ವಾಲ್ಮೀಕಿ ನಿಗಮ ಹಗರಣದ ಇಬ್ಬರು ಪ್ರಮುಖ ಆರೋಪಿಗಳಿಂದ ಸಿಕ್ಕ ಹಣ, ಚಿನ್ನ ಎಷ್ಟು ಗೊತ್ತಾ?

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಎರಡು ದಿನಗಳಲ್ಲಿ ಎಸ್​ಐಟಿ 16 ಕೆಜಿ ಚಿನ್ನ ಜಪ್ತಿ ಮಾಡಿದೆ. ಹೈದರಾಬಾದ್ ಬಿಲ್ಡರ್‌ರೊಬ್ಬರಿಂದ ₹2.50 ಕೋಟಿ ನಗದು ಜಪ್ತಿ ಮಾಡಲಾಗಿದೆ. ಆರೋಪಿಗಳಿಂದ ಇದುವರೆಗೆ 48.5 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.

ವಾಲ್ಮೀಕಿ ನಿಗಮ ಹಗರಣದ ಇಬ್ಬರು ಪ್ರಮುಖ ಆರೋಪಿಗಳಿಂದ ಸಿಕ್ಕ ಹಣ, ಚಿನ್ನ ಎಷ್ಟು ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us
Jagadisha B
| Updated By: ಆಯೇಷಾ ಬಾನು

Updated on: Jul 28, 2024 | 9:40 AM

ಬೆಂಗಳೂರು, ಜುಲೈ.28: ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣ (Valmiki Development Corporation Scam) ಸಂಬಂಧ PMLA ಆಕ್ಟ್ ಅಡಿ ಇಡಿ ಒಂದೆಡೆ ಮಾಜಿ ಸಚಿವನ ಬಂಧಿಸಿ ಗ್ರಿಲ್ ಮಾಡ್ತಿದ್ರೆ ಮತ್ತೊಂದೆಡೆ ಸಿಐಡಿ (CID), ಎಸ್​ಐಟಿ (SIT) ಅಧಿಕಾರಿಗಳು ಕದ್ದ ಹಣದಲ್ಲಿ ಆರೋಪಿಗಳ ಕೊಂಡ ನಗ-ನಾಣ್ಯಾ ಆಸ್ತಿಪಾಸ್ತಿಯನ್ನು ಕಲೆಹಾಕಿ ವಶಕ್ಕೆ ಪಡೆಯುತ್ತಿದೆ. ಇತ್ತೀಚೆಗೆ ಈ ಪ್ರಕರಣದ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾಗೆ ಸೇರಿದ ಫ್ಲಾಟ್​ನಲ್ಲಿ 10 ಕೆ.ಜಿ‌.ಚಿನ್ನದ ಬಿಸ್ಕೆಟ್ ಅನ್ನು ಎಸ್ಐಟಿ ವಶಕ್ಕೆ ಪಡಿದಿತ್ತು. ಇದೀಗ ತಲಾಶ್ ಮುಂದುವರೆಸಿರುವ ಎಸ್​ಐಟಿ ಮತ್ತಷ್ಟು ಚಿನ್ನ ವಶಕ್ಕೆ ಪಡೆದಿದೆ. ಮತ್ತೆ 6 ಕೆಜಿ ಚಿನ್ನ ಹಾಗೂ ಹೈದರಾಬಾದ್ ಬಿಲ್ಡರ್‌ರೊಬ್ಬರಿಂದ ₹2.50 ಕೋಟಿ ನಗದು ಜಪ್ತಿ ಮಾಡಲಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಎರಡು ದಿನಗಳಲ್ಲಿ ಎಸ್​ಐಟಿ 16 ಕೆಜಿ ಚಿನ್ನ ಜಪ್ತಿ ಮಾಡಿದೆ. ಸರ್ಚ್ ವಾರೆಂಟ್ ಪಡೆದು ಹೈದರಾಬಾದ್​ನಲ್ಲಿ ಇರುವ ಸತ್ಯನಾರಾಯಣ ವರ್ಮಾ ಮತ್ತು ಕಾಕಿ ಶ್ರೀನಿವಾಸ್ ಮನೆ ಮೇಲೆ ದಾಳಿ ಮಾಡಿದ್ದ SIT, ಶುಕ್ರವಾರ ಹಾಗೂ ಶನಿವಾರ ತಲಾಶ್ ಮಾಡಿದೆ. ಹೈದರಾಬಾದ್​​ ಫಸ್ಟ್ ಫೈನಾನ್ಸ್ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿದ್ದ ಸತ್ಯನಾರಾಯಣ ವರ್ಮಾ ಬಳಿ ಇದುವರೆಗೆ 15 ಕೆಜಿ ಚಿನ್ನ ಜಪ್ತಿ ಮಾಡಲಾಗಿದೆ.

ಸತ್ಯನಾರಾಯಣ ಮನೆಯಲ್ಲಿ 10 ಕೆಜಿ ಚಿನ್ನ, ಫ್ಲ್ಯಾಟ್​ನಲ್ಲಿ 5 ಕೆಜಿ ಚಿನ್ನ ಜಪ್ತಿ ಮಾಡಲಾಗಿದೆ. ಇನ್ನು ಮಧ್ಯವರ್ತಿ ಶ್ರೀನಿವಾಸ್ ಎಂಬಾತನ ನಿವಾಸದಲ್ಲಿ 1 ಕೆಜಿ ಚಿನ್ನ ಜಪ್ತಿ ಮಾಡಲಾಗಿದೆ. ಇದರ ಜೊತೆಗೆ ಕೆಲ ಬಿಲ್ಡರ್​ಗಳಿಗೆ ಕೊಟ್ಟಿದ್ದ ಹಣ ಕೂಡ ವಾಪಸ್ ಪಡೆಯಲಾಗಿದೆ. ಸದ್ಯ ಬಿಲ್ಡರ್​ಗಳು ಸುಮಾರು 2.5 ಕೋಟಿ ಹಣ ವಾಪಸ್ ನೀಡಿದ್ದಾರೆ. ಆರೋಪಿಗಳಿಂದ ಇದುವರೆಗೆ 48.5 ಕೋಟಿ ಮೌಲ್ಯದ ಚಿನ್ನ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ನೆಕ್ಕಂಟಿ ನಾಗರಾಜ್, ವೆಂಕಟೇಶ್ವರ ರಾವ್ ನಂಬಿದವರಿಗೆ ಸಂಕಷ್ಟ, ಹಣ ವಾಪಾಸ್ ನೀಡುವಂತೆ SIT ಒತ್ತಡ

ಇನ್ನು ಸತ್ಯನಾರಾಯಣ್ ವರ್ಮಾ ಬಂಧಿಸುವ ವೇಳೆಗೆ ಎಲ್ಲಾ ಹಣ ಚಿನ್ನ ಬೇರೆ ಬೇರೆ ಕಡೆ ಅಡಗಿಸಿಟ್ಟಿದ್ದ. ಬೆಂಗಳೂರಿಗೆ ಕರೆತಂದು ಸತ್ಯನಾರಾಯಣ್ ವರ್ಮಾ ವಿಚಾರಣೆ ನಡೆಸ್ತಿದ್ದಂತೆ, ಹಣ ಹಾಗೂ ಫ್ಲಾಟ್ ಖರೀದಿ ಬಗ್ಗೆ ಬಾಯಬಿಟ್ಟಿದ್ದಾನೆ. ನಂತರ ಎಸ್​ಐಟಿ ತಂಡ ಕೋರ್ಟ್ ನಿಂದ ಸರ್ಚ್ ವಾರೆಂಟ್ ಪಡೆದು ಹೈದರಾಬಾದ್ ವರ್ಮಾ ಫ್ಲಾಟ್ ಶೋಧ ಕಾರ್ಯ ನಡೆಸಿದ್ದಾರೆ. ಬಳಿಕ ಹೈದರಾಬಾದ್ ಸೀಮಾ ಪೇಟೆ, ಮೀಯಾ ಪುರದಲ್ಲಿ ವಾಸವಿ ಬಿಲ್ಡರ್ಸ್ ನಲ್ಲಿ ತಲಾ ಎರಡು ಫ್ಲಾಟ್ ಖರೀದಿ ಮಾಡಿದ್ದು, ಒಟ್ಟು 11 ಫ್ಲಾಟ್ ಖರೀದಿಸಿರುವ ಬಗ್ಗೆ ಎಸ್​ಐಟಿಗೆ ಮಾಹಿತಿ ಲಭ್ಯವಾಗಿದೆ.

ಹೈದರಾಬಾದ್ ಫ್ಲಾಟ್​ನಲ್ಲಿ ಬ್ಯಾಗ್​ನಲ್ಲಿ ಸಿಕ್ಕ 8 ಕೋಟಿ ಹಣ ಸೀಜ್ ಮಾಡಿದ್ದ ಎಸ್ಐಟಿ ತಂಡ, ಹಣ ಎಣಿಕೆ ಮಿಷನ್ ತರಿಸಿ ಹಣ ಎಣಿಕೆ ಮಾಡಿ ಜಪ್ತಿ‌ ಮಾಡಿದೆ. ದಿನ‌ಕಳೆದಂತೆ ಕೋಟಿ ಕೋಟಿ ಹಗರಣದ ಹಿಂದಿನ ಕಾಣದ ಕೈಗಳು ಹೊರಬರ್ತಿದ್ದರೇ ಭ್ರಷ್ಟರ ಬಿಲ ಸೇರಿದ್ದ ನಿಗಮದ ಹಣ ಸಂಗ್ರಹಿಸುವ ಕೆಲಸದಲ್ಲಿ ಎಸ್ ಐಟಿ ಫುಲ್ ವರ್ಕ್ ಔಟ್ ಮಾಡ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ