Bengaluru: ಬುದ್ದಿಮಾಂದ್ಯ ಮಗು ಎಂದು ನಾಲ್ಕನೇ ಮಹಡಿಯಿಂದ ಎಸೆದ ತಾಯಿ

ಬುದ್ದಿಮಾಂದ್ಯ ಮಗು ಎಂದು ತಾಯಿ (ಸುಷ್ಮಾ )  ಮಗುವನ್ನು ನಾಲ್ಕನೇ ಮಹಡಿಯಿಂದ ಕೆಳಗಡೆ ಎಸೆದ್ದಾಳೆ. 4 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್ ನಲ್ಲಿ ಮಗುವನ್ನು ಬಿಟ್ಟು ಬಂದಿದ್ದಳು. ತಂದೆ ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು.

Bengaluru:  ಬುದ್ದಿಮಾಂದ್ಯ ಮಗು ಎಂದು ನಾಲ್ಕನೇ ಮಹಡಿಯಿಂದ ಎಸೆದ ತಾಯಿ
ಸಾಂದರ್ಭಿಕ ಚಿತ್ರ
Edited By:

Updated on: Aug 05, 2022 | 1:29 PM

ಬೆಂಗಳೂರು:  ಸಿಲಿಕಾನ್ ಸಿಟಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಜನ್ಮಕೊಟ್ಟ ತಾಯಿಯೇ ಮಗುವನ್ನು ಹತ್ಯೆ ಮಾಡಿದ್ದಾಳೆ. ಸಂಪಂಗಿ ರಾಮ ನಗರದ ಅದ್ವಿತ್ ಅಪಾರ್ಟ್ ಮೆಂಟ್​ನಲ್ಲಿ ಈ ಘಟನೆ ನಡೆದಿದೆ. ಬುದ್ದಿಮಾಂದ್ಯ ಮಗು ಎಂದು ತಾಯಿ (ಸುಷ್ಮಾ )  ಮಗುವನ್ನು ನಾಲ್ಕನೇ ಮಹಡಿಯಿಂದ ಕೆಳಗಡೆ ಎಸೆದ್ದಾಳೆ. 4 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್ ನಲ್ಲಿ ಮಗುವನ್ನು ಬಿಟ್ಟು ಬಂದಿದ್ದಳು. ತಂದೆ ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು.

ಮಗುವನ್ನು ಎಸೆದು ತಾನೂ ಕೂಡ ಆತ್ಮಹತ್ಯೆ ಗೆ ಯತ್ನಿಸಿದ್ದಾಳೆ. ಈ ಬಗ್ಗೆ ಸಿಸಿಟಿಯಲ್ಲಿ ದೃಶ್ಯ ಸೆರೆಯಾಗಿದೆ. ಈ ವೇಳೆ ನಾಲ್ಕನೇ ಫ್ಲೋರ್​ನ ಮನೆಯವರು ಬಾಗಿಲು ತೆಗೆದು ಆಕೆಯ ರಕ್ಷಣೆ ಮಾಡಿದ್ದಾರೆ. ಈಕೆ ದಂತ ವೈದ್ಯಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಈಕೆಯ ಗಂಡ ಖಾಸಗಿ ಕಂಪನಿಯಲ್ಲಿ ಇಂಜೀನಿಯರ್. ಇದೀಗ ತಾಯಿ ವಿರುದ್ದ ಸಂಪಂಗಿರಾಮನಗರ ಠಾಣೆಯ ಲ್ಲಿ ಪ್ರಕರಣ ದಾಖಲು ಮಾಡಿ, ಪೊಲೀಸರು ಸುಷ್ಮಾನ್ನು ಬಂಧಿಸಿದ್ದಾರೆ.

ಮಗು ಮಹಡಿಯಿಂದ ಎಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ. ತಾಯಿ ಸುಷ್ಮಾ ಈ ಹಿಂದೆ ಮಗುವನ್ನು ರೈಲ್ವೆ ಸ್ಟೇಷನ್​ನಲ್ಲಿ ಬಿಟ್ಟು ಬಂದು, ನಂತರ ನಾನು ಮಗುವನ್ನು ಹುಡುಕಿ ಕರೆದುಕೊಂಡ ಬಂದಿದ್ದಾನೆ ಎಂದು ಮಗುವಿನ ತಂದೆ ಹೇಳಿದ್ದಾರೆ. ಇದೀಗ ಮತ್ತೆ ಇಂತಹ ಕೃತ್ಯವನ್ನು ತಾಯಿ ಸುಷ್ಮಾ ಮಾಡಿದ್ದಾಳೆ. ಇದೀಗ ಆಕೆಯನ್ನು ಬಂಧಿಸಿಲಾಗಿದೆ.

ಇದನ್ನೂ ಓದಿ
Mandya News: ರುಂಡವಿಲ್ಲದ ಮೃತದೇಹ ಪತ್ತೆ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್: ವೇಶ್ಯೆಯನ್ನು ಪ್ರೀತಿಸಿ ಆದ ಸೈಕೋ‌ ಕಿಲ್ಲರ್..!
ರೋಡ್ ರೋಲರ್ ಅನ್ಲೋಡ್ ಮಾಡುವಾಗ ಭಾರೀ ದುರಂತ: ಚಾಲಕನ ನಿರ್ಲಕ್ಷ್ಯದಿಂದ ಲಾರಿ ಕ್ಲೀನರ್ ಸಾವು
Crime News: ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸೆಗಿದ ಕಾಮುಕ ಶಿಕ್ಷಕನಿಗೆ 79 ವರ್ಷಗಳ ಜೈಲು ಶಿಕ್ಷೆ..!
ನೂರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನಕ್ಕೆ ಕನ್ನ

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:25 pm, Fri, 5 August 22