Bengaluru Rains: ಸಂಜೆ ಕೂಡ ಮುಂದುವರೆದ ಮಳೆಯ ಆರ್ಭಟ: ಬೆಂಗಳೂರಿನ ಪೀಣ್ಯ, ದಾಸರಹಳ್ಳಿ ಸುತ್ತಮುತ್ತ ಧಾರಾಕಾರ ಮಳೆ

| Updated By: ಗಂಗಾಧರ​ ಬ. ಸಾಬೋಜಿ

Updated on: May 19, 2024 | 8:14 PM

ರಾಜ್ಯ ರಾಜಾಧಾನಿಯಲ್ಲಿ ಬೆಂಗಳೂರಿನಲ್ಲಿ‌ ಈಗಾಗಲೇ ಕಳೆದ ಕೆಲದಿನಗಳಿಂದ ಮಳೆಯಾಗುತ್ತಿದೆ. ಅದೇ ರೀತಿಯಾಗಿ ಇಂದು ಕೂಡ ನಗರದ ಹಲವೆಡೆ ಮಳೆ ಆಗಿದೆ. ಬೆಂಗಳೂರಿನ ಪೀಣ್ಯ, ದಾಸರಹಳ್ಳಿ, ನೆಲಮಂಗ ಸುತ್ತಮುತ್ತ ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್​ಜಾಮ್ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ತೀವ್ರ ಪರದಾಡಿದ್ದಾರೆ. 

ಬೆಂಗಳೂರು, ಮೇ 19: ರಾಜ್ಯ ರಾಜಾಧಾನಿಯಲ್ಲಿ ಬೆಂಗಳೂರಿನಲ್ಲಿ‌ (Bengaluru) ಈಗಾಗಲೇ ಕಳೆದ ಕೆಲದಿನಗಳಿಂದ ಮಳೆಯಾಗುತ್ತಿದೆ. ಅದೇ ರೀತಿಯಾಗಿ ಇಂದು ಕೂಡ ನಗರದ ಹಲವೆಡೆ ಮಳೆ ಆಗಿದೆ. ಬೆಳ್ಳಗ್ಗೆಯಿಂದ ಸೊನೆಮಳೆಯಂತೆ ವರ್ಷಧಾರೆ ಆಗಿದ್ದು, ಮಧ್ಯಾಹ್ನ ಕೂಡ ಮಳೆ (Rains) ಆಗಿದೆ. ಇನ್ನು ಸಂಜೆಯಾಗುತ್ತಿದ್ದಂತೆ ಗುಡುಗು, ಸಿಡಿಲಿನೊಂದಿಗೆ ಮಳೆರಾಯ ಆರ್ಭಟಿಸಿದ್ದು, ನಗರದೆಲ್ಲಡೆ ಅಬ್ಬರಿಸುತ್ತಿರುವ ಮಳೆಯಿಂದಾಗಿ ವಾಹನ ಸಾವಾರರು ಹೈರಾಣಾಗಿದ್ದಾರೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಹಲವೆಡೆ ಮಳೆ: ಟ್ರಾಫಿಕ್​ಜಾಮ್

ಬೆಂಗಳೂರಿನ ಪೀಣ್ಯ, ದಾಸರಹಳ್ಳಿ, ನೆಲಮಂಗ ಸುತ್ತಮುತ್ತ ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಟ್ರಾಫಿಕ್​ಜಾಮ್ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ತೀವ್ರ ಪರದಾಡಿದ್ದಾರೆ.

ಇದನ್ನೂ ಓದಿ: Karnataka Rain Alert: ಇಂದಿನಿಂದ ಕರ್ನಾಟಕದಲ್ಲಿ ಐದು ದಿನ ಧಾರಾಕಾರ ಮಳೆ.. ಬೆಂಗಳೂರಿಗರಿಗೆ ಮಹತ್ವದ ಅಲರ್ಟ್‌

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಸುತ್ತಮುತ್ತ ನಿರಂತರ 1 ಗಂಟೆ ಮಳೆಗೆ ರಸ್ತೆಗಳು ಕೆರೆಯಂತ್ತಾಗಿವೆ. ದೇವನಹಳ್ಳಿ ಬಳಿಯ ಬೈಪಾಸ್, ಸೂಲಿಬೆಲೆ ರಸ್ತೆಯಲ್ಲಿ ನೀರು ನಿಂತಿಕೊಂಡಿದೆ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ್ದಕ್ಕೆ ರಸ್ತೆಯಲ್ಲಿ ಮಳೆ ನೀರು ನಿಂತ ಹಿನ್ನಲೆ ಕೆರೆಯಂತಾದ ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರು ಪರಿತಪಿಸುವಂತಾಗಿದೆ.

ಇದನ್ನೂ ಓದಿ: ರಾಜ್ಯದ ಹಲವೆಡೆ ಭಾರೀ ಮಳೆಗೆ ಅವಾಂತರ; ಮನೆಗಳಿಗೆ ನೀರು ನುಗ್ಗಿ ಪರದಾಟ, ರೈತರ ಮುಖದಲ್ಲಿ ಮಂದಹಾಸ

ಆನೇಕಲ್ ಭಾಗದಲ್ಲಿ ಮಳೆರಾಯನ ಸಿಂಚನವಾಗಿದೆ. ಬೆಳಿಗ್ಗೆಯಿಂದ ಮೋಡಕವಿದ ವಾತಾವರಣದಿಂದ ಕೂಲ್ ಕೂಲ್ ಆಗಿತ್ತು. ಸಂಜೆ ವೇಳೆಗೆ ಮಳೆರಾಯನ ಆಗಮನವಾಗಿದೆ. ಆನೇಕಲ್, ಅತ್ತಿಬೆಲೆ, ಸರ್ಜಾಪುರ ಭಾಗದಲ್ಲಿ ಮಳೆ ಆಗಿದೆ. ಈ ಭಾಗದಲ್ಲಿ ಕೂಡ ಕಳೆದೊಂದು ವಾರದಿಂದ ನಿರಂತರ ಮಳೆ ಸುರಿತ್ತಿದೆ.

ಮನೆಗಳಿಗೆ ನುಗ್ಗಿದ ಮಳೆ ನೀರು

ಹಾಸನ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಿಂದ ಅವಾಂತರಗಳು ಸೃಷ್ಟಿಯಾಗಿವೆ. ಚನ್ನರಾಯಪಟ್ಟಣದ ಬಾಗೂರು ರಸ್ತೆ ಸಂಪೂರ್ಣ ಜಲಾವೃತವಾಗಿದೆ. ರಸ್ತೆಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ವಾಹನಗಳು ಸಿಲುಕಿವೆ. ಹಿಂದೂ ರುದ್ರಭೂಮಿಯ ಸಿಬ್ಬಂದಿ ಮನೆಗಳಿಗೆ ಮಳೆ ನೀರು ನುಗ್ಗಿವೆ. ಗೃಹೋಪಯೋಗಿ ವಸ್ತುಗಳು ಹಾನಿ ಆಗಿವೆ.

ದಂದೂರು-ಚೀರನಹಳ್ಳಿ ಸಂಪರ್ಕ ಬಂದ್

ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಬಯಲುಸೀಮೆ ಅಜ್ಜಂಪುರ ತಾಲೂಕಿನಾದ್ಯಂತ ಧಾರಾಕಾರ ಮಳೆಗೆ ಗ್ರಾಮೀಣ ಪ್ರದೇಶದಲ್ಲಿ ಸೇತುವೆಗಳು ಜಲಾವೃತವಾಗಿವೆ. ಅಜ್ಜಂಪುರ ತಾಲೂಕಿನ ದಂದೂರು-ಚೀರನಹಳ್ಳಿ ಸಂಪರ್ಕ ಬಂದ್ ಆಗಿದೆ. ಸೇತುವೆ ಮೇಲೆ 3 ಅಡಿಯಷ್ಟು ಎತ್ತರದಲ್ಲಿ ನೀರು ಹರಿಯುತ್ತಿವೆ. ಶಿವನಿ ಸಮೀಪದ ಹೊಂಗೆ ಹಳ್ಳ ತುಂಬಿದ್ದರಿಂದ ಸಂಪರ್ಕ ಬಂದ್ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:02 pm, Sun, 19 May 24