AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಗೆಹರಿಯದ ಶಿವರಾಮ ಕಾರಂತ ಬಡಾವಣೆ ಸಂತ್ರಸ್ತರ ಬವಣೆ: ಬಿಡಿಎ ಮುತ್ತಿಗೆ ಎಚ್ಚರಿಕೆ

ಬೆಂಗಳೂರಿನಲ್ಲಿ ಸ್ವಂತ ಸೂರು ಕನಸು ಕಂಡ ಮಾಲೀಕರಿಗೆ ಬಿಡಿಎ ದೊಡ್ಡ ಆಘಾತ ನೀಡಿದೆ. ಶಿವಾರಾಮ ಕಾರಂತ ಬಡಾವಣೆಗಾಗಿ ತಮ್ಮ ನಿವೇಶನಗಳನ್ನು ಬಿಡಿಎಗೆ ಬಿಟ್ಟುಕೊಟ್ಟವರಿಗೆ ಪರ್ಯಾಯ ಸೈಟ್‌ಗಳನ್ನು ನೀಡುವ ಭರವಸೆ ನೀಡಲಾಗಿತ್ತು. ಆದರೆ, ಬಡಾವಣೆ ಅಭಿವೃದ್ಧಿಯಾಗಿ ಹೊಸಬರಿಗೆ ಸೈಟ್ ಹಂಚಿಕೆಯಾದರೂ, ಮೂಲ ಮಾಲೀಕರಿಗೆ ಇನ್ನೂ ಸೈಟ್‌ಗಳು ಸಿಕ್ಕಿಲ್ಲ. ಹೀಗಾಗಿ ಸಂತ್ರಸ್ತರು ಹೋರಾಟದ ಹಾದಿ ಹಿಡಿದಿದ್ದಾರೆ.

ಬಗೆಹರಿಯದ ಶಿವರಾಮ ಕಾರಂತ ಬಡಾವಣೆ ಸಂತ್ರಸ್ತರ ಬವಣೆ: ಬಿಡಿಎ ಮುತ್ತಿಗೆ ಎಚ್ಚರಿಕೆ
ಮಾಲೀಕರ ಪ್ರತಿಭಟನೆ Image Credit source: tv9 kannada
ನವೀನ್ ಕುಮಾರ್ ಟಿ.
| Edited By: |

Updated on: Oct 03, 2026 | 6:12 PM

Share

ಮುಖ್ಯಾಂಶಗಳು

  • ಬಿಡಿಎ ವಿರುದ್ಧ ಕಂದಾಯ ಬಡಾವಣೆ ನಿವೇಶನದಾರರ ಆಕ್ರೋಶ
  • ಲಕ್ಷ ಲಕ್ಷ ಹಣ ಸುರಿದು ಸೈಟ್ ಖರೀದಿಸಿ ಸಂಕಷ್ಟಕ್ಕೆ ಸಿಲುಕಿದ ಮಾಲೀಕರು
  • ಸೋಮವಾರ ಬಿಡಿಎ ಕಚೇರಿಗೆ ಮುತ್ತಿಗೆ ಹಾಕಲು ಮಾಲೀಕರ ನಿರ್ಧಾರ

ದೇವನಹಳ್ಳಿ, ಅಕ್ಟೋಬರ್​ 03: ಬೆಂಗಳೂರಿನ ಯಲಹಂಕ ಸುತ್ತಮುತ್ತಲಿನ 17 ಗ್ರಾಮಗಳ ವ್ಯಾಪ್ತಿಯಲ್ಲಿ ಸ್ವಂತ ಮನೆಯ ಕನಸು ಹೊತ್ತು 2008ರಲ್ಲಿ ಕಂದಾಯ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದ್ದ ನಾಗರಿಕರು, ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಧೋರಣೆಯಿಂದಾಗಿ ಕಂಗಾಲಾಗಿದ್ದಾರೆ. ಡಾ. ಕೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಬಿಡಿಎ ಬದಲಿ ನಿವೇಶನ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಸಾವಿರಾರು ಎಕರೆಯಲ್ಲಿ ಸುಸಜ್ಜಿತ ಬಡಾವಣೆ ನಿರ್ಮಿಸಿ, ಇತ್ತೀಚೆಗೆ ಹೊಸಬರಿಗೆ ಹಾಗೂ ಜಮೀನು ನೀಡಿದ ರೈತರಿಗೆ ಪರಿಹಾರವಾಗಿ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದ್ದರೂ, ಮೂಲತಃ ನಿವೇಶನ ಕಳೆದುಕೊಂಡ 3,500ಕ್ಕೂ ಅಧಿಕ ಮಾಲೀಕರಿಗೆ ಮಾತ್ರ ಇನ್ನೂ ಯಾವುದೇ ನಿವೇಶನ ನೀಡಿಲ್ಲ. ಹೀಗಾಗಿ ಇದೀಗ ಅವರೆಲ್ಲರೂ ಹೋರಾಟದ ಹಾದಿ ಹಿಡಿದಿದ್ದಾರೆ.

ಆಗಿದ್ದೇನು?

ಸಿಲಿಕಾನ್ ಸಿಟಿಯಲ್ಲಿ ಒಂದು ಸ್ವಂತ ಸೂರು ಮಾಡಿಕೊಳ್ಳಬೇಕು ಅಂತ 2008ರಲ್ಲೇ ಕಷ್ಟಪಟ್ಟು ದುಡಿದು, ಇದ್ದ ಹಣದಲ್ಲಿ ಯಲಹಂಕ ಸುತ್ತಮುತ್ತಲಿನ 17 ಗ್ರಾಮಗಳ ಗ್ರಾಮಸ್ಥರು ಕಂದಾಯ ಬಡಾವಣೆಗಳಲ್ಲಿ ಸೈಟ್​​ ಖರೀದಿ ಮಾಡಿ ರಿಜಿಸ್ಟರ್ ಸಹ ಮಾಡಿಸಿಕೊಂಡಿದ್ದರು. ಆದರೆ ಅಂದು ಯಲಹಂಕ ಬಳಿ ಸಾವಿರಾರು ಎಕರೆಯಲ್ಲಿ ಶಿವರಾಂ ಕಾರಂತ ಬಡಾವಣೆ ಮಾಡಲು ಮುಂದಾದ ಬಿಡಿಎ, ನಿವೇಶನ ಕಳೆದುಕೊಳ್ಳುವ ಮಾಲೀಕರಿಗೆ ಬದಲಿ ನಿವೇಶನ ಕೊಡುವುದಾಗಿ ಹೇಳಿ ಬಡಾವಣೆ ಹಾಗೂ ನಿವೇಶನಗಳನ್ನ ಭೂಸ್ವಾಧೀನ ಪಡಿಸಿಕೊಂಡಿತ್ತು.

ಇದನ್ನೂ ಓದಿ: ಕಾರವಾರ ಮೆಡಿಕಲ್ ಕಾಲೇಜು, ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಗೆ ರಾಮಕೃಷ್ಣ ಹೆಗಡೆ ಹೆಸರು: ಸಿಎಂ ಘೋಷಣೆ

ಇನ್ನು ಭೂಸ್ವಾಧಿನ ಪಡಿಸಿಕೊಂಡ ಬಡಾವಣೆಯನ್ನ ಡೆಮಾಲಿಷನ್ ಮಾಡಿ ಸಾವಿರಾರು ಎಕರೆಯಲ್ಲಿ ಸುಸಜ್ಜಿತವಾದ ಶಿವರಾಂ ಕಾರಂತ ಬಡಾವಣೆಯನ್ನ ನಿರ್ಮಾಣ ಮಾಡಿದ್ದು, ಇತ್ತೀಚೆಗೆ ಸೈಟ್​​ಗಳನ್ನು ಸಹ ಹಂಚಿಕೆ ಮಾಡಿದೆ. ಆದರೆ ಹೊಸಬರಿಗೆ ಮತ್ತು ಜಮೀನು ನೀಡಿದ ರೈತರಿಗೆ ಪರಿಹಾರವಾಗಿ ಸೈಟ್​​ಗಳನ್ನ ಹಂಚಿಕೆ ಮಾಡಿರುವ ಬಿಡಿಎ, ಅಂದು ಸೈಟ್​​ಗಳನ್ನ ನೀಡಿರುವ ಮಾಲೀಕರನ್ನ ಮರೆತು ಬಿಟ್ಟಿದೆಯಂತೆ. ಹೀಗಾಗಿ ಬಿಡಿಎ ಕಚೇರಿಗೆ ಸೈಟ್​​ಗಾಗಿ ಅಲೆದು ಅಲೆದು ಸುಸ್ತಾದ 3500ಕ್ಕೂ ಹೆಚ್ಚು ನಿವೇಶನ ಕಳೆದುಕೊಂಡ ಮಾಲೀಕರು ಇದೀಗ ಬಿಡಿಎ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.

ಮತ್ತೆ ಹಣ ಕಟ್ಟಿ ಎಂದ ಬಿಡಿಎ ಅಧಿಕಾರಿಗಳು

2008ರಲ್ಲಿ ಬಿಡಿಎ ಶಿವರಾಂ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ತಾವು ಕಷ್ಟಪಟ್ಟು ಖರೀದಿ ಮಾಡಿದ್ದ ಸೈಟ್​ಗ​ಳನ್ನ ನೀಡಿ ಎರಡು ದಶಕಗಳಿಂದ ನಿವೇಶನಕ್ಕಾಗಿ ಕಾದು ಕುಳಿತಿದ್ದವರಿಗೆ ಬಿಡಿಎ ಈವರೆಗೂ ಸೈಟ್ ನೀಡುವ ಯಾವುದೇ ಪ್ರಕ್ರಿಯೆ ಪ್ರಾರಂಭಿಸಿಲ್ಲವಂತೆ. ಜೊತೆಗೆ ಸೈಟ್ ಕಳೆದುಕೊಂಡವರು ಹೋಗಿ ಕೇಳಿದರೆ 6 ಸಾವಿರ ರೂವರೆಗೂ ದರ ನಿಗದಿ ಮಾಡಲಿದ್ದು, ಹಣ ಕಟ್ಟಿ ಖರೀದಿ ಮಾಡುವಂತೆ ಹೇಳುತ್ತಿದ್ದಾರಂತೆ. ಅಂದರೆ ಅಡಿಗೆ 6 ಸಾವಿರ ರೂ ಅಂದರೆ 30X40 ಅಳತೆಯ ಸೈಟ್​​ಗೆ ಲಕ್ಷಾಂತರ ರೂ ಬೆಲೆ ಆಗುತ್ತದೆ.

LIVE TV

ಸೈಟ್​​ಗೆ ಬದಲಾಗಿ ಸೈಟ್​​​ನ್ನೇ ನೀಡುವಂತೆ ಒತ್ತಾಯ 

‘ನಿವೇಶನ ಕಳೆದುಕೊಂಡು ಕಷ್ಟದಲ್ಲಿರುವ ನಮಗೆ ಮತ್ತೆ ಹಣ ಕಟ್ಟಿ ಅಂದರೆ ಹೇಗೆ ಅಂತ ಮಾಲೀಕರು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಿಂದೆ ಸೈಟ್​ಗಳನ್ನ ಪಡೆದುಕೊಳ್ಳುವಾಗ ಬದಲಿ ಸೈಟ್ ನೀಡುವ ಭರವಸೆ ನೀಡಿದ್ದು, ಅದರಂತೆ ನಮಗೆ ಪಡೆದುಕೊಂಡಿರುವ ಸೈಟ್​​ಗೆ ಬದಲಾಗಿ ಸೈಟ್​​​ನ್ನೇ ಯಾವುದೇ ದರ ನಿಗದಿ ಮಾಡದೆ ನೀಡುವಂತೆ ಒತ್ತಾಯಿಸಿದ್ದಾರೆ.’

ಬಿಡಿಎ ವಿರುದ್ಧ ಹೋರಾಟ ಮುಂದಾದ ಮಾಲೀಕರು

ಒಟ್ಟಾರೆ ಶಿವರಾಂ ಕಾರಂತ ಬಡಾವಣೆಯಲ್ಲಿ ಸೈಟ್ ಸಿಗುತ್ತೆ ಮನೆ ಕಟ್ಟುಕೊಳ್ಳುವ ಅಂತ ಕನಸು ಕಂಡಿದ್ದವರಿಗೆ ಇದೀಗ ಬಿಡಿಎ ಹಣ ಕಟ್ಟುವಂತೆ ಶಾಕ್ ನೀಡಿದ್ದು, ನಿವೇಶನ ಕಳೆದುಕೊಂಡ ಮಾಲೀಕರು ಸೋಮವಾರದಂದು ಬಿಡಿಎ ಮುಂದೆ ಹೋರಾಟ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಬಿಡಿಎ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ನವೀನ್ ಕುಮಾರ್ ಟಿ.
ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಬಣ್ಣದ ಬದುಕಿನ ಅನುಭವ ಬಿಚ್ಚಿಟ್ಟ ರಂಗಾಯಣ ರಘು!
ಟಾರ್ಚ್ ಬಾಯ್ ಆಗಿದ್ದ ‘ಪ್ರೇಮದ ಊರಲಿ’ ನಿರ್ದೇಶಕ ಮನೋಜ್ ಕುಮಾರ್
ಟಾರ್ಚ್ ಬಾಯ್ ಆಗಿದ್ದ ‘ಪ್ರೇಮದ ಊರಲಿ’ ನಿರ್ದೇಶಕ ಮನೋಜ್ ಕುಮಾರ್
ಹಸಿ ಕಸದ ಜೊತೆ ಪ್ಲಾಸ್ಟಿಕ್ ಹಾಕಬೇಡಿ ಎಂದಿದ್ದಕ್ಕೆ ನಿವೃತ್ತ ಅಧಿಕಾರಿಯ ದರ್ಪ
ಹಸಿ ಕಸದ ಜೊತೆ ಪ್ಲಾಸ್ಟಿಕ್ ಹಾಕಬೇಡಿ ಎಂದಿದ್ದಕ್ಕೆ ನಿವೃತ್ತ ಅಧಿಕಾರಿಯ ದರ್ಪ
ಬಸ್ ತಂಗುದಾಣ ವಿರೂಪಗೊಳಿಸಿ ಬೇಕರಿ ನಿರ್ಮಾಣ
ಬಸ್ ತಂಗುದಾಣ ವಿರೂಪಗೊಳಿಸಿ ಬೇಕರಿ ನಿರ್ಮಾಣ
ಸ್ಯಾಂಡಿ ಸ್ವಾರ್ಥಿ; ನೇರವಾಗಿ ಹೇಳಿದ ಕಿಚ್ಚ ಸುದೀಪ್
ಸ್ಯಾಂಡಿ ಸ್ವಾರ್ಥಿ; ನೇರವಾಗಿ ಹೇಳಿದ ಕಿಚ್ಚ ಸುದೀಪ್
ಕರ್ನಾಟಕ ಬರಗಾಲ: ತಕ್ಷಣದ ಪರಿಹಾರಕ್ಕೆ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ
ಕರ್ನಾಟಕ ಬರಗಾಲ: ತಕ್ಷಣದ ಪರಿಹಾರಕ್ಕೆ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
‘ಪ್ರೇಮದ ಊರಲಿ’ ಸಿನಿಮಾ ಕಲೆಕ್ಷನ್ ಬಗ್ಗೆ ನಿರ್ದೇಶಕ ಮನೋಜ್ ಮಾತು
‘ಪ್ರೇಮದ ಊರಲಿ’ ಸಿನಿಮಾ ಕಲೆಕ್ಷನ್ ಬಗ್ಗೆ ನಿರ್ದೇಶಕ ಮನೋಜ್ ಮಾತು