ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿದ ಡ್ರೋನ್ ಹಾರಾಟ: ತನಿಖೆ ಶುರು

ವಿಮಾನಗಳ ಪಕ್ಕದಲ್ಲೆ ಡ್ರೋನ್ ಹಾರಿದ ಪರಿಣಾಮ ಕೆಲ‌ಕಾಲ ಗೊಂದಲದ ವಾತಾವರಣ ಉಂಟಾಗಿದೆ. ಟೇಕ್ ಆಫ್​ ಸ್ಥಳದಿಂದ 6 ನಾಟಿಕಲ್ ಮೈಲ್ ದೂರದಲ್ಲಿ ಡ್ರೋನ್ ಹಾರಿದ್ದು, ಡ್ರೊನ್ ಹಾರಾಟ ಕಂಡು ಎಟಿಸಿ ಕಂಟ್ರೋಲ್​ಗೆ‌ ಪೈಲೆಟ್ ಮಾಹಿತಿ ನೀಡಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕ ಸೃಷ್ಟಿದ ಡ್ರೋನ್ ಹಾರಾಟ: ತನಿಖೆ ಶುರು
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
Edited By: ಕಿರಣ್ ಹನುಮಂತ್​ ಮಾದಾರ್

Updated on: Sep 27, 2023 | 11:25 AM

ಬೆಂಗಳೂರು, ಸೆ.27: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport)ದ ರನ್ ವೇ ಬಳಿ ಅನಾಮಿಕ ಡ್ರೋನ್ ಹಾರಾಟ ನಡೆಸಿದೆ. ಹೌದು, ವಿಮಾನಗಳ ಪಕ್ಕದಲ್ಲೆ ಡ್ರೋನ್(Drone) ಹಾರಿದ ಪರಿಣಾಮ ಕೆಲ‌ಕಾಲ ಗೊಂದಲದ ವಾತಾವರಣ ಉಂಟಾಗಿದೆ. ಟೇಕ್ ಆಫ್​ ಸ್ಥಳದಿಂದ 6 ನಾಟಿಕಲ್ ಮೈಲ್ ದೂರದಲ್ಲಿ ಡ್ರೋನ್ ಹಾರಿದ್ದು, ಡ್ರೊನ್ ಹಾರಾಟ ಕಂಡು ಎಟಿಸಿ ಕಂಟ್ರೋಲ್​ಗೆ‌ ಪೈಲೆಟ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಿಂದ ದೆಹಲಿ ಮತ್ತು ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನಗಳ ಹಾರಾಟ ಸ್ಥಳದಲ್ಲೆ ಆರೆಂಜ್ ಮತ್ತು ಹಳದಿ ಬಣ್ಣದ ಡ್ರೋನ್ ಹಾರಿದೆ.

ಅನಾಮಿಕ ಡ್ರೋನ್​ಹಾರಾಟದ ಬಗ್ಗೆ ತನಿಖೆ ಶುರು

ಇನ್ನು ನಿಷೇದದ ನಡುವೆಯು ಡ್ರೋನ್ ಹಾರಿದ್ದು ಹೇಗೆ? ಎಂದು ಏರ್ಪೋಟ್ ಭದ್ರತಾ ಪಡೆ ಹಾಗೂ ಎಟಿಸಿ ಕಂಟ್ರೋಲ್ ಟೀಂ ನಿಂದ ತನಿಖೆ ಶುರುವಾಗಿದೆ. ಅನಾಮಿಕ ಡ್ರೋನ್ ಹಾರಾಟದ ಬಗ್ಗೆ ಪೊಲೀಸರಿಗೆ ಏರ್ಪೋಟ್ ಸಿಬ್ಬಂದಿ ದೂರು‌ ನೀಡಿದ್ದು, ಕೂಡಲೇ ಡ್ರೋನ್​ ಹಾರಾಟದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಷ್ಟೊಂದು ಸೆಕ್ಯೂರಿಟಿ ನಡುವೆಯೂ ಡ್ರೋನ್​ ಹಾರಲು ಹೇಗೆ ಸಾಧ್ಯ ಎಂಬ ಅನುಮಾನ ಇದೀಗ ಶುರುವಾಗಿದೆ.

ಇದನ್ನೂ ಓದಿ:ಸಲೂನ್​​​​ವೊಂದರಲ್ಲಿ ಕೆಲಸ ಮಾಡಲು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ವಿಮಾನ ನಿಲ್ದಾಣದಿಂದ ನಾಪತ್ತೆ

ವಿದೇಶಿ ಮಹಿಳೆ ಬಳಿ ಕಂತೆ‌ ಕಂತೆ ದೇಶಿ ಹಣ

ದೇವನಹಳ್ಳಿ:  ಏರ್ಪೋಟ್ ಭದ್ರತಾ ಪಡೆ (CISF ) ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಏರ್ಪೋಟ್ ಗೆ ಬಂದಿದ್ದ ವಿದೇಶಿ ಮಹಿಳೆ ಬಳಿ ಕಂತೆ‌ ಕಂತೆ ದೇಶಿ ಹಣ ಪತ್ತೆಯಾಗಿದೆ. ಅದನ್ನು ಕಂಡು ಅಧಿಕಾರಿಗಳು ಒಂದು ಕ್ಷಣ ಶಾಕ್​ ಆಗಿದ್ದಾರೆ. ಈ ಮಹಿಳೆ ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದಳು.
ಈ ವೇಳೆ ಲಗೇಜ್ ಸ್ಕ್ಯಾನಿಂಗ್ ಮಾಡಿದ್ದು, ಮಹಿಳೆಯ ಬ್ಯಾಗ್ ನಲ್ಲಿ 15 ಲಕ್ಷ ನಗದು ಹಣ ಕಂಡು ಬಂದಿದೆ. ಹಣದ ಸಮೇತ ಮಹಿಳೆಯನ್ನು ಏರ್ಪೋಟ್ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ನಂತರ ಹಣ ಹಾಗೂ ಮಹಿಳೆಯನ್ನ ಆಧಾಯ ತೆರಿಗೆ ಇಲಾಖೆ‌ ಅಧಿಕಾರಿಗಳ ವಶಕ್ಕೆ ನೀಡಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಹಿಳೆಯ ವಿಚಾರಣೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:25 am, Wed, 27 September 23

ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
Loading...
Unable to load recommendations.
Follow Us