ಕನ್ನಡಿಗರೇ ನಿರ್ಮಿಸಿದ ದ್ರುವ ಹೆಲಿಕಾಪ್ಟರ್ ಹಸ್ತಾಂತರ:ಭಾರತೀಯ ಸೇನೆಗೆ ಮತ್ತಷ್ಟು ಬಲ
ಬೆಂಗಳೂರಿನ ಹೆಚ್ಎಎಲ್ನಲ್ಲಿ ತಯಾರಿಸಲಾಗಿರೋ ಲಘು ಯುದ್ಧ ವಿಮಾನ, ಹೆಲಿಕಾಪ್ಟರ್ಗಳನ್ನು ಸೇನೆಗೆ ಹಸ್ತಾಂತರ ಮಾಡಲಾಯ್ತು. ಹೆಚ್ಎಎಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ರುವ್ NG ಹೆಲಿಕಾಪ್ಟರ್, HTT-40 ಲಘು ಯುದ್ಧ ವಿಮಾನ, ಎರಡು ತೇಜಸ್ ತರಬೇತಿ ಲಘು ಯುದ್ಧ ವಿಮಾನಗಳು, ನಾಲ್ಕು NG ಧ್ರುವ್ ಯುದ್ಧ ಹೆಲಿಕಾಪ್ಟರ್ಗಳನ್ನು ಹಸ್ತಾಂತರಿಸಲಾಯ್ತು. ಇದರೊಂದಿಗೆ ಭಾರತೀಯ ಸೇನೆಗೆ ಮತ್ತಷ್ಟು ಬಲ ಬಂದಿದೆ.
ಬೆಂಗಳೂರು, (ಸೆಪ್ಟೆಂಬರ್ 18): ಬೆಂಗಳೂರಿನ ಹೆಚ್ಎಎಲ್ನಲ್ಲಿ ತಯಾರಿಸಲಾಗಿರೋ ಲಘು ಯುದ್ಧ ವಿಮಾನ, ಹೆಲಿಕಾಪ್ಟರ್ಗಳನ್ನು ಸೇನೆಗೆ ಹಸ್ತಾಂತರ ಮಾಡಲಾಯ್ತು. ಹೆಚ್ಎಎಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ರುವ್ NG ಹೆಲಿಕಾಪ್ಟರ್, HTT-40 ಲಘು ಯುದ್ಧ ವಿಮಾನ, ಎರಡು ತೇಜಸ್ ತರಬೇತಿ ಲಘು ಯುದ್ಧ ವಿಮಾನಗಳು, ನಾಲ್ಕು NG ಧ್ರುವ್ ಯುದ್ಧ ಹೆಲಿಕಾಪ್ಟರ್ಗಳನ್ನು ಹಸ್ತಾಂತರಿಸಲಾಯ್ತು. ಹೌದು…ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ HTT-40ಯ ಸ್ವದೇಶಿ ಆಗಿ ನಿರ್ಮಾಣ ಮಾಡಿದೆ. ಅದರ ಮೊದಲ ವಿಮಾನ ಇವತ್ತು ಭಾರತೀಯ ವಾಯುಪಡೆಗೆ ಹಸ್ತಾಂತರ ಕೂಡಾ ಮಾಡಲಾಗಿದೆ.
ಸೇನೆಗೆ ಹಸ್ತಾಂತರಗೊಂಡ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳ ವಿಶೇಷತೆಗಳೇನು ಎನ್ನುವುದನ್ನು ನೋಡೋದಾದ್ರೆ, CA ತೇಜಸ್ ಭಾರತದಲ್ಲಿ ತಯಾರಾದ ಅತ್ಯಂತ ಆಧುನಿಕ ಲಘು ಯುದ್ಧ ವಿಮಾನವಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಜಂಟಿಯಾಗಿ ತಯಾರಿಸಿದೆ. ಗಂಟೆಗೆ ಸುಮಾರು 2,205 ಕಿ.ಮೀ ವೇಗದಲ್ಲಿ ಹಾರುತ್ತೆ. ಇದು GE F404-IN20 ಎಂಜಿನ್ ಹೊಂದಿದೆ. HTT-40 ಅಂದ್ರೆ ಹಿಂದೂಸ್ತಾನ್ ಟರ್ಬೋ ಟ್ರೈನರ್-40 HAL ನಿರ್ಮಾಣ ಮಾಡಿರುವ ಮೂಲ ತರಬೇತಿ ವಿಮಾನವಾಗಿದೆ. ಇದು ಅಮೆರಿಕದ ಹನಿವೆಲ್ ಸಂಸ್ಥೆಯ Honeywell TPE331-12B ಟರ್ಬೋಕ್ರಾಪ್ ಎಂಜಿನ್ ಹೊಂದಿದೆ. ಇದರಲ್ಲಿ ಇಬ್ಬರು ಪೈಲಟ್‌ಗಳು ಒಬ್ಬರ ಹಿಂದೆ ಒಬ್ಬರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಗಂಟೆಗೆ 450 ಕಿಲೋಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ವಾಯುಪಡೆಯು ಒಟ್ಟು 70 HTT-40 ವಿಮಾನಗಳಿಗಾಗಿ ₹6,838 ಕೋಟಿ ಮೌಲ್ಯದ ಒಪ್ಪಂದವನ್ನು ಮಾಡಿಕೊಂಡಿದೆ.
