Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂದಾನಗರಿ ಬೆಳಗಾವಿಯಲ್ಲಿ ಕಾಡಾನೆ ಪ್ರತ್ಯೇಕ್ಷ; ಹರಸಾಹಸಪಟ್ಟು ಕಾಡಿಗಟ್ಟಿದ ಅರಣ್ಯ ಇಲಾಖೆ

ಕುಂದಾನಗರಿ ಬೆಳಗಾವಿಯಲ್ಲಿ ಬೆಳ್ಳಂ ಬೆಳಗ್ಗೆ ಕಾಡಾನೆ ಪ್ರತ್ಯೇಕವಾಗಿತ್ತು. ಒಂಟಿ ಸಲಗ ಕಂಡು ಜನರು ಗಾಭರಿಗೊಂಡಿದ್ದರು. ಬಳಿಕ ಅರಣ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟು ಮತ್ತೆ ಕಾಡಿಗೆ ಅಟ್ಟಿದ್ದಾರೆ. ಸತತ ಆರು ಗಂಟೆ ಕಾರ್ಯಾಚರಣೆ ಬಳಿಕ ಒಂಟಿ ಸಲಗ ಸುರಕ್ಷಿತ ನಾಡಿನಿಂದ ಕಾಡಿಗೆ ತೆರಳಿದ್ದಾನೆ.

Follow us
Sahadev Mane
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 01, 2024 | 8:10 PM

ಬೆಳಗಾವಿ, ಮಾ.01: ಕುಂದಾನಗರಿ ಬೆಳಗಾವಿ(Belagavi)ಯಲ್ಲಿ ಇಂದು(ಮಾ.01) ಮಹಾರಾಷ್ಟ್ರ ಕಾಡಿನಿಂದ ಬಂದಿದ್ದ ಗಜರಾಜ ಬೆಳ್ಳಂ ಬೆಳಗ್ಗೆ ಪ್ರತ್ಯಕ್ಷನಾಗಿದ್ದ. ಬೆಳಗಾವಿಯ ವೈಭವ ನಗರದಲ್ಲಿ ಮೊದಲಿಗೆ ಕಾಡಾನೆಯನ್ನ(Wild Elephant) ಜನರು ನೋಡಿದ್ದಾರೆ. ತಕ್ಷಣವೇ ಬೆಳಗಾವಿ ಎಪಿಎಂಸಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಇತ್ತ ಪೊಲೀಸರು ತಕ್ಷಣ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಬರುವುದರಲ್ಲಿ ಒಂಟಿ ಸಲಗ ಶಾಹು ನಗರದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಅಲ್ಲಿಂದ ಆನೆ ನಡೆದಿದ್ದೇ ದಾರಿ ಎಂಬಂತೆ ಹೋಲಗದ್ದೆ, ನಗರ ಪ್ರದೇಶದಲ್ಲಿ ಹೆಜ್ಜೆ ಹಾಕುತ್ತಾ ಸಾಗಿದ್ದಾನೆ. ಯಾವಾಗ ಕಾಡಾನೆ ಮತ್ತೆ ಸಾರ್ವಜನಿಕ ಪ್ರದೇಶದತ್ತ ಮುಖ ಮಾಡಿತೋ, ಅವಾಗ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಸರಿದಾರಿಗೆ ತಂದಿದ್ದಾರೆ.

ದಾರಿ ಮಧ್ಯೆ ಬಂದ ಬೈಕ್, ವಾಟರ್ ಟ್ಯಾಂಕ್, ಹೋದಲ್ಲಿನ ಬೆಳೆಗಳನ್ನ ನಾಶ ಮಾಡುತ್ತಾ ಸಾಗಿದ್ದಾನೆ. ಕಂಗ್ರಾಳಿ ಅಲತಗಾ ಮಧ್ಯೆ ಬರುತ್ತಿದ್ದಂತೆ ಕೆರಳಿದ ಗಜರಾಜ್, ಅರಣ್ಯ ಇಲಾಖೆ ಸಿಬ್ಬಂದಿಯನ್ನ ಬೆನ್ನಟ್ಟಿ ಹಿಮ್ಮೆಟ್ಟಿಸಿದ್ದಾನೆ. ಇತ್ತ ಆನೆ ಬಂದ ಸುದ್ದಿ ಹರಡುತ್ತಿದ್ದಂತೆ ನಗರದ ಜನ ಸೇರಿ ಗ್ರಾಮೀಣ ಭಾಗದ ಜನರು ಆನೆ ನೋಡಲು ಅದನ್ನ ಹಿಂಬಾಲಿಸಿಕೊಂಡು ಹೊರಟರು. ತಕ್ಷಣ ಅಲರ್ಟ್ ಆದ ಪೊಲೀಸರು ಜನರು ಆನೆ ಬಳಿ ಹೋಗದಂತೆ ನೋಡಿಕೊಂಡಿದ್ದಾರೆ.

ಇದನ್ನೂ ಓದಿ:ಒಂಟಿ ಕಾಡಾನೆ ದಾಂಧಲೆ: ಆಶಾ ಕಾರ್ಯಕರ್ತೆ ಸೇರಿದಂತೆ ಇಬ್ಬರು ಮಹಿಳೆಯರು, ಮೂರು ಹಸು ದಾರುಣ ಸಾವು

ಇನ್ನು ಕಾಡಿನಿಂದ ನಾಡಿಗೆ ಬಂದ ಕಾಡಾನೆ ನೀರಿಗಾಗಿ ಆರಂಭದಲ್ಲಿ ಪರದಾಡಿತು. ಜಮೀನೊಂದರಲ್ಲಿದ್ದ ನೀರಿನ ಸಿಂಟೆಕ್ಸ್ ಉರುಳಿಸಿ ನೀರು ಕುಡಿಯಲು ಯತ್ನಿಸಿತು. ನೀರು ಸಿಗದಿದ್ದಾಗ ಅಲ್ಲಿಂದ ಮತ್ತೆ ಜಮೀನಿನತ್ತ ಮುಖ ಮಾಡಿತು. ಒಂಟಿ ಸಲಗ ಹೋಗುವುದನ್ನ ಕಂಡ ಕೆಲವರು ಭಯಭೀತಿಯಿಂದ ಮನೆಯಿಂದ ಹೊರಗೆ ಬರಲಿಲ್ಲ. ಈ ಮಧ್ಯೆ ಕಂಗ್ರಾಳಿ ಬಳಿ ಗಜರಾಜ ಸ್ನಾನ ಮಾಡೋ ದೃಶ್ಯಗಳು ಅಂತೂ ಮನಹೋಕವಾಗಿತ್ತು. ಪೊಲೀಸ್ ಮತ್ತು ಅರಣ್ಯ ಇಲಾಖೆ 60 ಜನ ಸಿಬ್ಬಂದಿ ತಂಡವು ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಬೆಳಗಾವಿ ಶಾಹು ನಗರದಿಂದ ಮಹಾರಾಷ್ಟ್ರ ಕೋಣವಾಡ ಗ್ರಾಮದ ಅರಣ್ಯದವರೆಗೂ ಬೆನ್ನಟ್ಟಿ ಕಾಡಾನೆಯನ್ನ ಮರಳಿ ಗೂಡಿಗೆ ಸೇರಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ