Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ನೆಲೆಸಿದ್ದ ನರ್ಸ್, ಆತ್ಮಹತ್ಯೆಗೆ ಶರಣು

ನರ್ಸ್ ಸುಚಿತ್ರ ಮೂಲತಃ ಮೈಸೂರಿನ ನಂಜನಗೂಡಿನವರು, ನರ್ಸಿಂಗ್ ಮುಗಿಸಿ ಪೂಜಾ ಆಸ್ಪತ್ರೆಯಲ್ಲಿ ವೃತ್ತಿ ಆರಂಭಿಸಿದ್ದರು. ಬಂದ ದುಡ್ಡನ್ನೆಲ್ಲ ಮನೆಗೆ ಕಳುಹಿಸುತ್ತಿದ್ದರು. ಆದ್ರೆ ಕುಡುಕ ತಂದೆ ಸುಚಿತ್ರ ಕಳುಹಿಸಿದ್ದ ಹಣವನ್ನೆಲ್ಲೆ ಕುಡಿತಕ್ಕೆ ಬಳಸಿಕೊಳ್ಳುತ್ತಿದ್ದ.

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ನೆಲೆಸಿದ್ದ ನರ್ಸ್, ಆತ್ಮಹತ್ಯೆಗೆ ಶರಣು
ಮೃತ ನರ್ಸ್ ಸುಚಿತ್ರ ಮತ್ತು ಆಕೆಯ ತಾಯಿ
Follow us
ಬಿ ಮೂರ್ತಿ, ನೆಲಮಂಗಲ
| Updated By: ಸಾಧು ಶ್ರೀನಾಥ್​

Updated on: Dec 02, 2023 | 10:27 AM

ಆಕೆ ಬದುಕು ಕಟ್ಟಿಕೊಳ್ಳಲು ದೂರದ ನಂಜನಗೂಡಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ರು, ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ (nurse) ಕೆಲಸ ಸಹ ಮಾಡ್ತಾ ಇದ್ರು ಆದ್ರೆ ವಿಧಿ ಅವರ ಬದುಕನ್ನೆ ಕಸಿದುಕೊಳ್ತು. ಆಸ್ಪತ್ರೆಯ ಶವಾಗಾರದಲ್ಲಿ ಮಗಳ ಮೃತದೇಹ, ಹೊರಗಡೆ ಹೆತ್ತೊಡಲಿನ ಆಕ್ರಂದನ, ಈ ವಿದ್ಯಮಾನ ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ನಗರದ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ. ಮಾದನಾಯಕನಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯ ಮಾಚೋಹಳ್ಳಿ ನಿವಾಸಿ 23 ವರ್ಷದ ಸುಚಿತ್ರ ತಾನು ವಾಸಪಿದ್ದ ರೂಮಿನಲ್ಲಿ ಆತ್ಮಹತ್ಯೆ (suicide) ಮಾಡಿಕೊಂಡು ಸಾವನ್ನಪ್ಪಿದ್ದಾರೆ.

ಸುಚಿತ್ರ ಮೂಲತಃ ಮೈಸೂರಿನ ನಂಜನಗೂಡಿನವರು, ನರ್ಸಿಂಗ್ ಮುಗಿಸಿ ಪೂಜಾ ಆಸ್ಪತ್ರೆಯಲ್ಲಿ ವೃತ್ತಿ ಆರಂಭಿಸಿದ್ದರು. ಬಂದ ದುಡ್ಡನ್ನೆಲ್ಲ ಮನೆಗೆ ಕಳುಹಿಸುತ್ತಿದ್ದರು. ಆದ್ರೆ ಕುಡುಕ ತಂದೆ ಸುಚಿತ್ರ ಕಳುಹಿಸಿದ್ದ ಹಣವನ್ನೆಲ್ಲೆ ಕುಡಿತಕ್ಕೆ ಬಳಸಿಕೊಳ್ಳುತ್ತಿದ್ದ. ಮನೆಯಲ್ಲಿ ನೆಮ್ಮದಿ ಕೆಡಿಸಿದ್ದ, ಅಲ್ಲದೆ ತನ್ನ ಕುಡಿತದ ಚಟಕ್ಕೆ ಮತ್ತಷ್ಟು ಹಣ ಬೇಕು ಎಂದು ಪೀಡಿಸುತ್ತಿದ್ದ. ಇದರಿಂದ ಮನನೊಂದ ಸುಚಿತ್ರಾ ನಿನ್ನೆ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Also  Read: ಮರಣದಂಡನೆ ವಿರುದ್ಧ ಕೇರಳದ ನರ್ಸ್‌ನ ಮೇಲ್ಮನವಿ ವಜಾಗೊಳಿಸಿದ ಯೆಮೆನ್ ನ್ಯಾಯಾಲಯ

ಸದ್ಯ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ