ದೇವನಹಳ್ಳಿ: ಶಾಲಾ ವಿದ್ಯಾರ್ಥಿಯಿಂದ ಡ್ರಾಯಿಂಗ್ ಕೈಚಳಕ; ನಿಮಿಷಗಳಲ್ಲೆ ಬಿಡಿಸ್ತಾನೆ ಹಲವು ಗಣ್ಯರ ಸ್ಕೆಚ್
ಆತ ಜಸ್ಟ್ ಪ್ರಥಮ ಪಿಯು ವಿದ್ಯಾರ್ಥಿ. ಆದ್ರೆ, 9 ನೇ ತರಗತಿಯಿಂದಲೇ ಆತನ ಕೈಯಿಂದ ಮೂಡಿ ಬಂದ ಅದೊಂದು ಕೈಚಳಕ ನೋಡುಗರನ್ನು ಒಂದು ಕ್ಷಣ ಬೆರಗಾಗುವಂತೆ ಮಾಡಿದ್ದು, ಕ್ಷಣ ಮಾತ್ರದಲ್ಲೆ ಆ ಯುವಕನ ಕೈನಿಂದ ಅರಳಿ ಬರ್ತಿರುವ ವಿವಿಧ ಡ್ರಾಯಿಂಗ್ಗಳಿಗೆ ಶಿಕ್ಷಕರು ಸೇರಿದಂತೆ ಅಕ್ಕ ಪಕ್ಕದ ಮನೆಯವರು ಸಹ ಫಿದಾ ಆಗಿದ್ದಾರೆ. ಯಾರು ಆ ಬಾಲಕ ಅಂತೀರಾ? ಇಲ್ಲಿದೆ ನೋಡಿ.
ಬೆಂಗಳೂರು ಗ್ರಾಮಾಂತರ, ಆ.27: ಪೆನ್ಸಿಲ್ ಕೈಲಿಡಿದು ಬಿಳಿ ಹಾಳೆ ಮೇಲೆ ಸ್ಕೇಚ್ (Drawing)ಹಾಕುತ್ತಿರುವ ಯುವಕ. ಕ್ಷಣ ಮಾತ್ರದಲ್ಲೆ ಫಲಕದ ಮೇಲೆ ಮೂಡಿ ಬಂದಿರುವ ಹಲವಾರು ಗಣ್ಯರ ಚಿತ್ರಗಳು. ಮತ್ತೊಂದೆಡೆ ಕುಟುಂಬಸ್ಥರು ಹಾಗೂ ಸ್ಥಳಿಯರ ಚಿತ್ರ ಕಂಡು ಸಂತಸ ವ್ಯಕ್ತಪಡಿಸುತ್ತಿರುವ ಜನರು. ಹೌದು, ಅಂದಹಾಗೆ ಈ ರೀತಿ ಪೆನ್ಸಿಲ್ ಕೈನಲ್ಲಿಡಿದ್ರೆ ಕ್ಷಣ ಮಾತ್ರದಲ್ಲೆ ವಿವಿಧ ಗಣ್ಯರ ಚಿತ್ರ ಬಿಡಿಸಿ ಸೈ ಅನಿಸಿಕೊಳ್ಳುತ್ತಿರುವ ಈ ಯುವಕನ ಹೆಸರು ಪ್ರಜ್ವಲ್. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಡಣ ನಿವಾಸಿಯಾದ ಈತ, ಇದೀಗ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾರೆ.
ಹಲವಾರು ದೇಶ ಪ್ರೇಮಿ, ನಟರ ಚಿತ್ರಗಳನ್ನು ಬಿಡಿಸಿದ ಪ್ರಜ್ವಲ್
ಕಳೆದ 2 ವರ್ಷದಿಂದಲು ಮನೆಯಲ್ಲೆ ಕುಳಿತು ಕುಟುಂಬಸ್ಥರು, ದೇಶ ಪ್ರೇಮಿಗಳು, ಗಣ್ಯರು ಸೇರಿದಂತೆ ವಿವಿಧ ಚಿತ್ರ ನಟರ ಚಿತ್ರಗಳನ್ನು ಬಿಡಿಸುವ ಹವ್ಯಾಸ ಮಾಡಿಕೊಡಿದ್ದ. ಅಲ್ಲದೆ ಕಳೆದ ಎರಡು ವರ್ಷಗಳಿಂದ ಮನೆಯ ನೆರೆ ಹೊರೆಯವರು, ಶಾಲೆಯ ಶಿಕ್ಷಕರು ಹಾಗೂ ಸ್ನೇಹಿತರ ಚಿತ್ರಗಳನ್ನು ಹಾಕಿಕೊಂಡು ಗಮನ ಸೇಳೆದಿದ್ದು. ಇದೀಗ ಕ್ಷಣ ಮಾತ್ರದಲ್ಲೆ ಹಲವು ಗಣ್ಯರು ಹಾಗೂ ಎದುರು ಬಂದು ನಿಲ್ಲುವ ಜನರ ಚಿತ್ರ ಬಿಡಿಸುವ ವಿಶೇಷ ಕಲೆಯನ್ನು ರೂಪಿಸಿಕೊಂಡು ನೋಡುಗರ ಗಮನ ಸೆಳೆಯುತ್ತಿದ್ದಾನೆ.
ಇದನ್ನೂ ಓದಿ:ಉತ್ತರ ಕನ್ನಡ: ರಾಯಲ್ ಗೇಮ್ ಕುದುರೆ ರೇಸ್‌ಗೆ ಕಾಡಿನ ಹೈದ ಎಂಟ್ರಿ; ಯಾರವರು? ಈತನ ಕಥೆ ಇಲ್ಲಿದೆ ನೋಡಿ
ಯುವಕ ಪ್ರಜ್ವಲ್ ಸ್ನೇಹಿತರ, ಶಿಕ್ಷಕರ ಹಾಗೂ ಗಣ್ಯರ ಫೋಟೋಗಳನ್ನು ಬಿಡಿಸಿ ಅದನ್ನು ಗಿಫ್ಟ್ ಆಗಿ ನೀಡುತ್ತಿದ್ದು, ಯುವಕನ ವಿಶೇಷ ಕಲೆ ಕಂಡು ಶಿಕ್ಷಕಕರು ಸಹ ಯುವಕನಿಗೆ ಭೇಷ್ ಅಂದಿದ್ದಾರೆ. ಜೊತೆಗೆ ನಿಮಿಷಗಳಲ್ಲೆ ಚಿತ್ರ ಬಿಡಿಸಿ ನೋಡುಗರ ಗಮನ ಸೆಳೆಯುತ್ತಿರುವ ಯುವಕ ಈಗಾಗಲೆ ಹಲವು ಸ್ಥಳಿಯ ಚಿತ್ರಕಲೆ ಸ್ವರ್ಧೆ ಸೇರಿದಂತೆ ಹಲವಡೆ ಭಾಗವಹಿಸಿ ಬಹುಮಾನಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಇನ್ನೂ ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ದೇಶ ಮಟ್ಟದ ಸ್ವರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾನೆ. ಯುವಕನ ಈ ಕಲೆಗೆ ಸ್ಥಳಿಯರು ಸಹ ಫಿಧಾ ಆಗಿದ್ದಾರೆ.
ಒಟ್ಟಾರೆ ಓದಿನ ಜೊತೆಗೆ ವಿಶೇಷ ಕಲೆಯ ಜೊತೆಗೆ ಗಣ್ಯರು ಹಾಗೂ ವಿವಿಧ ಜನರ ಚಿತ್ರವನ್ನು ಕಣ್ಣೋಟದಲ್ಲೆ ನೋಡಿ ಬಿಡಿಸುವ ಮೂಲಕ ಜನರ ಮೆಚ್ಚುಗೆಗಳಿಸಿದ್ದಾನೆ. ಇದೇ ರೀತಿ ಮತ್ತಷ್ಟು ವಿಶೇಷ ಕಲೆಯೊಂದಿಗೆ ರಾಜ್ಯ ಮತ್ತು ದೇಶದ ಸ್ವರ್ಧೆಗಳಲ್ಲಿ ಭಾಗವಹಿಸಿ ತಾಯ್ನಾಡಿಗೆ ಹೆಸರು ತರುವ ಕೆಲಸ ಮಾಡಲಿ ಎಂದು ಕುಟುಂಬಸ್ಥರು ಶಿಕ್ಷಕರು ಆಲ್ ದಿ ಬೆಸ್ಟ್ ಅಂತಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ