸ್ ಮೂರನೇ ಅಲೆಯ ಕಾರಣದಿಂದ ಅನೇಕ ಕಡೆಗಳಲ್ಲಿ ಚಿತ್ರಮಂದಿರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಶೇ.50ರಷ್ಟು ಆಸನ ಮಿತಿ ನಿರ್ಬಂಧದ ಕಾರಣದಿಂದ ಹೆಚ್ಚಿನ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಇದರ ನಡುವೆಯೂ ಮರಾಠಿಯ (Marati Film) ಚಿತ್ರವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಸಿಬಿಸಿ ದೃಶ್ಯಗಳು, ಅತಿಯಾದ ಹಿಂಸೆಯನ್ನು ವೈಭವೀಕರಿಸುವ ಸೀನ್ಗಳ ಕಾರಣದಿಂದ ಈ ಸಿನಿಮಾ ಎಲ್ಲರ ಕಣ್ಣು ಕುಕ್ಕುತ್ತಿದೆ. ಅಂದಹಾಗೆ, ಈ ಚಿತ್ರದ ಹೆಸರು ‘ನಾಯ್ ವರಣ್ ಬಾತ್ ಲೋಂಚ ಕೋನ್ ನಾಯ್ ಕೋಂಚ’. ಹತ್ತು ಹಲವು ಕಾರಣಗಳಿಂದಾಗಿ ಈ ಸಿನಿಮಾದ ಬಗ್ಗೆ ಎಲ್ಲ ಕಡೆ ಚರ್ಚೆ ಆಗುತ್ತಿದೆ. ಸೆನ್ಸಾರ್ ಮಂಡಳಿಯವರು (Censor Board) ಅನೇಕ ದೃಶ್ಯಗಳಿಗೆ ಕತ್ತರಿ ಹಾಕಿದ ನಂತರವೇ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಆದರೂ ಸಹ ಈ ಚಿತ್ರದಲ್ಲಿನ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಅಚ್ಚರಿಪಟ್ಟಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಸಿನಿಮಾದ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಆ ಮೂಲಕ ಕೊರೊನಾ ಭೀತಿ ನಡುವೆಯೂ ‘ನಾಯ್ ವರಣ್ ಬಾತ್ ಲೋಂಚ ಕೋನ್ ನಾಯ್ ಕೋಂಚ’ (Nay Varan Bhat Loncha Kon Nay Koncha) ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿದೆ ಎಂಬುದು ಗಮನಾರ್ಹ ಸಂಗತಿ.
ಈ ಚಿತ್ರಕ್ಕೆ ಮಹೇಶ್ ವಿ. ಮಂಜ್ರೇಕರ್ ನಿರ್ದೇಶನ ಮಾಡಿದ್ದಾರೆ. ಕಾಶ್ಮೀರಾ ಷಾ, ಮಹೇಶ್ ಹಲ್ದೀಕರ್, ವರದ್ ನಾಗ್ವೇಕರ್, ಶಶಾಂಕ್ ಶಿಂದೆ, ಛಾಯಾ ಕದಮ್, ಪ್ರೇಮ್ ಧರ್ಮಾಧಿಕಾರಿ ಮುಂತಾದವರು ಅಭಿನಯಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಯೂಟ್ಯೂಬ್ನಲ್ಲಿ ‘ನಾಯ್ ವರಣ್ ಬಾತ್ ಲೋಂಚ ಕೋನ್ ನಾಯ್ ಕೋಂಚ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿತ್ತು. ಅದರಲ್ಲಿ ಕ್ರೌರ್ಯ ಹಾಗೂ ಹಸಿಬಿಸಿ ದೃಶ್ಯಗಳನ್ನು ನೋಡಿ ಪ್ರೇಕ್ಷಕರಿಗೆ ಶಾಕ್ ಆಗಿದ್ದಂತೂ ನಿಜ. ಅಷ್ಟೇ ಅಲ್ಲ, ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಈ ಟ್ರೇಲರ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿತು. ಪರಿಣಾಮವಾಗಿ, ಈ ಟ್ರೇಲರ್ ಅನ್ನು ಡಿಲೀಟ್ ಮಾಡಿಸಲಾಗಿದೆ!
ಬಾಲನಟರು ಮಹಿಳೆಯರ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುವಂತಹ ದೃಶ್ಯಗಳು, ಅವಾಚ್ಯ ಪದಗಳಿಂದ ತುಂಬಿರುವ ಸಂಭಾಷಣೆಗಳು, ಎಂಥವರನ್ನೂ ಬೆಚ್ಚಿ ಬೀಳಿಸುವಂತಹ ಕ್ರೈಂ ಸೀನ್ಗಳು ಈ ಸಿನಿಮಾದಲ್ಲಿ ಇವೆ. ಹಾಗಾಗಿ ಅನೇಕ ಕಡೆಗಳಲ್ಲಿ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಸದಸ್ಯರು ಕತ್ತರಿ ಹಾಕಿ, ‘ಎ’ ಪ್ರಮಾಣಪತ್ರ ನೀಡಿದ್ದಾರೆ. ಆದರೂ ಕೂಡ ಈ ಸಿನಿಮಾ ತುಂಬ ರಗಡ್ ಆಗಿದೆ ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ವ್ಯಕ್ತವಾಗಿದೆ.
ಜ.14ರಂದು ಸಿನಿಮಾ ರಿಲೀಸ್ ಆಗಿದೆ. ಒಂದು ದಿನ ಮುಂಚೆ, ಅಂದರೆ ಜ.13ರಂದು ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆಗಳನ್ನು ಮಾಡಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡಕ್ಕೆ ಕೊಂಚ ಅಡೆತಡೆ ಆಯಿತು. ಹಾಗಾಗಿ ಶುಕ್ರವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಕೆಲವು ಥಿಯೇಟರ್ಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣಲಿಲ್ಲ. ಬಳಿಕ ಎಲ್ಲ ಕಡೆಗಳಲ್ಲಿ ಉತ್ತಮ ರೆನ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ:
‘ಹೂ ಅಂತೀಯಾ ಮಾವ..’ ರೀತಿ ಹವಾ ಸೃಷ್ಟಿಸಲು ಹೋಗಿ ವಿವಾದ ಹುಟ್ಟು ಹಾಕಿದ ‘ಆಚಾರ್ಯ’ ಸಿನಿಮಾ ಐಟಂ ಸಾಂಗ್
ಮುದ್ದಿಸುವ, ತಬ್ಬಿಕೊಳ್ಳುವ ದೃಶ್ಯಗಳನ್ನು ಟಿವಿಯಲ್ಲಿ ತೋರಿಸುವಂತಿಲ್ಲ; ಪಾಕಿಸ್ತಾನಿ ಕಿರುತೆರೆಗೆ ಸೆನ್ಸಾರ್ ಬರೆ
Published On - 1:16 pm, Sun, 16 January 22