ಹಳಿ ಮೇಲೆ ಮಣ್ಣು ಕುಸಿತ: ಬೆಂಗಳೂರು-ಮಂಗಳೂರು ರೈಲು ಸಂಚಾರ ರದ್ದು
ಹಾಸನ ಜಿಲ್ಲೆ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ಶುಕ್ರವಾರ ಸಂಜೆ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ಸಂಚರಿಸಿವ ಬೆಂಗಳೂರು-ಮಂಗಳೂರು ರೈಲು ರದ್ದಾಗಿದೆ. ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಬೆಂಗಳೂರು, ಜುಲೈ 28: ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಗೆ (Heavy Rain) ಗುಡ್ಡಗಳು ಕುಸಿದು ಬಿದ್ದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಈ ನಡುವೆ ಮಂಗಳೂರು-ಬೆಂಗಳೂರು ರೈಲು (Bengaluru-Mangaluru Train) ಮಾರ್ಗದ ಹಾಸನ ಜಿಲ್ಲೆ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ಶುಕ್ರವಾರ ಸಂಜೆ ಭೂಕುಸಿತ ಉಂಟಾಗಿ ರೈಲು ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದ ಕೆಲ ರೈಲುಗಳ (Train) ಸಂಚಾರವನ್ನು ಜುಲೈ 29ರವರೆಗೆ ರದ್ದು ಮಾಡಲಾಗಿದೆ. ಕೆಲವು ರೈಲುಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರದ್ದಾದ ರೈಲುಗಳು
- ಕೆಎಸ್‌ಆರ್ ಬೆಂಗಳೂರು-ಕಣ್ಣೂರು ರೈಲು ಸಂಖ್ಯೆ (16511) ರೈಲು ರದ್ದಾಗಿದೆ.
- ಬೆಂಗಳೂರು-ಕಾರವಾರ ಕೆಎಸ್‌ಆರ್ ಎಕ್ಸ್‌ಪ್ರೆಸ್ (16595) ರೈಲು ಸಂಚಾರ ರದ್ದು ಮಾಡಲಾಗಿದೆ.
- ಕಣ್ಣೂರು-ಬೆಂಗಳೂರು (16512) ರೈಲು ರದ್ದಾಗಿದೆ.
- ಕಾರವಾರ-ಕೆಎಸ್ ಆರ್ ಬೆಂಗಳೂರು ಎಕ್ಸ್‌ಪ್ರೆಸ್ (16596) ರೈಲು ಸಂಚಾರ ತಾತ್ಕಾಲಿಕ್ ಬಂದ್
- ಬೆಂಗಳೂರು-ಮುರುಡೇಶ್ವರ (16585) ರೈಲು ತಾತ್ಕಾಲಿಕವಾಗಿ ಸಂಚರಿಸುವುದಿಲ್ಲ.
- ಮುರ್ಡೇಶ್ವರ- ಬೆಂಗಳೂರು (16586) ರೈಲನ್ನು ರದ್ದುಗೊಳಿಸಲಾಗಿದೆ.ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ (07377) ರೈಲು ರದ್ದು ಮಾಡಲಾಗಿದೆ.
- ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ (07377) ರೈಲು ರದ್ದು ಮಾಡಲಾಗಿದೆ.
- ಮಂಗಳೂರು ಸೆಂಟ್ರಲ್ -ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ (07378) ರೈಲು ಸಂಚಾರ ಇರುವುದಿಲ್ಲ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ರಾಜ್ಯದ 8 ರೈಲುಗಳು ಎರಡು ದಿನಗಳ ಕಾಲ ರದ್ದು!
ಮಾರ್ಗ ಬದಲಾವಣೆ
ಜು.27ರಂದು ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್ (16512) ಮತ್ತು ಕಾರವಾರ- ಕೆಎಸ್ಆರ್ಬೆಂಗಳೂರು ಎಕ್ಸ್‌ಪ್ರೆಸ್ (16596) ಶೋರ್ನೂರ್, ಸೇಲಂ ಜೋಲಾರ್‌ಪೇಟೆ ಮೂಲಕ ಸಂಚರಿಸಿದೆ. ಮುರ್ಡೇಶ್ವರ- ಬೆಂಗಳೂರು ಎಕ್ಸ್‌ಪ್ರೆಸ್ (16586) ಕೂಡ ಇದೇ ಮಾರ್ಗದ ಮೂಲಕ ಸಂಚರಿಸಿದೆ. ಆದರೆ ಈ ಮಾರ್ಗದ ಪಯಣ 19 ತಾಸು ಹಿಡಿಯುತ್ತದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರಿ ಸಮೀಪದ ಕಡಗರವಳ್ಳಿಯಲ್ಲಿ ಮಣ್ಣು ಕುಸಿತ ಉಂಟಾದ ಹಿನ್ನೆಲೆಯಲ್ಲಿ ಈ ಮಾರ್ಗದ ಎಲ್ಲ ರೈಲು ಸೇವೆಗಳನ್ನು ಹಠಾತ್ ಸ್ಥಗಿತಗೊಂಡವು. ಇದರಿಂದ ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ರಾತ್ರಿ ಹೊತ್ತು ಪ್ರಯಾಣಿಕರು ಪರದಾಡಬೇಕಾಯಿತು.
ಇದನ್ನೂ ಓದಿ:
ವಿಮಾನಯಾನ ದರ ದುಪ್ಪಟ್ಟು:
ಫಾಟ್ ರಸ್ತೆ ಸಂಚಾರದ ಅವ್ಯವಸ್ಥೆ ರೈಲುಗಳೂ ಬದಲಿ ಮಾರ್ಗದ ಮೂಲಕ ಸಂಚರಿಸುತ್ತಿ ರುವುದರಿಂದ 3 ಸಾವಿರ ರೂ. ಇದ್ದ ವಿಮಾನಯಾನದ ಟಿಕೆಟ್ ದರ 6,800 ರೂ.ಗೆ ಏರಿಕೆಯಾಗಿತ್ತು. ಅಷ್ಟು ಹಣ ಭರಿಸಿದರೂ ಟಿಕೆಟ್ ಸಿಗದೆ ಸಮಸ್ಯೆಯಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:19 am, Sun, 28 July 24