ಆನೇಕಲ್: ಪಟಾಕಿ ಮಳಿಗೆ ಮಾರಾಟಗಾರರಿಗೆ ಗುಡ್​​ ನ್ಯೂಸ್: ನ. 17ರವರೆಗೆ ಪಟಾಕಿ ಮಾರಾಟಕ್ಕೆ ಹೈಕೋರ್ಟ್ ಅನುಮತಿ

firecrackers: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ​ತಾಲೂಕಿನಾದ್ಯಂತ ಒಟ್ಟು 30 ಮಳಿಗೆಗಳಿಗೆ ನ. 17ರ ವರೆಗ ಪಟಾಕಿ ಮಾರಾಟಕ್ಕೆ ಹೈಕೋರ್ಟ್ ಶನಿವಾರ ಅನುಮತಿ ನೀಡಿದೆ. ಆ ಮೂಲಕ ಪಟಾಕಿ ಮಳಿಗೆ ಮಾರಾಟಗಾರರಿಗೆ ಗುಡ್​​ ನ್ಯೂಸ್ ನೀಡಲಾಗಿದೆ. ಪಟಾಕಿ ಮಳಿಗೆಗಳ ಮಾರಾಟಗಾರರು ಹೈಕೋರ್ಟ್ ಮೊರೆ ಹೋಗಿದ್ದ ಬೆನ್ನಲ್ಲೆ ಇದೀಗ ಅನುಮತಿ ನೀಡಿದಲಾಗಿದೆ.

ಆನೇಕಲ್: ಪಟಾಕಿ ಮಳಿಗೆ ಮಾರಾಟಗಾರರಿಗೆ ಗುಡ್​​ ನ್ಯೂಸ್: ನ. 17ರವರೆಗೆ ಪಟಾಕಿ ಮಾರಾಟಕ್ಕೆ ಹೈಕೋರ್ಟ್ ಅನುಮತಿ
ಪಟಾಕಿ, ಹೈಕೋರ್ಟ್
Follow us
ರಾಮು, ಆನೇಕಲ್​
| Updated By: ಗಂಗಾಧರ​ ಬ. ಸಾಬೋಜಿ

Updated on:Nov 11, 2023 | 5:08 PM

ಆನೇಕಲ್, ನವೆಂಬರ್​​​​ 11: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ​ತಾಲೂಕಿನಾದ್ಯಂತ ಒಟ್ಟು 30 ಮಳಿಗೆಗಳಿಗೆ ನ. 17ರ ವರೆಗ ಪಟಾಕಿ (firecrackers) ಮಾರಾಟಕ್ಕೆ ಹೈಕೋರ್ಟ್ ಶನಿವಾರ ಅನುಮತಿ ನೀಡಿದೆ. ಆ ಮೂಲಕ ಪಟಾಕಿ ಮಳಿಗೆ ಮಾರಾಟಗಾರರಿಗೆ ಗುಡ್​​ ನ್ಯೂಸ್ ನೀಡಲಾಗಿದೆ. ಪಟಾಕಿ ಮಳಿಗೆಗಳ ಮಾರಾಟಗಾರರು ಹೈಕೋರ್ಟ್ ಮೊರೆ ಹೋಗಿದ್ದ ಬೆನ್ನಲ್ಲೆ ಇದೀಗ ಅನುಮತಿ ನೀಡಿದಲಾಗಿದೆ. ಹಾಗಾಗಿ ಹಲವಾರು ಗೊಂದಲಗಳ ಬಳಿಕ ಪಟಾಕಿ ಮಳಿಗೆಗಳು ತೆರೆದಿದ್ದು, ಗ್ರಾಹಕರು ಖರೀದಿಗೆ ಮುಗಿಬಿದಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಒಂದೆಡೆ ಪಟಾಕಿ ಖರೀದಿ, ಇನ್ನೊಂದೆಡೆ ಊರುಗಳತ್ತ ಹೊರಟ ಜನರು: ಹೆದ್ದಾರಿಯಲ್ಲಿ ಟ್ರಾಫಿಕ್​ಜಾಮ್

ದೀಪಾವಳಿ ಹಬ್ಬದ ರಜೆ ಹಿನ್ನೆಲೆ ಜನರು ತಮ್ಮ ಊರುಗಳಿಗೆ ಹೊರಟಿದ್ದಾರೆ. ಒಂದೆಡೆ ಪಟಾಕಿ ಖರೀದಿ ಮಾಡುತ್ತಿದ್ದಾರೆ ಹಾಗಾಗಿ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್​ಜಾಮ್ ಉಂಟಾಗಿದೆ.

ಇದನ್ನೂ ಓದಿ: ದೀಪಾವಳಿಗೆ ವಿಶೇಷ ಚೇತನ ಮಕ್ಕಳ ಕೈಯಿಂದ ತಯಾರಾಯ್ತು ಕಲರ್​ಫುಲ್​ ಹಣತೆ; ಮಂಗಳೂರಿನಲ್ಲಿ ಫುಲ್ ಡಿಮ್ಯಾಂಡ್

ತಮಿಳುನಾಡಿನಲ್ಲಿ ದೀಪಾವಳಿ ಹಬ್ಬ ವಿಜೃಂಭಣೆಯಿಂದ ಆಚರಣೆ ಹಿನ್ನೆಲೆ ಹೆಬ್ಬಗೋಡಿಯಿಂದ 10 ಕಿಲೋ ಮೀಟರ್​ವರೆಗೆ ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್​ ಜಾಮ್​ ಆಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಕಳೆದ 2 ಗಂಟೆಯಿಂದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಅತ್ತಿಬೆಲೆ ಸುತ್ತಮುತ್ತ ಪಟಾಕಿ ಖರೀದಿಗೆ ಗ್ರಾಹಕರು ಆಗಮಿಸುತ್ತಿದ್ದು, ಪಟಾಕಿ ಖರೀದಿ ಭರಾಟೆಯಿಂದ ಹೆದ್ದಾರಿಯಲ್ಲಿ ಟ್ರಾಫಿಕ್​ಜಾಮ್ ಆಗಿದೆ.

ಪಟಾಕಿ ಪ್ರಕರಣ ಎದುರಿಸಲು ಸಿದ್ಧವಾದ ಮಿಂಟೋ ಆಸ್ಪತ್ರೆ

ದೀಪಾವಳಿ ಹಬ್ಬಕ್ಕೂ ಮುನ್ನವೇ ಮಕ್ಕಳ ಕಣ್ಣಿನ ಪ್ರಕರಣ ದಾಖಲಾಗುತ್ತಿವೆ. ಪಟಾಕಿ ಕೇಸ ಬರ್ತಿದಂತೆ ಮಿಂಟೋ ಆಸ್ಪತ್ರೆ ಅಲರ್ಟ್ ಆಗಿದ್ದು, ಮಕ್ಕಳ ಪಟಾಕಿ ಪ್ರಕರಣ ಎದುರಿಸಲು ಪ್ರತ್ಯೇಕ ಬೆಡ್ ಸಿದ್ಧತೆ ಮಾಡಲಾಗಿದೆ. ಮಕ್ಕಳಿಗೆ ಒಂದು ಪ್ರತ್ಯೇಕ ವಾರ್ಡ್, 15 ಬೆಡ್ ಮಿಸಲಿಡಲಾಗಿದೆ. ಯುವಕರಿಗೆ 10 ಬೆಡ್, ಮಹಿಳೆಯರಿಗೆ 10 ಬೆಡ್ ಸೇರಿದಂತೆ ಒಟ್ಟು 35 ಬೆಡ್ ಗಳನ್ನ ಮೀಸಲಿರಿಸಿದೆ.

ಇದನ್ನೂ ಓದಿ: ದೀಪಾವಳಿ: ಪಟಾಕಿ ಮಾರಾಟಕ್ಕೆ ರಾಜ್ಯ ಪೊಲೀಸ್ ಇಲಾಖೆಯಿಂದ ಸುತ್ತೋಲೆ

ಪಟಾಕಿ ದುರಂತ ಎದುರಿಸಲು ಮಿಂಟೋ ಆಸ್ಪತ್ರೆ ಕಂಪ್ಲೀಟ್ ಸಿದ್ಧತೆ ಮಾಡಿಕೊಂಡಿದೆ. ತುರ್ತು ಎಮೆರ್ಜೆನ್ಸಿಗೆ ಸರ್ಜರಿಗೆ ಬೇಕಾದ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ಔಷಧಿಗಳನ್ನ ಐ ಡ್ರಾಪ್ಸ್ ಎಲ್ಲವೂ ವಾರ್ಡ್ ಗಳಲ್ಲಿ ಶೇಖರಿಸಿದೆ. ಮುಂದಿನ ಒಂದು ವಾರ 24*7 ವೈದ್ಯರು ಕೆಲಸ ನಿರ್ವಹಿಸಲಿದ್ದು. ಮಿಂಟೋ ಪಟಾಕಿ ಪ್ರಕರಣ ಎದುರಿಸಲು ಸಿದ್ಧವಾಗಿದೆ. ತುರ್ತು ಸಹಾಯವಾಣಿ – 9481740137, 08026707176 ಶುರು ಮಾಡಿದೆ.

ಕಣ್ಣು ಮಾತ್ರವಲ್ಲ ಪಟಾಕಿಯಿಂದ ಸುಟ್ಟು ಗಾಯವಾದ್ರೆ, ವಿಕ್ಟೋರಿಯಾದಲ್ಲಿ ಬರ್ನಿಂಗ್ ವಾರ್ಡ್ ಗೆ ಶಿಫ್ಟ್‌ ಮಾಡಿಸುವಂತೆ ಯೋಜನೆ ಮಾಡಿಕೊಂಡಿದೆ. ವಿಕ್ಟೋರಿಯಾದಲ್ಲಿಯೂ ಒಂದು ವಾರ್ಡ್ ಪ್ರತ್ಯೇಕವಾಗಿ ಮೀಸಲಿಡುವ ಬಗ್ಗೆಯೂ ಸೂಚನೆ ನೀಡಿದೆ.

ಹಬ್ಬಕ್ಕೆ ವಾರ ಮೊದಲೇ ವೈದ್ಯರು ಪೋಷಕರು ಮಕ್ಕಳಿಗೆ ಎಚ್ಚರಿಕೆಯಿಂದ ಪಟಾಕಿ ಸಿಡಿಸಿ ಅಂತಾ ವೈದ್ಯರ ಮನವಿ ಮಾಡಿದ್ದಾರೆ. ಕಣ್ಣಿನ ಸಮಸ್ಯೆ ಎದುರಿಸಲು ಮುನ್ನಚ್ಚರಿಕೆ ವಹಿಸವಂತೆ ಜನರಿಗೆ ವೈದ್ಯರ ಸಲಹೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:47 pm, Sat, 11 November 23