ಬೆಂಗಳೂರು-ಕಲಬುರಗಿ ವಂದೇ ಭಾರತ್ ಟ್ರೈನ್ ಯಾದಗಿರಿಯಲ್ಲೂ ನಿಲ್ಲುತ್ತೆ, ಇಲ್ಲಿದೆ ರೈಲಿನ ಹೊಸ ವೇಳಾಪಟ್ಟಿ
ಬೆಂಗಳೂರು-ಕಲಬುರಗಿ ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಿ ಐದು ತಿಂಗಳು ಕಳೆದಿವೆ. ಈ ರೈಲು ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲ್ಲುತ್ತಿರಲಿಲ್ಲ. ಹೀಗಾಗಿ ಅಲ್ಲಿನ ಜನ, ಸಂಘ-ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳ ಹೋರಾಟ ನಡೆಸಿದರು. ಇದೀಗ ರೈಲು ಯಾದಗಿರಿಯಲ್ಲೂ ಸ್ಟಾಪ್ ಆಗುತ್ತಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ಸರ್ ಎಂ. ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ (Bengaluru SMV-Kalaburagi) ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು (Vande Bharat Express train) ಗಳನ್ನು ಯಾದಗಿರಿ (Yadgiri) ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ. ಯಾದಗಿರಿಯಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಆಗಮನ ಮತ್ತು ನಿರ್ಗಮನದ ವೇಳಾಪಟ್ಟಿ ಈ ಕೆಳಗಿನಂತಿವೆ
- ಜುಲೈ 27 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 22232 ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯಾದಗಿರಿ ನಿಲ್ದಾಣಕ್ಕೆ ರಾತ್ರಿ 9:44 ಗಂಟೆಗೆ ಆಗಮಿಸಿ, 9:45 ಕ್ಕೆ ಹೊರಡಲಿದೆ.
- ಜುಲೈ 28 ರಿಂದ ಜಾರಿಗೆ ಬರುವಂತೆ, ರೈಲು ಸಂಖ್ಯೆ 22231 ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯಾದಗಿರಿ ನಿಲ್ದಾಣಕ್ಕೆ ಬೆಳಿಗ್ಗೆ 5:54 ಕೈ ಬಂದು, 5:55 ಕ್ಕೆ ಹೊರಡಲಿದೆ. ಈ ಹೆಚ್ಚುವರಿ ನಿಲುಗಡೆಯು ಯಾದಗಿರಿಗೆ ಮತ್ತು ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ.
ಬೆಂಗಳೂರು-ಕಲಬುರಗಿ-ಬೆಂಗಳೂರು ವಂದೇ ಭಾರತ್ ರೈಲು ಸಂಚಾರ ಮಾರ್ಚ್ 12 ರಿಂದ ಆರಂಭವಾಯಿತು. ಈ ರೈಲು ಯಾದಗಿರಿ ರೈಲು ನಿಲ್ದಾಣದಲ್ಲಿ ನಿಲ್ಲದೆ, ಸಂಚಾರ ನಡೆಸುತ್ತಿದೆ. ಆದರೆ ರೈಲು ಸಂಚಾರ ಆರಂಭಗೊಂಡಾಗಿನಿಂದಲೂ ಯಾದಗಿರಿಯಲ್ಲೂ ರೈಲು ನಿಲುಗಡೆ ಮಾಡಬೇಕೆಂದು ಜಿಲ್ಲೆಯ ಜನರು, ಸಂಘ-ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಒತ್ತಾಯಕ್ಕೆ ಮಣಿದು ಯಾದಗಿರಿಯಲ್ಲಿ ನಿಲುಗಡೆಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಜುಲೈ, ಆಗಸ್ಟ್ ತಿಂಗಳಲ್ಲಿ ಈ ದಿನದಂದು ಬೆಂಗಳೂರು-ಚೆನ್ನೈ ರೈಲು ರದ್ದು
ರೈಲುಗಳ ಸಂಚಾರ ರದ್ದು
ರಾಯದುರ್ಗ-ತುಮಕೂರು ಹೊಸ ಮಾರ್ಗದ ಭಾಗವಾಗಿ ರಾಯದುರ್ಗ ಯಾರ್ಡ್ ನಲ್ಲಿ ಎರಡನೇ ಹಂತದ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗೆ ತಿಳಿಸಲಾದ ರೈಲು ಸೇವೆಗಳನ್ನು ರದ್ದು ಮತ್ತು ಬೇರೆ ಮಾರ್ಗದ ಮೂಲಕ ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ರೈಲು ಸಂಖ್ಯೆ 07585 ಚಿಕ್ಕಜಾಜೂರು-ಗುಂತಕಲ್ ಡೈಲಿ ಪ್ಯಾಸೆಂಜರ್ ಸ್ಪೆಷಲ್ & ಗುಂತಕಲ್ ಚಿಕ್ಕಜಾಜೂರು (07586) ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲುಗಳ ಸಂಚಾರ ಆಗಸ್ಟ್8, 2024 ರಂದು ರದ್ದಾಗಲಿದೆ.
ರೈಲುಗಳ ಮಾರ್ಗ ಬದಲಾವಣೆ:
- ಆಗಸ್ಟ್ 9 ರಂದು ಪ್ರಯಾಣ ಬೆಳೆಸುವ ರೈಲು ಸಂಖ್ಯೆ 06243 ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಚಿಕ್ಕಜಾಜೂರ, ದಾವಣಗೆರೆ, ಅಮರಾವತಿ ಕಾಲೋನಿ, ಹೊಸಪೇಟೆ ಮಾರ್ಗದ ಮೂಲಕ ಸಂಚರಿಸಲಿದೆ. ಈ ರೈಲು ಚಿತ್ರದುರ್ಗದಿಂದ ತೋರಣಗಲ್ಲು ನಿಲ್ದಾಣಗಳವರೆಗೆ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.
- ಆಗಸ್ಟ್ 9 ರಂದು ಪ್ರಯಾಣ ಬೆಳೆಸುವ ರೈಲು ಸಂಖ್ಯೆ 06244 ಹೊಸಪೇಟೆ-ಕೆಎಸ್‌ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ, ಚಿಕ್ಕಜಾಜೂರ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ತೋರಣಗಲ್ಲುನಿಂದ ಚಿತ್ರದುರ್ಗದವರೆಗೆ ತನ್ನ ನಿಗದಿತ ನಿಲುಗಡೆ ಇರುವುದಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ