‘ಹೂ ಅಂತೀಯಾ ಮಾವ..’ ರೀತಿ ಹವಾ ಸೃಷ್ಟಿಸಲು ಹೋಗಿ ವಿವಾದ ಹುಟ್ಟು ಹಾಕಿದ ‘ಆಚಾರ್ಯ’ ಸಿನಿಮಾ ಐಟಂ ಸಾಂಗ್​

ಎಲ್ಲವೂ ಅಂದುಕೊಂಡಂತೆ ನಡೆದರೆ ‘ಆಚಾರ್ಯ’ ಸಿನಿಮಾ ಫೆಬ್ರವರಿ 4ಕ್ಕೆ ತೆರೆಗೆ ಬರಲಿದೆ. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ ಹೋದರೂ ಅಚ್ಚರಿ ಏನಿಲ್ಲ. ಆದರೆ, ಚಿತ್ರತಂಡ ಸುಮ್ಮನೆ ಕುಳಿತಿಲ್ಲ. ನಿಧಾನಕ್ಕೆ ಪ್ರಚಾರ ಆರಂಭಿಸಿದೆ.

‘ಹೂ ಅಂತೀಯಾ ಮಾವ..’ ರೀತಿ ಹವಾ ಸೃಷ್ಟಿಸಲು ಹೋಗಿ ವಿವಾದ ಹುಟ್ಟು ಹಾಕಿದ ‘ಆಚಾರ್ಯ’ ಸಿನಿಮಾ ಐಟಂ ಸಾಂಗ್​
ಚಿರಂಜೀವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 07, 2022 | 7:01 AM

ಸ್ಟಾರ್​ ನಟರ ಸಿನಿಮಾದಲ್ಲಿ ಬರುವ ಐಟಂ ಸಾಂಗ್​ಗೆ ಲಕ್ಷಲಕ್ಷ ಹಣ ಖರ್ಚು ಮಾಡುತ್ತಾರೆ ನಿರ್ಮಾಪಕರು. ಸಿನಿಮಾಗೆ ಮೈಲೇಜ್​ ಕೊಡೋಕೆ ಈ ಸಾಂಗ್​ ಕೂಡ ಕಾರಣವಾಗಬಹುದು. ಇತ್ತೀಚೆಗೆ ತೆರೆಕಂಡ ‘ಪುಷ್ಪ’  (Pushpa Movie) ಸಿನಿಮಾ ಇದಕ್ಕೆ ಉತ್ತಮ ಉದಾಹರಣೆ. ಈ ಚಿತ್ರದಲ್ಲಿ ಸಮಂತಾ (Samantha) ಹೆಜ್ಜೆ ಹಾಕಿದ ‘ಹೂ ಅಂತೀಯಾ ಮಾವ, ಊಹೂ ಅಂತೀಯಾ ಮಾವ’ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಚಿತ್ರದಿಂದ ಸಿನಿಮಾದ ಹೈಪ್​ ಹೆಚ್ಚಿತ್ತು. ಇದೇ ರೀತಿ ಹೈಪ್​ ಸೃಷ್ಟಿ ಮಾಡುವ ಭರದಲ್ಲಿ ಚಿರಂಜೀವಿ ನಟನೆಯ ‘ಆಚಾರ್ಯ’  (Acharya) ಚಿತ್ರ ವಿವಾದ ಸೃಷ್ಟಿ ಮಾಡಿದೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ‘ಆಚಾರ್ಯ’ ಸಿನಿಮಾ ಫೆಬ್ರವರಿ 4ಕ್ಕೆ ತೆರೆಗೆ ಬರಲಿದೆ. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ ಹೋದರೂ ಅಚ್ಚರಿ ಏನಿಲ್ಲ. ಆದರೆ, ಚಿತ್ರತಂಡ ಸುಮ್ಮನೆ ಕುಳಿತಿಲ್ಲ. ನಿಧಾನಕ್ಕೆ ಪ್ರಚಾರ ಆರಂಭಿಸಿದೆ. ಇತ್ತೀಚೆಗೆ ಟೀಸರ್ ರಿಲೀಸ್​ ಮಾಡುವ ಮೂಲಕ ಸಿನಿಮಾದ ನಿರೀಕ್ಷೆಯನ್ನು ಹೆಚ್ಚಿಸುವ ಕೆಲಸವನ್ನು ಚಿತ್ರತಂಡ ಮಾಡಿತ್ತು. ಅದೇ ರೀತಿ ಈಗ ಚಿತ್ರತಂಡದ ವಿಶೇಷ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಈಗ ವಿವಾದ ಅಂಟಿದೆ.

‘ಸಾನಾ ಕಷ್ಟಂ..​’ ಲಿರಿಕಲ್​ ಸಾಂಗ್​ ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ಆರ್​ಎಂಪಿ ವೈದ್ಯರಿಗೆ ನೋವು ತರುವ ರೀತಿಯಲ್ಲಿ ಲಿರಿಕ್ಸ್​ ಬರೆಯಲಾಗಿದೆ. ‘ಮಹಿಳೆಯರನ್ನು ಸ್ಪರ್ಶಿಸುವ ಅವಕಾಶವನ್ನು ಪಡೆಯಲು ಹುಡುಗರು RMP ವೈದ್ಯರಾಗುತ್ತಿದ್ದಾರೆ’ ಎನ್ನುವ ಸಾಲಿದೆ. ಇದಕ್ಕೆ ತೆಲಂಗಾಣ ವೈದ್ಯರು ದೂರು ದಾಖಲು ಮಾಡಿದ್ದಾರೆ.

ಆಚಾರ್ಯ ಹೆಸರಿನ ಪಾತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಶೂಟಿಂಗ್ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ನಿಂತಿದ್ದವು. ಕೊವಿಡ್​ ಅಬ್ಬರ ಕಡಿಮೆ ಆದ ನಂತರದಲ್ಲಿ ವೇಗವಾಗಿ ಸಿನಿಮಾ ಶೂಟಿಂಗ್​ ಪೂರ್ಣಗೊಳಿಸಲಾಗಿದೆ. ವಿದ್ಯಾರ್ಥಿಗಳ ನಾಯಕ ಸಿದ್ಧ ಹೆಸರಿನ ಪಾತ್ರದಲ್ಲಿ ರಾಮ್​ ಚರಣ್​ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ರಾಮ್​ ಚರಣ್​ ಈ ಚಿತ್ರದಲ್ಲಿ ಹೆಚ್ಚು ಹೊತ್ತು ಕಾಣಿಸಿಕೊಳ್ಳುವುದಿಲ್ಲ. ಇದೊಂದು ಅತಿಥಿ ಪಾತ್ರ.

ಇದನ್ನೂ ಓದಿ: ಚಿರಂಜೀವಿ ಅಭಿಮಾನಿಗಳು ಆ.22ರ ಮೇಲೆ ಕಣ್ಣು ಇಟ್ಟಿರೋದು ಯಾಕೆ? ನಿರೀಕ್ಷೆ ಹೆಚ್ಚಿಸಿದ ‘ಆಚಾರ್ಯ’

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ