ಬೆಂಗಳೂರಿಗರೇ ಇಲ್ಲಿನ ಐಸ್ ಕ್ರೀಂ ತಿಂದ್ರೆ ನೇರ ಯಮನ ಪಾದಕ್ಕೆ: ದಾಳಿಯ ವೇಳೆ ಅಧಿಕಾರಿಗಳಿಗೆ ಶಾಕ್

ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯಲ್ಲಿ ಐಸ್ ಕ್ರೀಂ ತಯಾರಿಕಾ ಘಟಕದ ಮೇಲೆ ನಡೆದ ದಾಳಿಯಲ್ಲಿ ಅನೈರ್ಮಲ್ಯ, ಪಾಚಿ ಕಟ್ಟಿದ ನೀರು ಮತ್ತು ನಕಲಿ ದಿನಾಂಕಗಳು ಪತ್ತೆಯಾಗಿವೆ. ಬೀದಿಬದಿಯ ಐಸ್ ಕ್ರೀಂಗಳಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದ್ದು, ಗ್ರಾಹಕರು ಎಚ್ಚರಿಕೆ ವಹಿಸಬೇಕು. FSSAI ಪರವಾನಗಿ, ತಯಾರಿಕೆಯ ದಿನಾಂಕ ಮತ್ತು ಗುಣಮಟ್ಟ ಪರಿಶೀಲಿಸಿ ಖರೀದಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಬೆಂಗಳೂರಿಗರೇ ಇಲ್ಲಿನ ಐಸ್ ಕ್ರೀಂ ತಿಂದ್ರೆ ನೇರ ಯಮನ ಪಾದಕ್ಕೆ: ದಾಳಿಯ ವೇಳೆ ಅಧಿಕಾರಿಗಳಿಗೆ ಶಾಕ್
ಸಾಂದರ್ಭಿಕ ಚಿತ್ರ
Image Credit source: Tv9 kannada
Edited By:

Updated on: Feb 10, 2026 | 5:18 PM

ಬೆಂಗಳೂರು, ಫೆ.10: ಬೆಂಗಳೂರಿಗರೇ ಬೀದಿ.. ಬೀದಿಯಲ್ಲಿ ಸಿಗುವ ಐಸ್ ಕ್ರೀಂ ತಿನ್ನುವ ಮುನ್ನ ಈ ಸುದ್ದಿಯನ್ನು ಒಮ್ಮೆ ಗಮನವಿಟ್ಟು ಓದಿ. ಇತ್ತೀಚಿಗೆ ನಗರದಲ್ಲಿ ಇದೊಂದು ದಂಧೆಯಾಗಿ ನಡೆಯುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಬರಲು ಇಂತಹ ಆಹಾರಗಳೇ ಕಾರಣ ಎಂದು ಹೇಳಲಾಗುತ್ತಿದೆ. ಬೆಂಳೂರಿನಲ್ಲಿ ಇಂತಹ ಆಹಾರ ವಿಚಾರದಲ್ಲಿ ಅನೇಕ ಘಟನೆಗಳ ಬಗ್ಗೆ ವರದಿಗಳು ಆಗಿವೆ. ಇದೀಗ ಬೆಂಗಳೂರು ಗ್ರಾಮಾಂತರದಲ್ಲಿ ಐಸ್ ಕ್ರೀಂ ತಯಾರಿಕೆಗೆ ಬಳಸುವ ನೀರಿನ ಬಗ್ಗೆ ಕಳವಳಕಾರಿ ವರದಿಯೊಂದು ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಇಂದು ಪತ್ತೆಯಾದ ಈ ಭಯಾನಕ ಸತ್ಯವು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ದೇವನಹಳ್ಳಿ ತಹಶೀಲ್ದಾರ್ ಅನಿಲ್ ನೇತೃತ್ವದ ಅಧಿಕಾರಿಗಳ ತಂಡವು ನಡೆಸಿದ ದಿಢೀರ್ ದಾಳಿಯಿಂದ ಜನರೇ ಶಾಕ್​​ ಆಗುವ ವಿಚಾರವೊಂದು ಪತ್ತೆಯಾಗಿದೆ. ಐಸ್ ಕ್ರೀಂ ತಯಾರಿಕಾ ಘಟಕದಲ್ಲಿ ಪಾಚಿ ಕಟ್ಟಿದ ನೀರು, ಧೂಳು ಮತ್ತು ಗಲೀಜಿನ ನಡುವೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಐಸ್ ಕ್ರೀಂ ಸಿದ್ಧಪಡಿಸುವುದು ಪತ್ತೆಯಾಗಿದೆ. ಆಹಾರ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ, ಅತ್ಯಂತ ಕಳಪೆ ಮತ್ತು ಅಶುಚಿಯಾದ ವಾತಾವರಣದಲ್ಲಿ ಉತ್ಪಾದನೆ ನಡೆಯುತ್ತಿರುವುದು ಕಂಡುಬಂದಿದೆ.

ಇಲ್ಲಿ ತಯಾರಾದ ಐಸ್ ಕ್ರೀಂಗಳನ್ನು ಪ್ಯಾಕಿಂಗ್ ಮಾಡಿ ವಿತರಿಸುವಾಗ, ಅವುಗಳ ಮೇಲೆ ತಯಾರಿಕೆಯ ದಿನಾಂಕ (MFG Date) ಮತ್ತು ಅವಧಿ ಮುಗಿಯುವ ದಿನಾಂಕ (Expiry Date) ಅನ್ನು ಮನಬಂದಂತೆ ನಮೂದಿಸಲಾಗುತ್ತಿತ್ತು. ಇದು ಗ್ರಾಹಕರ ಮೇಲೆ ದೊಡ್ಡ ಪರಿಣಾಮವನ್ನೇ ಬೀರುವುದು. ಘಟಕದ ಸ್ಥಿತಿಯನ್ನು ಕಂಡು ಸ್ವತಃ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ತಕ್ಷಣವೇ ಈ ಐಸ್ ಕ್ರೀಂ ತಯಾರಿಕಾ ಘಟಕಕ್ಕೆ ಬೀಗ ಜಡಿದು (Seize) ಸೀಲ್ ಮಾಡುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ: ಶೇ. 50ರಷ್ಟು ಸಿಗಲಿದೆ ಮನೆ ಬಾಡಿಗೆ ಭತ್ಯೆ

ಆಹಾರ ಸುರಕ್ಷತಾ ಇಲಾಖೆಯಿಂದ ಈ ಘಟಕಕ್ಕೆ ನೋಟಿಸ್ ನೀಡಿ, ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಗ್ರಾಹಕರು ಐಸ್ ಕ್ರೀಂ ಖರೀದಿಸುವಾಗ ಕೆಲವೊಂದು ವಿಚಾರಗಳನ್ನು ಗಮನಿಸಲೇಬೇಕು. ಎಫ್‌ಎಸ್‌ಎಸ್‌ಎಐ (FSSAI) ಪರವಾನಗಿ ಇರುವ ಅಧಿಕೃತ ಮತ್ತು ವಿಶ್ವಾಸಾರ್ಹ ಬ್ರ್ಯಾಂಡ್‌ಗಳನ್ನು ಮಾತ್ರ ಖರೀದಿ ಮಾಡಬೇಕು. ಪ್ಯಾಕೆಟ್ ಮೇಲೆ ನಮೂದಿಸಲಾದ ತಯಾರಿಕೆಯ ದಿನಾಂಕ ಮತ್ತು ಅವಧಿ ಮುಗಿಯುವ ದಿನಾಂಕ ಸ್ಪಷ್ಟವಾಗಿದೆಯೇ ಎಂದು ನೋಡಿ. ಅದು ಅಳಿಸಿ ಹೋಗಿದ್ದರೆ ಅಥವಾ ಕೈಬರಹದಲ್ಲಿ ತಿದ್ದಿದ್ದರೆ ಖರೀದಿಸಬೇಡಿ. ಐಸ್ ಕ್ರೀಂ ಪ್ಯಾಕೆಟ್ ಒಳಗೆ ಅಥವಾ ಮೇಲೆ ಹೆಚ್ಚು ಐಸ್ ಹರಳುಗಳು (ಮಂಜುಗಡ್ಡೆಯಂತೆ) ಇರುವುದು ಕಂಡುಬಂದರೆ, ಅದು ಸರಿಯಾದ ತಾಪಮಾನದಲ್ಲಿ ಸ್ಟೋರ್ ಆಗಿಲ್ಲ ಅಥವಾ ಕೆಟ್ಟಿದೆ ಎಂದರ್ಥ. ತಿನ್ನುವಾಗ ಯಾವುದೇ ಹಳಸಿದ ವಾಸನೆ ಅಥವಾ ರಾಸಾಯನಿಕದ ರುಚಿ ಬಂದರೆ ಕೂಡಲೇ ತಿನ್ನುವುದನ್ನು ನಿಲ್ಲಿಸಿ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us