AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್​ನಲ್ಲಿ ಕೋಲ್ಡ್ ವಾರ್ ಶುರು! ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ವಿರುದ್ಧ ದೂರು

ಕಳೆದ ಹಲವು ವರ್ಷಗಳಿಂದ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೊಡೆದಾಟ, ಬಡಿದಾಟ, ಗಲಾಟೆ ದೊಂಬಿಗಳ ಬಗ್ಗೆ ಕೇಸ್​ಗಳನ್ನ ಹಾಕಿಸಿಕೊಂಡು ಕೆಲಸ ಮಾಡಿ ಪಕ್ಷ ಕಟ್ಟಿದ್ದೆವು.

ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್​ನಲ್ಲಿ ಕೋಲ್ಡ್ ವಾರ್ ಶುರು! ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ವಿರುದ್ಧ ದೂರು
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ, ಸಿದ್ದರಾಮಯ್ಯಗೆ ಮುನಿಶಾಮಣ್ಣ ವಿರುದ್ಧ ಕಾಂಗ್ರೆಸ್ಸಿಗರು ದೂರು ನೀಡಿದ್ದಾರೆ
TV9 Web
| Edited By: |

Updated on:Feb 07, 2022 | 2:07 PM

Share

ದೇವನಹಳ್ಳಿ: 2023ರ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ (Congress) ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೆ ಹೈವೋಲ್ಟೇಜ್ ಕದನ ಎಂದೆ ಬಿಂಬಿತವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ (Munishamanna) ಮತ್ತು ಶರತ್ ಬಚ್ಚೇಗೌಡ (Sharath Bachegowda) ಬೆಂಬಲಿಗರ ನಡುವೆ ಭಿನ್ನಮತ ಸ್ಟೋಟವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ವಿರುದ್ಧ ಮೂಲ ಕಾಂಗ್ರೆಸ್ ಮುಖಂಡರು ತಿರುಗಿಬಿದ್ದಿದ್ದು, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ಗೆ ದೂರು ನೀಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹೊಡೆದಾಟ, ಬಡಿದಾಟ, ಗಲಾಟೆ ದೊಂಬಿಗಳ ಬಗ್ಗೆ ಕೇಸ್​ಗಳನ್ನ ಹಾಕಿಸಿಕೊಂಡು ಕೆಲಸ ಮಾಡಿ ಪಕ್ಷ ಕಟ್ಟಿದ್ದೆವು. ಆದರೆ ಇದೀಗ ಮೂಲ ಕಾಂಗ್ರೆಸಿಗರನ್ನೇ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ಕಡೆಗಣಿಸಿ ತನಗೆ ಬೇಕಾದವರಿಗೆ ಮತ್ತು ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರನ್ನ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ಆಯ್ಕೆ ಮಾಡುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮೂಲ ಕಾಂಗ್ರೆಸ್ಸಿಗರು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ ಪ್ರಸಾದ್ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ. ಜಿಲ್ಲಾಧ್ಯಕ್ಷ ಮುನಿಶಾಮಣ್ಣ ಹಣ ಕೊಟ್ಟವರಿಗೆ ಜಿಲ್ಲೆಯ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ಆಯ್ಕೆ ಮಾಡಿ ಪಕ್ಷಕ್ಕೆ ದುಡಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಆಡಿಯೋ ವೈರಲ್: ಕಳೆದ 2019 ರ ಉಪಚುನಾವಣೆಯಲ್ಲಿ ಹೊಸಕೋಟೆಯಲ್ಲಿ ತ್ರಿಕೋನ ಸ್ವರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್ ತೊರೆದು ಬಿಜೆಪಿಗೆ ಹೋಗಿದ್ದ ಎಂಟಿಬಿ ನಾಗರಾಜ್ ಬಿಜೆಪಿಯಿಂದ ಸ್ವರ್ದಿಸಿದ್ದರೆ, ಬಿಜೆಪಿ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಶರತ್ ಬಚ್ಚೇಗೌಡ ಸ್ವತಂತ್ರ ಅಭ್ಯರ್ಥಿಯಾಗಿದ್ದರು. ಅಲ್ಲದೆ ಕಾಂಗ್ರೆಸ್ನಿಂದ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ್ ಸ್ವರ್ದಿಸಿದ್ದು ತ್ರಿಕೋನ ಸ್ವರ್ಧೆಯಲ್ಲಿ ಬಾರಿ ಪೈಟ್ ಎದುರಾಗಿತ್ತು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ಸ್ವತಂತ್ರ ಅಭ್ಯರ್ಥಿಯಾಗಿದ್ದ ಶರತ್ ಬಚ್ಚೇಗೌಡ ಮನವೊಲಿಸಿ ಸ್ವರ್ಧೆ ಮಾಡುವಂತೆ ಮಾಡಿ ಗೆಲ್ಲಿಸಿರುವುದಾಗಿ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದು, ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್ ನಾಯಕರಿಗೆ ಮನಮವಿ ಮಾಡಿದ್ದಾರೆ.

ಮೂಲ ಕಾಂಗ್ರೆಸ್ಸಿಗರಿಗೆ ಶಾಸಕ ಶರತ್ ಬೆಂಬಲಿಗರ ಟಾಂಗ್: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರು ಮತ್ತು ಹಣ ಕೊಟ್ಟುವರನ್ನ ಪದಾಧಿಕಾರಿಗಳಾಗಿ ಆಯ್ಕೆ ಮಾಡುತ್ತಿದ್ದಾರೆ ಅಂತ ಮೂಲ ಕಾಂಗ್ರೆಸ್ಸಿಗರು ಆರೋಪ ಮಾಡುತ್ತಿದ್ದಂತೆ ಶಾಸಕ ಶರತ್ ಬೆಂಬಲಿಗರು ಕೋಲ್ಡ್ ವಾರ್ ಶುರು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೂಲ ಕಾಂಗ್ರೆಸ್ಸಿಗರ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಕಾಂಗ್ರೆಸ್ ಗ್ರಾಮ ಪಂಚಾಯತಿ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲಲು ಶಾಸಕ ಶರತ್ ಕಾರಣ ಅಂತ ಪೋಸ್ಟ್ ಮಾಡಿದ್ದಾರೆ.

ಎಂಟಿಬಿ ನಾಗರಾಜ್ ಕರೆತರುವಂತೆ ಹೇಳಿಲ್ಲ, ಪಕ್ಷ ಟಿಕೇಟ್ ಕೊಟ್ಟವರ ಪರ ಕೆಲಸ: ಕ್ಷೇತ್ರದಲ್ಲಿ ಕೋಲ್ಡ್ ವಾರ್ ನಡುವೆ ಕೆಲವರು ಎಂಟಿಬಿ ನಾಗರಾಜ್ ಅವರನ್ನ ಪಕ್ಷಕ್ಕೆ ವಾಪಸ್ ಕರೆತರುವಂತೆ ಮೂಲ ಕಾಂಗ್ರೆಸ್ಸಿಗರು ಮನವಿ ಮಾಡಿದ್ದಾರೆ ಅಂತ ಸುಳ್ಳು ಸುದ್ದಿ ಹರದಾಡುತ್ತಿದೆ. ಈ ಬಗ್ಗೆ ನಾವು ನಾಯಕರ ಬಳಿ ಮಾತನಾಡಿಲ್ಲ. ಕೆಲವರು ಬೇಕು ಅಂತ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಮಗೆ ಕಾಂಗ್ರೆಸ್ ಪಕ್ಷ ಮುಖ್ಯ. ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೊ ಅವರ ಪರ ಚುನಾವಣೆಗಳಲ್ಲಿ ಕೆಲಸ ಮಾಡುತ್ತೀವಿ ಅಂತ ಎಂಟಿಬಿ ಪರದ ಆರೋಪವನ್ನು ಮೂಲ ಕಾಂಗ್ರೆಸ್ಸಿಗರು ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರೆಹಮಾನ್ ಖಾನ್, ಮಾಜಿ ಸಿಎಂ ವೀರಪ್ಪ ಮೊಯ್ಲಿಗೆ ಮೂಲ ಕಾಂಗ್ರೆಸ್ಸಿಗರು ದೂರು ನೀಡಿದ್ದು, ಕಾಂಗ್ರೆಸ್ ನಾಯಕರು ಯಾವ ರೀತಿ ಭಿನ್ನಮತ ಶಮನಗೊಳಿಸುತ್ತಾರೆ ಎನ್ನುವುದನ್ನು ನೋಡಬೇಕಿದೆ.

ಕಾಣದ ಕೈಗಳು ನನ್ನ ವಿರುದ್ಧ ಪಿತೂರಿ ಮಾಡುತ್ತಿದೆ- ಮುನಿಶಾಮಣ್ಣ:

ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಮುನಿಶಾಮಣ್ಣ, ಕಳೆದ ಬೈಎಲೆಕ್ಷನ್‌ನಲ್ಲಿ ಎಂಟಿಬಿ ನಾಗರಾಜ್ ಪಕ್ಷ ಬಿಟ್ಟಾಗ, ನಮ್ಮ ತಾಲೂಕಿನಲ್ಲಿ ಯಾರೂ ಸ್ಪರ್ಧೆ ಮಾಡುವವರಿರಲಿಲ್ಲ. ಆಗ ಪದ್ಮಾವತಿ ಸುರೇಶ್‌ರನ್ನ ಕರೆತಂದು ನಿಲ್ಲಿಸಿದ್ದೆವು. ಪ್ರಾಮಾಣಿಕವಾಗಿ ಕೆಲಸ ಮಾಡಿ 45,000 ಮತ ಪಡೆದಿದ್ದೆವು. ನಾನು ಯಾರ ಜೊತೆಯೂ ಶಾಮೀಲಾಗಿಲ್ಲ. ಕಾಣದ ಕೈಗಳು ನನ್ನ ವಿರುದ್ಧ ಪಿತೂರಿ ಮಾಡುತ್ತಿದೆ. ಮೂಲ‌ ಕಾಂಗ್ರೆಸ್ಸಿಗರು ನಾವು ಅಂತ ಹೇಳಿದರು.

ಪೊಲೀಸ್ ಆಯುಕ್ತರ ಕಚೇರಿಗೆ ಮಹಿಳೆ ಭೇಟಿ: ದೂರು ನೀಡಲು ಪೊಲೀಸ್ ಆಯುಕ್ತರ ಕಚೇರಿಗೆ ಮಹಿಳೆ ಭೇಟಿ ನೀಡಿದ್ದಾರೆ. ಶಾಸಕ ರಾಜಕುಮಾರ್ ಪಾಟೀಲ್ ವಿರುದ್ಧ ದೂರು ನೀಡಲು ಆಯುಕ್ತರ ಕಚೇರಿಗೆ ಬಂದಿದ್ದಾರೆ.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ವಿರುದ್ಧ ದೂರು ನೀಡಿದ್ದಾರೆ

ವರದಿ: ನವೀನ್

ಇದನ್ನೂ ಓದಿ

ಕಿವಿಯೊಳಗಿನ ಕೊಳೆಯಿಂದ ಕಿರಿಕಿರಿ ಉಂಟಾಗುತ್ತಿದೆಯೇ? ಈ ಮನೆಮದ್ದುಗಳನ್ನು ಬಳಸಿ ಅಪಾಯದಿಂದ ದೂರವಿರಿ

ಒಣ ನೆಲ್ಲಿಕಾಯಿ ತಿನ್ನುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ನೀವು ತಿಳಿಯಲೇಬೇಕು

Published On - 9:28 am, Mon, 7 February 22

ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ
ಭಾಷಣಕ್ಕೆ ಹರಿಪ್ರಸಾದ್​​ ಪಟ್ಟು: ಸದನದಿಂದ ಹೊರಟ ಗವರ್ನರ್​ ತಡೆದು ಹೈಡ್ರಾಮಾ