ಹತ್ಯೆಗೆ ಸುಪಾರಿ: ಗಂಡನ ಕೊಲೆಯನ್ನು ವಿಡಿಯೋ ಕಾಲ್​ನಲ್ಲಿ ನೋಡಿ ಆನಂದಪಟ್ಟ ಹೆಂಡ್ತಿ!

ಸಂಗಾತಿಗಳಿಬ್ಬರ ನಡುವೆ ಬಾಂಧವ್ಯವನ್ನು ಈ ಸಣ್ಣ ಪುಟ್ಟ ವಿಚಾರಗಳನ್ನು ಹಾಳು ಮಾಡುತ್ತವೆ. ಹೀಗಾಗಿ ದಂಪತಿಗಳ ನಡುವಿನ ಬಾಂಧವ್ಯವು ಗಟ್ಟಿಯಾಗಿರಬೇಕಾದ್ರೆ ಈ ಕೆಲವು ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡಬೇಕು. ಆದ್ರೆ, ಇಲ್ಲೋರ್ವ ಪತ್ನಿ ಗಂಡನ ಹತ್ಯಗೆ ಸುಪಾರಿ ನೀಡಿದ್ದಾಳೆ. ಅಲ್ಲದೇ ಗಂಡನನ್ನು ಕೊಲೆ ಮಾಡುವುದನ್ನು ವಾಟ್ಸಪ್ ವಿಡಿಯೋ ಕಾಲ್​​​ ಮೂಲಕ ನೋಡಿ ಆನಂದಪಟ್ಟಿದ್ದಾಳೆ. ಪ್ರಪಂಚದಲ್ಲಿ ಎಂಥ ಜನರು ಇರ್ತಾರೆ ನೀವೇ ನೋಡಿ.

ಹತ್ಯೆಗೆ ಸುಪಾರಿ: ಗಂಡನ ಕೊಲೆಯನ್ನು ವಿಡಿಯೋ ಕಾಲ್​ನಲ್ಲಿ ನೋಡಿ ಆನಂದಪಟ್ಟ ಹೆಂಡ್ತಿ!
Belagavi Supari Murder
Updated By: ರಮೇಶ್ ಬಿ. ಜವಳಗೇರಾ

Updated on: Apr 05, 2025 | 3:08 PM

ಬೆಳಗಾವಿ, (ಏಪ್ರಿಲ್ 05): ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ ತಾಲೂಕಿನ ಗಾಡಿಕೊಪ್ಪ ಗ್ರಾಮದ ಬಳಿ ಏಪ್ರಿಲ್ 2ರಂದು ನಡೆದಿದ್ದ ವ್ಯಕ್ತಿ ಕೊಲೆ ಪ್ರಕರಣಕ್ಕೆ (Murder Case) ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಬೇರೊಬ್ಬನ ವ್ಯಕ್ತಿ ಜೊತೆ ಸರಸ ಸಲ್ಲಾಪಕ್ಕಾಗಿ ಕಟ್ಟಿಕೊಂಡ ಗಂಡನನ್ನೇ ಹೆಂಡ್ತಿ (Wife) ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ. ಹೌದು… ಶೈಲಾ ಎನ್ನುವ ಮಹಿಳೆ ಪ್ರಿಯಕರ ರುದ್ರಪ್ಪ ಹೊಸೆಟ್ಟಿ ಎನ್ನುವಾತನಿಗೆ ಸುಪಾರಿ ನೀಡಿ ಗಂಡ (Husband) ಬಲೋಗಿ ಗ್ರಾಮದ ಶಿವನಗೌಡ ಪಾಟೀಲ್​ನನ್ನು (43) ಕೊಲೆ ಮಾಡಿಸಿದ್ದಾಳೆ. ಅಷ್ಟೇ ಅಲ್ಲ ಗಂಡನನ್ನು ಕೊಲೆ ಮಾಡುತ್ತಿರುವ ದೃಶ್ಯವನ್ನು ವಾಟ್ಸಪ್​ ಕಾಲ್​ನಲ್ಲಿ ಲೈವ್ ನೋಡಿದ್ದಾಳೆ. ಬಳಿಕ ತನಗೆ ಏನು ಗೊತ್ತಿಲ್ಲವೆಂದು ಗಂಡನ ಮೃತದೇಹದ ಮೇಲೆ ಬಿದ್ದು ಗೋಳಾಡಿ ಅತ್ತು ಪ್ರಕರಣವನ್ನು ಡೈವರ್ಟ್ ಮಾಡಲು ಯತ್ನಿಸಿದ್ದಳು. ಆದ್ರೆ, ಪೊಲೀಸರು ಬಿಡಬೇಕಲ್ಲ. ಶೈಲಾಳ ಫೋನ್ ಪರಿಶೀಲನೆ ಮಾಡಿದಾಗ ಆಕೆಯ ನವರಂಗಿ ಆಟ ಬಟಾಬಯಲಾಗಿದೆ. ಆತನ ಸಹವಾಸ ಬಿಡುವಂತೆ ಹೇಳಿದ್ದಕ್ಕೆ ಗಂಡನ ಕಥೆಯನ್ನ ಮುಗಿಸಿದ್ದಾಳೆ.

ಕಳೆದ ಎರಡು ವರ್ಷದಿಂದ ರುದ್ರಪ್ಪ ಹೊಸೆಟ್ಟಿ ಹಾಗೂ ಶೈಲಾ ನಡುವೆ ಸಂಬಂಧ ಇತ್ತು. ಗಂಡನಿಗೆ ಗೊತ್ತಾಗದಂತೆ ರುದ್ರಪ್ಪನೊಂದಿಗೆ ಚಕ್ಕಂದವಾಡುತ್ತಿದ್ದಳು. ಆದ್ರೆ, ಆರು ತಿಂಗಳ ಶೈಲಾಳ ಲವ್ವಿಡವ್ವಿಯ ಗುಟ್ಟು ಶಿವನಗೌಡನಿಗೆ ಗೊತ್ತಾಗಿದ್ದು, ಅವನ ಸಹವಾಸ ಬಿಡು ಎಂದು ತಿಳಿಸಿ ಹೇಳಿದ್ದಾನೆ. ಆದ್ರೆ, ಶೈಲಾ ತಾಳಿಕಟ್ಟಿದ ಗಂಡನನ್ನೇ ಬಿಡುತ್ತೇನೆ ಹೊರತು ರುದ್ರಪ್ಪನನ್ನು ಬಿಡಲಾಗಲ್ಲ ಎನ್ನುವ ನಿರ್ಧಾರ ಮಾಡಿ ಶಿವನಗೌಡನನ್ನೇ ಮುಗಿಸಲು ತೀರ್ಮಾನಿಸಿದ್ದಾಳೆ.

ಇದನ್ನೂ ಓದಿ: ಮದುವೆ ಬೇಡವೆಂದು ವರನನ್ನು ಕೊಲ್ಲಲು ಸುಪಾರಿಕೊಟ್ಟ ವಧು

ಗಂಡನನನ್ನೇ ಕೊಲ್ಲಲು ತೀರ್ಮಾನಿಸಿದ್ದ ಶೈಲಾ, ಪ್ರಿಯಕರ ರುದ್ರಪ್ಪನಿಗೆ ವಿಚಾರ ತಿಳಿಸಿದ್ದಾಳೆ. ಹೀಗೆ ಇಬ್ಬರು ಹೇಗೆ ಕೊಲೆ ಮಾಡಬೇಕು? ಎಲ್ಲಿ ಮಾಡಬೇಕೆಂದು ಕರೆಕ್ಟ್ ಆಗಿ ಪ್ಲಾನ್ ಮಾಡಿಕೊಂಡಿದ್ದರು. ಅದರಂತೆ ಶೈಲಾ ತನನ್ನು ತವರು ಮನೆಗೆ ಬಿಟ್ಟು ಬರುವಂತೆ ಗಂಡನಿಗೆ ಹೇಳಿದ್ದಾಳೆ. ಅದರಂತೆ ಶಿವನಗೌಡ ಹೆಂಡ್ತಿಯನ್ನು ತವರು ಮನೆಗೆ ಬಿಟ್ಟು ಏಪ್ರಿಲ್ ‌2ರಂದು ಅಲ್ಲಿಂದ ವಾಪಸ್ ಆಗುತ್ತಿದ್ದ. ಆ ವೇಳೆ ಎಣ್ಣೆ ಪಾರ್ಟಿ ಮಾಡಿಸಿ ಕೊಂದಿದ್ದಾರೆ. ಶೈಲಾಳ ಪ್ರಿಯಕರ ರುದ್ರಪ್ಪ ಹೊಸೆಟ್ಟಿ, ಶಿವನಗೌಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಇದನ್ನು ಹೆಂಡತಿಯಾದವಳು ಶೈಲಾ ರುದ್ರಪ್ಪ ವಾಟ್ಸಪ್ ಕಾಲ್​ನಲ್ಲಿ ಗಂಡ ಸಾಯುವುದನ್ನು ಕಣ್ಣಾರೆ ನೋಡಿ ಆನಂದಪಟ್ಟಿದ್ದಾಳೆ.

ಇದನ್ನೂ ಓದಿ
ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ಪತಿ: 5 ವರ್ಷ ಬಳಿಕ ಲವರ್ ಜತೆ ಸಿಕ್ಕ ಪತ್ನಿ
ನಾಲ್ವರನ್ನು ಹತ್ಯೆಗೈದು ಶವಗಳ ಜತೆ ರಾತ್ರಿ ಕಳೆದ, ಬೆಳಗ್ಗೆ ಬಾಡೂಟ ಉಂಡು ಹೋದ
ಪತ್ನಿಯನ್ನ ತುಂಡರಿಸಿ ಸೂಟ್ ಕೇಸ್​ನಲ್ಲಿ ತುಂಬಿಟ್ಟ ಪತಿ!
ಉದ್ಯಮಿ ಕೊಲೆಗೆ ಟ್ವಿಸ್ಟ್; ಹೆಣ್ಣು ಕೊಟ್ಟ ಅತ್ತೆಯೇ ಕತ್ತು ಸೀಳಿ ಹತ್ಯೆ!

ಏಪ್ರಿಲ್ 2ರಂದು ಶಿವನಗೌಡ ಸತ್ತ ಬಳಿಕ ಶೈಲಾ ಗೋಳಾಡಿ ನಾಟಕದ ಕಣ್ಣೀರಿಟ್ಟಿದ್ದಳು. ಇನ್ನು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಖಾನಾಪುರ ಠಾಣೆ ಪೊಲೀಸರು, ಶೈಲಾಳ ಫೋನ್ ತೆಗೆದುಕೊಂಡು ಕಾಲ್ ಹಿಸ್ಟರಿ ಪರಿಶೀಲನೆ ಮಾಡಿದ್ದು, ಆಗ ಶೈಲಾ ಹಾಗೂ ರುದ್ರಪ್ಪನ ಗುಟ್ಟು ರಟ್ಟಾಗಿದೆ. ಬಳಿಕ ಪೊಲೀಸರು ಶೈಲಾಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳೊಡಿಸಿದಾಗ ಅಸಲಿ ಕಹಾನಿ ಬಟಾಬಯಲಾಗಿದೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:59 pm, Sat, 5 April 25