
ನೆಲಮಂಗಲ, ಜುಲೈ 06: ನೀವು ಬೆಂಗಳೂರು ಹೊರವಲಯದಲ್ಲಿ ಸೈಟ್ (site) ಖರೀದಿಸುವ ಪ್ಲ್ಯಾನ್ ನಲ್ಲಿದ್ದೀರಾ? ಹಾಗಿದ್ದರೆ ಎಚ್ಚರವಾಗಿರಿ. ಜಾಹಿರಾತುಗಳನ್ನು ನಂಬಿದರೆ ಹಣ ಕಳೆದುಕೊಳ್ಳುವುದಂತೂ ಪಕ್ಕಾ. ಅದರಲ್ಲೂ ಯೂಟ್ಯೂಬ್ನಲ್ಲಿ ಬರುವ ಜಾಹೀರಾತು ನಂಬಿ ಮೋಸ ಹೋಗಬೇಡಿ. ನಿಮ್ಮ ಬಳಿ ಹಣ ದೋಚಲು ದೊಡ್ಡ ದೊಡ್ಡ ಪ್ರೊಮೋಟರ್ಸ್ಗಳೆ ಅಡ್ಡದಾರಿ ಹಿಡಿದಿದ್ದಾರೆ. ಇದೇ ಜಾಹೀರಾತು ನೋಡಿ ಓರ್ವ ದಂಪತಿ (Couple) ಲಕ್ಷಾಂತರ ರೂ ಹಣ ಕಳೆದುಕೊಂಡಿರುವಂತಹ ಘಟನೆ ನಡೆದಿದೆ.
ಪ್ರಕಾಶ್ ಹಾಗೂ ಚೇತನ ಎಂಬ ದಂಪತಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಮಂಜುನಾಥ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮಕ್ಕಳ ಭವಿಷ್ಯಕ್ಕೆಂದು ಬೆಂಗಳೂರಿನ ಹೊರವಲಯದಲ್ಲಿ ದುಡಿದ ಹಣದಲ್ಲಿ ಕೂಡಿಟ್ಟ ಅಲ್ವಸಲ್ಪ ಹಣದಲ್ಲಿ ಸೈಟ್ ಖರೀದಿಗೆ ಮುಂದಾಗಿದ್ದರು. ಈವೇಳೆ ಯೂಟ್ಯೂಬ್ ನಲ್ಲಿ ಎಸ್ಆರ್ಎಸ್ ಪ್ರೊಮೋಟರ್ಸ್ನ ಜಾಹೀರಾತು ನೋಡಿದ್ದಾರೆ. ನೆಲಮಂಗಲದ ರಿದ್ದಿ ಸಿದ್ದಿ ಲೇಔಟ್ ನಲ್ಲಿ 50 ಸಾವಿರ ರೂ ಅಡ್ವಾನ್ಸ್ ನೀಡಿ ಸೈಟ್ ಕೂಡ ಬ್ಲಾಕ್ ಮಾಡಿಸಿದ್ದಾರೆ.
ಇದನ್ನೂ ಓದಿ: ಪರಿಶಿಷ್ಟ ಜಾತಿ ಅಲೆಮಾರಿ ಮುಖಂಡರ ಸಭೆಯಲ್ಲಿ ಗಲಾಟೆ: ಅಧ್ಯಕ್ಷೆ ಸೀರೆ ಎಳೆದು ಹಲ್ಲೆ ಆರೋಪ
ಇನ್ನು 2 ಲಕ್ಷ ರೂ. ಹಣ ಕೊಟ್ಟಿದ್ದ ದಂಪತಿಗೆ ಅಗ್ರಿಮೆಂಟ್ ಮಾಡಿಕೊಡದೇ ಕೇವಲ ಪ್ರೊಮೋಟರ್ಸ್ ಕಂಪನಿಯ ಲೆಟರ್ ಹೆಡ್ ಮಾತ್ರ ಕೊಟ್ಟಿದ್ದಾರೆ. ಇನ್ನೂ ಸೈಟ್ ರಿಜಿಸ್ಟರ್ಗೆ ಹೋದರೆ ಓನರ್ ವಿದೇಶದಲ್ಲಿದ್ದಾರೆ ಎಂದು ಒಂದು ವರ್ಷಗಳ ಕಾಲ ಮುಂದೂಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಹಿಂದೂ ದೇವರಿಗೆ ಅಪಮಾನ: ಇಬ್ಬರು ಕಿಡಿಗೇಡಿಗಳು ಅಂದರ್, ಪರಿಸ್ಥಿತಿ ತಿಳಿ
ಬಳಿಕ ವಂಚನೆಗೊಳಗಾಗಿರುವುದು ಗೊತ್ತಾಗಿ ದಂಪತಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಯಾವುದೇ ಕ್ರಮವಾಗಿಲ್ಲ ಎಂದು ಪ್ರಕಾಶ್ ಪತ್ನಿ ಚೇತನ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ನಗರದ ಹೊರವಲಯದಲ್ಲಿ ಸೈಟ್ ಖರೀದಿಸಿ ಮನೆ ಕಟ್ಟುವ ಕನಸು ಕಂಡವರ ಕನಸು ಇಂಥ ಪ್ರೊಮೋಟರ್ಸ್ಗಳ ಹಾವಳಿಯಿಂದ ಕನಸಾಗೆ ಉಳಿದುಕೊಂಡಿದೆ.
ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.