ಪೊಲೀಸ್ ಸಿಬ್ಬಂದಿಯಿಂದಲೇ ಮನೆಯ ಕಂಪೌಂಡ ಮೇಲೆ ದೇಶ ವಿರೋಧಿ ಬರಹಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ ತಾಲೂಕಿನ ಬಾಣಸವಾಡಿ ಪೊಲೀಸ್ ಠಾಣೆ ಸಿಬ್ಬಂದಿ ಮುನಿರಾಜು ಅವರು ಸಮಾಜದ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಮನೆಯೊಂದರ ಕಾಂಪೌಂಡ್ ಮೇಲೆ ದೇಶ ವಿರೋಧ ಸಾಲುಗಳನ್ನು ಬರೆದಿದ್ದಾರೆ. ಮುನಿರಾಜು ಅವರ ಈ ನಡೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಆನೇಕಲ್, ಏಪ್ರಿಲ್ 29: ಪೊಲೀಸ್ (Police) ಸಿಬ್ಬಂದಿಯಿಯೇ ಮನೆಯ ಕಾಂಪೌಂಡ್ ಮೇಲೆ ದೇಶ ವಿರೋಧಿ ಸಾಲುಗಳನ್ನು (Anti-national Slogans) ಬರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Urban) ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಬಂಡಾಪುರ ಗ್ರಾಮದಲ್ಲಿ ನಡೆದಿದೆ. ಬಾಣಸವಾಡಿ ಪೊಲೀಸ್ ಠಾಣೆ ಸಿಬ್ಬಂದಿ ಮುನಿರಾಜು ಮನೆಯ ಕಂಪೌಂಡ ಮೇಲೆ “ಇಸ್ಲಾಂ, ಥರ್ಡ್ ವಾರ್, ತಾಲಿಬಾನ್ ಇಂಡಿಯಾ ಹೆಡ್ ಬಿಕೇರ್ಫುಲ್ (Taliban India head be careful) ಸಲಾಂ ಇಸ್ಲಾಂ” ಎಂದು ಬರೆದಿದ್ದಾರೆ. ಈ ರೀತಿಯಾಗಿ ಇಡೀ ಕಾಂಪೌಂಡ್ ತುಂಬೆಲ್ಲ ದೇಶ ವಿರೋಧಿ ಸಾಲುಗಳನ್ನು ಬರೆದಿದ್ದಾರೆ. ಮುನಿರಾಜು ಅವರ ಈ ನಡೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದೇಶ ವಿರೋಧಿ ಬರಹಗಳು ಇದೇ ಮೊದಲಲ್ಲ ಈ ಹಿಂದೆ ಮಂಗಳೂರಿನಲ್ಲಿ ದೇಶ ವಿರೋಧಿ ಬರಹಗಳನ್ನು ಗೋಡೆಯ ಮೇಲೆ ಬರೆಯಲಾಗಿತ್ತು. ಈ ಪ್ರಕರಣ ಸಂಬಂಧ ಉಗ್ರ ಮಾಜ್ ಮುನೀರ್ನನ್ನು ಪೊಲೀಸರು ಬಂಧಿಸಿದ್ದರು.ಬಳಿಕ ಜಾಮೀನು ಪಡೆದುಕೊಂಡು ಹೊರ ಬಂದಿದ್ದನು. ಇದೀಗ ಉಗ್ರ ಮಾಜ್ ಮುನೀರ್ನನ್ನು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಏನಿದು ಮಂಗಳೂರು ಗೋಡೆ ಬರಹ
ಬಂಧನದದಲ್ಲಿರುವ ಉಗ್ರ ಮಾಜ್ ಮುನೀರ್ 2020ರಲ್ಲಿ ಮಂಗಳೂರಿನ ಕೆಲವು ಬಡಾವಣೆಗಳಲ್ಲಿನ ಗೋಡೆಗಳ ಮೇಲೆ ಉಗ್ರವಾದಿಗಳನ್ನು ಬೆಂಬಲಿಸುವ ಬರಹಗಳನ್ನು ಬರೆದಿದ್ದನು. ಹೀಗಾಗಿ ಈತನನ್ನು ಮತ್ತು ತೀರ್ಥಹಳ್ಳಿಯ ಮೊಹಮ್ಮದ್ ಶಾರಿಖ್ ಹಾಗೂ ಮಾಜ್ ಮುನೀರ್ ಅಹ್ಮದ್ ಎಂಬುವರನ್ನು ಅದೇ ವರ್ಷ ಡಿಸೆಂಬರ್ ನಲ್ಲಿ ಬಂಧಿಸಲಾಗಿತ್ತು. ಆನಂತರ ಇವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಇದನ್ನೂ ಓದಿ: ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ: ಮುದ್ದೇನಹಳ್ಳಿ ಪಂಚಾಯಿತಿ ಗ್ರಂಥಾಲಯದಲ್ಲಿ ವಿವಾದಾತ್ಮಕ ಗೋಡೆ ಬರಹ
ಬಿಡುಗಡೆಯಾಗಿದ್ದ ಆರೋಪಿಗಳು ಉಗ್ರ ಚಟುವಟಿಕೆಗಳನ್ನು ಮುಂದುವರೆಸಿದ್ದರು. ಮೊಹಮ್ಮದ್ ಶಾರಿಖ್ 2023ರ ಮಂಗಳೂರಿನಲ್ಲಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದಾನೆ. ಇನ್ನು ಮಾಜ್ ಮುನೀರ್ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಮಾಸ್ಟರ್ ಮೈಡ್ ಆಗಿದ್ದಾನೆ. ಈತನು ಜೈಲಿನಲ್ಲಿ ಇದ್ದುಕೊಂಡೇ ಸಂಚು ರೂಪಿಸಿದ್ದನು. ಸದ್ಯ ಈತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಯಾರು ಈ ಮಾಜ್ ಮುನೀರ್ ಅಹ್ಮದ್
ಮಾಜ್ ಮುನೀರ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನು. ಈತ ಎಂಜಿನಿಯರ್ ಪದವಿಧರನಾಗಿದ್ದಾನೆ. 2013ರಲ್ಲಿ ತೀರ್ಥಹಳ್ಳಿಯಲ್ಲಿ ಆರಂಭವಾಗಿದ್ದ ದಾವಾ ಸೆಂಟರ್ಗೆ ಮಾಜ್ ಮುನೀರ್ ಹೋಗಿದ್ದರು. ದಾವಾ ಸೆಂಟರ್ ಹೆಸರಿನಲ್ಲಿ ವ್ಯಾಟ್ಸಾಪ್ ಗ್ರೂಪ್ ಕೂಡ ಆರಂಭಿಸಿದ್ದನು. ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಲು ಆಸಕ್ತನಾಗಿದ್ದ ಮಾಜ್ 2016ರಲ್ಲಿ ಐಸಿಸ್ ಸಂಘಟನೆ ಸೇರಿಕೊಂಡಿದ್ದನು. 2019ರಲ್ಲಿ CAA, NRC ವಿಚಾರವಾಗಿ ದೇಶದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆಗ ಮಾಜ್ ಮುನೀರ್ Ummah News ಹೆಸರಿನಲ್ಲಿ ಟೆಲಿಗ್ರಾಂ ಗ್ರೂಪ್ ರಚಿಸಿದ್ದನು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Mon, 29 April 24