ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಸಿಗದ ಅನುಮತಿ, ಮಂಗಳೂರಿಗೆ ತೆರಳಿದ ಡಿಕೆಶಿ ಫ್ಯಾಮಿಲಿ
ಬೆಂಗಳೂರು: ನಗರದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಶೃಂಗೇರಿಯಿಂದ ಡಿ.ಕೆ.ಶಿವಕುಮಾರ್ ಕುಟುಂಬ ನೇರವಾಗಿ ಮಂಗಳೂರಿಗೆ ತೆರಳಿದೆ. ಬೆಳಕಿನ ಕೊರತೆ ಕಾರಣ: ಚಿಕ್ಕಮಗಳೂರಿನ ಶೃಂಗೇರಿಯಿಂದ ಡಿಕೆಶಿ ಕುಟುಂಬ ಬೆಂಗಳೂರಿಗೆ ಬರಬೇಕಿತ್ತು. ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ಹೆಲಿಕಾಪ್ಟರ್ ಟೇಕ್ ಆಫ್ ಆಗಬೇಕಿತ್ತು. ಆದ್ರೆ ಹೆಲಿಪ್ಯಾಡ್ ತಲುಪಲು ಡಿಕೆಶಿ ಕುಟುಂಬಸ್ಥರು 30 ನಿಮಿಷ ವಿಳಂಬ ಮಾಡಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಲ್ಯಾಂಡಿಂಗ್ ವೇಳೆ ಬೆಳಕಿನ ಕೊರತೆ ಉಂಟಾಗಲಿರುವ ಕಾರಣ ವಿಮಾನ ನಿಲ್ದಾಣ ಪ್ರಾಧಿಕಾರದ […]
ಬೆಂಗಳೂರು: ನಗರದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಶೃಂಗೇರಿಯಿಂದ ಡಿ.ಕೆ.ಶಿವಕುಮಾರ್ ಕುಟುಂಬ ನೇರವಾಗಿ ಮಂಗಳೂರಿಗೆ ತೆರಳಿದೆ.
ಬೆಳಕಿನ ಕೊರತೆ ಕಾರಣ: ಚಿಕ್ಕಮಗಳೂರಿನ ಶೃಂಗೇರಿಯಿಂದ ಡಿಕೆಶಿ ಕುಟುಂಬ ಬೆಂಗಳೂರಿಗೆ ಬರಬೇಕಿತ್ತು. ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ಹೆಲಿಕಾಪ್ಟರ್ ಟೇಕ್ ಆಫ್ ಆಗಬೇಕಿತ್ತು. ಆದ್ರೆ ಹೆಲಿಪ್ಯಾಡ್ ತಲುಪಲು ಡಿಕೆಶಿ ಕುಟುಂಬಸ್ಥರು 30 ನಿಮಿಷ ವಿಳಂಬ ಮಾಡಿದ್ದಾರೆ. ಅಲ್ಲದೆ, ಬೆಂಗಳೂರಿನಲ್ಲಿ ಲ್ಯಾಂಡಿಂಗ್ ವೇಳೆ ಬೆಳಕಿನ ಕೊರತೆ ಉಂಟಾಗಲಿರುವ ಕಾರಣ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಅನುಮತಿ ನೀಡಿಲ್ಲ.
ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಮೊದಲು ಮಂಗಳೂರಿಗೆ ತೆರಳಲಿದ್ದಾರೆ. ಬಳಿಕ ಮಂಗಳೂರಿನಿಂದ ವಿಮಾನದಲ್ಲಿ ಡಿಕೆಶಿ ಕುಟುಂಬ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.