ಡೆತ್ ನೋಟ್ ಬರೆದಿಟ್ಟು ಲಾಡ್ಜ್ನಲ್ಲಿ ಸಬ್ ಇನ್ಸ್ಪೆಕ್ಟರ್ ಆತ್ಮಹತ್ಯೆ, ಕಾರಣವೇನು..?
ತುಮಕೂರು ನಗರದ (Tumakuru) ಹೋಟೆಲ್ ಒಂದರಲ್ಲಿ ದಾವಣಗೆರೆ (Davangere) ಪಿಎಸ್‍ಐ (PSI) ನೇಣಿಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಲಾಡ್ಜ್ ನಲ್ಲಿ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ತಿಳಿದುಬಂದಿದ್ದು, ಸಬ್ ಇನ್ಸ್ ಪೆಕ್ಟರ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸದ್ಯ ಪತ್ತೆಯಾಗಿದೆ ಎನ್ನಲಾದ ಡೆತ್ ನೋಟ್ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತುಮಕೂರು, (ಜುಲೈ.06): ದಾವಣಗೆರೆ (Davangere) ಪೊಲೀಸ್ ಸಬ್ ಇನ್ಸ್ ಪೆಕ್ಟರ್(PSI) ಆತ್ಮಹತ್ಯೆ ಶರಣಾಗಿರುವ ಘಟನೆ ತುಮಕೂರಿನ (Tumakuru) ದ್ವಾರಕಾ ಹೋಟೆಲ್ ಲಾಡ್ಜ್ ನಲ್ಲಿ ನಡೆದಿದೆ. ನಾಗರಾಜು (58) ಆತ್ಮಹತ್ಯೆಗೆ ಶರಣಾದ ಸಬ್ ಇನ್ಸ್ಪೆಕ್ಟರ್. ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜು, ಜುಲೈ 1ರಂದು ತುಮಕೂರು ನಗರದದಲ್ಲಿರುವ ದ್ವಾರಕಾ ಹೋಟೆಲ್ ಲಾಡ್ಜ್ ನಲ್ಲಿ ನಾಲ್ಕನೇ ಮಹಡಿಯಲ್ಲಿರುವ ರೂಮ್ ಬಾಡಿಗೆ ಪಡೆದುಕೊಂಡಿದ್ದು, ಅಲ್ಲೇ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತುಮಕೂರು ನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇಂದು ಲಾಡ್ಜ್ ನಲ್ಲಿ ದುರ್ವಾಸನೆ ಬಂದಿದೆ. ಬಳಿಕ ಲಾಡ್ಜ್ ಸಿಬ್ಬಂದಿ ಹೋಗಿ ನೋಡಿದಾಗ ಇನ್ಸ್ ಪೆಕ್ಟರ್ ಆತ್ಮಹತ್ಯೆಗೆ ಮಾಡಿಕೊಂಡಿರುವುವುದು ಬೆಳಕಿಗೆ ಬಂದಿದೆ. ದಾವಣಗೆರೆ ತಾಲೂಕಿನ ಜವಳಘಟ್ಟ ಗ್ರಾಮದ ನಿವಾಸಿಯಾಗಿದ್ದ ನಾಗರಾಜಪ್ಪ, ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆಗಿದ್ದರು. ಆದ್ರೆ, ಇದೀಗ ನಾಗರಾಜ ಅವರು ದಾವಣಗೆರೆಯಿಂದ ಬಂದು ತಮಕೂರಿನ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದೇಕೆ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ನಾಗರಾಜ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಪೊಲೀಸರು ತನಿಕೆ ಕೈಗೊಂಡಿದ್ದಾರೆ. ಬಳಿ ಆ ಡೆತ್ ನೋಟ್ ನಲ್ಲಿ ಏನೆಲ್ಲಾ ಬರೆದಿದ್ದಾರೆ ಎನ್ನುವುದು ತಿಳಿದುಬರಬೇಕಿದೆ.
ಆತ್ಮಹತ್ಯೆಗೆ ಶರಣಾಗಿರುವ ಪಿಎಸ್ ಐ ಅವರು ಇನ್ನೇನು ಒಂದುವರೆ ವರ್ಷದಲ್ಲೇ ಕರ್ತವ್ಯದಿಂದ ನಿವೃತ್ತಿಯಾಗಬೇಕಿತ್ತು. ಆದ್ರೆ, ನಿವೃತ್ತಿ ಜೀವನನ್ನು ಕುಟುಂಬದೊಂದಿಗೆ ಕಳೆಯುವ ಮೊದಲೇ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಸುಮಾರು ಮೂರು ಪುಟಗಳ ಡೆತ್ ನೋಟ್ ಬರೆದಿದ್ದು, ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ . ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನನ್ನದೇ ನಿರ್ಧಾರ ಎಂದು ಬರೆದಿದ್ದಾರೆ ಎಂದು ತಿಳಿದುಬಂದಿದೆ. ಇದನ್ನು ಬಿಟ್ಟು ಮೂರು ಪುಟಗಳ ಡೆತ್ನಲ್ಲಿ ಇನ್ನೂ ಏನೆಲ್ಲಾ ಬರೆದಿದ್ದಾರೆ ಎನ್ನುವುದು ತಿಳಿದುಬರಬೇಕಿದೆ.
ಬಿಕ್ಕಿ ಬಿಕ್ಕಿ ಅತ್ತ ಪತ್ನಿ ಲಲಿತಮ್ಮ
ಗಂಡನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಬಗ್ಗೆ ಮೃತ ಪಿಎಸ್ ಐ ನಾಗರಾಜಪ್ಪ ಪತ್ನಿ ಪತ್ನಿ ಲಲಿತಮ್ಮ ಪ್ರತಿಕ್ರಿಯಿಸಿ, ಇನ್ನೊಂದು ವರ್ಷ ಮಾತ್ರ ಸೇವೆ ಬಾಕಿ ಇತ್ತು. ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಸುಗರ್ ಬಿಪಿ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಜುಲೈ ಒಂದರಂದ ಮನೆಯಿಂದ ಹೋಗಿದ್ದರು. ಮನೆ ಬಿಟ್ಟು ಹೋದ ಬಳಿಕ ಮೊಬೈಲ್ ಆಫ್ ಮಾಡಿದ್ದರು. ಇದರಿಂದ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಬಗ್ಗೆ ದೂರು ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ನಮಗೆ ವಿಚಾರ ಗೊತ್ತಾಯಿತು ಎಂದರು.
ಕಳೆದ ವರ್ಷವೇ ಮಗಳ ಮದ್ವೆ ಆಗಿದೆ.ಮುಂದಿನ ತಿಂಗಳ ಮಗಳ ಹೆರಿಗೆ ದಿನಾಂಕ ವೈದ್ಯರು ಕೊಟ್ಟಿದ್ದರು. ಇಂತಹ ಪರಿಸ್ಥಿತಿ ಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟ ಕಷ್ಟ ಇರಲಿಲ್ಲ. ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಪತ್ನಿ ಕಣ್ಣೀಟ್ಟಿದ್ದಾರೆ.
Published On - 11:41 am, Sun, 6 July 25