’10 ಲಕ್ಷ ಕೊಟ್ಟರೆ ಒಂದು ಕೋಟಿ ಕೊಡ್ತೀವಿ’: ಕೋಟಿ ಕೋಟಿ ಆಮಿಷ ತೋರಿಸಿ ವಂಚಿಸಿದ್ದ ಖತರ್ನಾಕ್​​ ಗ್ಯಾಂಗ್​​ ಬಂಧನ

ದಿವಂಗತ ಜಯಲಲಿತಾ ಬೇನಾಮಿ ಆಸ್ತಿ ಹೆಸರಿನಲ್ಲಿ 10 ಲಕ್ಷಕ್ಕೆ 1 ಕೋಟಿ ನೀಡುವ ಆಮಿಷವೊಡ್ಡಿ 4.5 ಕೋಟಿ ರೂ. ವಂಚಿಸಿದ್ದ ಖದೀಮರ ಗ್ಯಾಂಗ್ ಅನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಕಳೆದ ಹಲವು ವರ್ಷಗಳಿಂದ ಸ್ನೇಹಿತರು ಮತ್ತು ಸ್ಥಳಿಯರನ್ನ ನಂಬಿಸಿದ್ದ. ವಿಡಿಯೋ ಕಾಲ್​​ನಲ್ಲಿ ಮೂಟೆಗಳಲ್ಲಿ ಹಣ ತೋರಿಸಿ ಜನರ ವಿಶ್ವಾಸಗಳಿದ್ದ ಈತ ಹೊಸಕೋಟೆ ಸುತ್ತಮುತ್ತ 4.5 ಕೋಟಿಗೂ ಅಧಿಕ ಹಣ ಸಂಗ್ರಹಿಸಿದ್ದ ಎನ್ನಲಾಗಿದೆ.

10 ಲಕ್ಷ ಕೊಟ್ಟರೆ ಒಂದು ಕೋಟಿ ಕೊಡ್ತೀವಿ: ಕೋಟಿ ಕೋಟಿ ಆಮಿಷ ತೋರಿಸಿ ವಂಚಿಸಿದ್ದ ಖತರ್ನಾಕ್​​ ಗ್ಯಾಂಗ್​​ ಬಂಧನ
ಬಂಧಿತ ಆರೋಪಿಗಳು
Image Credit source: Tv9 Kannada
Edited By:

Updated on: Sep 18, 2026 | 10:57 AM

ದೇವನಹಳ್ಳಿ, ಸೆಪ್ಟೆಂಬರ್​​ 18: ಆರ್​​ಬಿಐ ಮ್ಯಾನೇಜರ್​​ ಎಂದು ವ್ಯಕ್ತಿಯೋರ್ವನನ್ನು ತೋರಿಸಿ ಕೋಟಿ ಕೋಟಿ ಹಣ ವಂಚಿಸಿದ್ದ ಖತರ್ನಾಕ್​​ ಗ್ಯಾಂಗ್​​ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ದಿವಂಗತ ಸಿಎಂ ಜಯಲಲಿತಾ ಬೇನಾಮಿ ಆಸ್ತಿ ಬಂದಿದೆ. 10 ಲಕ್ಷ ಕೊಟ್ಟರೆ ಒಂದು ಕೋಟಿಯಂತೆ ಹಣ ಕೊಡುವುದಾಗಿ ನಂಬಿಸಿ ಗ್ಯಾಂಗ್​​ ವಂಚನೆ ನಡೆಸಿತ್ತು ಎನ್ನಲಾಗಿದೆ. ಮುಖ್ಯ ಆರೋಪಿ ಯಳಚೇನಹಳ್ಳಿ ಶಶಿಕುಮಾರ್ ಎಂಬಾತನನ್ನು ಮೊದಲು ಅರೆಸ್ಟ್​​ ಮಾಡಿದ್ದ ಪೊಲೀಸರು, ಈಗ ಉಳಿದ ಆರೋಪಿಗಳನ್ನೂ ಖೆಡ್ಡಾಕೆ ಕೆಡವಿದ್ದಾರೆ.

4.5 ಕೋಟಿಗೂ ಅಧಿಕ ಹಣ ವಂಚನೆ

ಪ್ರಮುಖ ಆರೋಪಿ ಯಳಚೇನಹಳ್ಳಿ ಶಶಿಕುಮಾರ್ ಕಳೆದ ಹಲವು ವರ್ಷಗಳಿಂದ ಸ್ನೇಹಿತರು ಮತ್ತು ಸ್ಥಳಿಯರನ್ನ ನಂಬಿಸಿದ್ದ. ವಿಡಿಯೋ ಕಾಲ್​​ನಲ್ಲಿ ಮೂಟೆಗಳಲ್ಲಿ ಹಣ ತೋರಿಸಿ ಜನರ ವಿಶ್ವಾಸಗಳಿದ್ದ ಈತ ಹೊಸಕೋಟೆ ಸುತ್ತಮುತ್ತ 4.5 ಕೋಟಿಗೂ ಅಧಿಕ ಹಣ ಸಂಗ್ರಹಿಸಿದ್ದ. ಚೆಕ್, ನಗದು ಮತ್ತು ಚಿನ್ನಾಭರಣ ಪಡೆದು ವಂಚಿಸಿದ್ದ ಆರೋಪ ಸಂಬಂಧ ಆರೋಪಿಯ ವಿರುದ್ದ ಕಳೆದ ತಿಂಗಳು ಕೇಸ್​​ ದಾಖಲಾಗಿತ್ತು. ಆ ಬೆನ್ನಲ್ಲೇ ಪ್ರಮುಖ ಆರೋಪಿಯನ್ನು ಅರೆಸ್ಟ್​​ ಮಾಡಿದ್ದ ಪೊಲೀಸರು, ಇದೀಗ ಪ್ರಕರಣ ಸಂಬಂಧ ಶಶಿಕುಮಾರ್, ನಾಗೇಶ್, ಪ್ರಮೀಳ ಶಶಿಕುಮಾರ್, ಅಂಬುಜಾ ಶಶಿಕುಮಾರ್, ವೆಂಕಟರವಣಪ್ಪ ಎಂಬವರನ್ನೂ ಬಂಧಿಸಿದ್ದಾರೆ.

ಇದನ್ನೂ ಓದಿ: ಹೆಚ್ಚುವರಿ ಶುಲ್ಕ ವಸೂಲಿ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆ: ಖಾಸಗಿ ಬಸ್‌ಗಳ ವಿರುದ್ಧ 3,756 ಕೇಸ್​​

ವಂಚಿಸಿ ಗಳಿಸಿದ್ದ ಹಣದಲ್ಲಿ ವಾಹನ, ಜಮೀನು ಖರೀದಿ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್, ಆರೋಪಿ ಶಶಿಕುಮಾರ್ ಸಾಕಷ್ಟು ಜನರಿಗೆ ಮೋಸ ಮಾಡಿದ್ದಾನೆ. ಕೊಟ್ಟ ಹಣ ಕೇಳಲು ಹೋದರೆ ಬೌನ್ಸರ್ಗಳ ಮೂಲಕ ಬೆದರಿಕೆ ಹಾಕ್ತಿದ್ದ. ಹಣ ಕಳೆದುಕೊಂಡವರು ಹೆಚ್ಚು ಒತ್ತಡ ಹಾಕಿದರೆ ಕೆಲ ದಲಿತ ನಾಯಕರಿಂದ ಧಮ್ಕಿ ಹಾಕಿಸುತ್ತಿದ್ದ. ದಲಿತ ಸಂಘಟನೆ ಮುಖಂಡರಿಗೆ ಹಣ ನೀಡಿ ಅವರನ್ನ ಬಳಸಿಕೊಳ್ಳುತ್ತಿದ್ದ. ಕೇಸ್​​ನಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೂ ಆವಾಜ್​​ ಹಾಕಿಸುತ್ತಿದ್ದ. ಈ ಸಂಬಂಧ ದಲಿತ ಮುಖಂಡ ನಾಗೇಶ್​​ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ಆರೋಪಿಗಳು ಜನರನ್ನು ವಂಚಿಸಿ ಗಳಿಸಿದ್ದ ಹಣದಲ್ಲಿ ವಾಹನ, ಜಮೀನು ಖರೀದಿಸಿದ್ದರು. ವಂಚನೆಯಾಗಿರುವ ಮತ್ತಷ್ಟು ಜನ ದೂರು‌ ನೀಡುವ ನಿರೀಕ್ಷೆಯಿದ್ದು, ದೂರು ಬಂದರೆ ಪಡೆದು ತನಿಖೆ ಮುಂದುವರೆಸುತ್ತೇವೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
Loading...
Unable to load recommendations.
Follow Us