ದೇವನಹಳ್ಳಿ: ಮಕ್ಕಳನ್ನ ಬಕೆಟ್ನಲ್ಲಿ ಮುಳುಗಿಸಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ, ತಾಯಿ ಬಚಾವ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ತನ್ನ ಮಕ್ಕಳನ್ನು ಬಕೆಟ್ನಲ್ಲಿ ಮುಳುಗಿಸಿ ಕೊಂದು ಬಳಿಕ ತಂದೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರುವಂತಹ ಘಟನೆ ನಡೆದಿದೆ. ಘಟನೆಯಲ್ಲಿ ಪತ್ನಿ ಬಚಾವ್ ಆಗಿದ್ದಾರೆ. ಹೊಸಕೋಟೆ ಪೊಲೀಸರ ಪತ್ನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಷ್ಟಕ್ಕೆ ನಡೆದದ್ದೇನು ಇಲ್ಲಿದೆ ಮಾಹಿತಿ.

ದೇವನಹಳ್ಳಿ, ಸೆಪ್ಟೆಂಬರ್ 14: ಇಬ್ಬರು ಮಕ್ಕಳನ್ನು (children) ಬಕೆಟ್ನಲ್ಲಿ ಮುಳುಗಿಸಿ ಕೊಂದು ಬಳಿಕ ತಂದೆ (father) ಕೂಡ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊರಗಡೆ ಹೋಗಿದ್ದ ಪತ್ನಿ ಮನೆಗೆ ಬಂದು ನೋಡಿದಾಗ ಆಘಾತಗೊಂಡಿದ್ದಾರೆ. ಬಳಿಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಮುಂದಾಗುತ್ತಿದ್ದಂತೆ ಸ್ಥಳಿಯರು ರಕ್ಷಣೆ ಮಾಡಿದ್ದಾರೆ.
ನಡೆದದ್ದೇನು?
ಶಿವು ಮತ್ತು ಮಂಜುಳಾ ಪ್ರೀತಿಸಿ ಮದುವೆಯಾಗಿದ್ದರು. ಕೆಲಸಕ್ಕೆ ಹೋಗುತ್ತಿದ್ದ ವೇಳೆ ಪ್ರೀತಿ ಮಾಡಿದ್ದು, ಅನ್ಯ ಜಾತಿಯಾಗಿದ್ದ ಕಾರಣ ಪೋಷಕರ ವಿರೋಧದ ನಡುವೆ ಮದುವೆ ಮಾಡಿಕೊಂಡಿದ್ದರು. ಮದುವೆ ನಂತರ ಚೆನ್ನಾಗಿದ್ದ ಕುಟುಂಬಕ್ಕೆ ಅಪಘಾತದ ಬರೆ ಬಿದ್ದಿತ್ತು.
ಇದನ್ನೂ ಓದಿ: ಮೈಸೂರು: ಪರಿಹಾರದ ಹಣಕ್ಕಾಗಿ ಪತಿಯನ್ನ ಕೊಲೆ ಮಾಡಿ ಹುಲಿ ಕೊಂದಿದೆ ಎಂದ ಪತ್ನಿ!
ರಸ್ತೆ ಅಪಘಾತದಲ್ಲಿ ಶಿವು ಕಾಲು ಮುರಿದುಕೊಂಡು ಆಸ್ವತ್ರೆ ಪಾಲಾಗಿದ್ದ. ಎರಡು ಮನೆಯವರ ಸಹಕಾರವಿಲ್ಲದ ಕುಟುಂಬ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಮನೆ ನಿರ್ವಹಣೆಗೆ ಮಹಿಳೆ ಕೆಲಸಕ್ಕೆ ಹೋಗ್ತಿದ್ರೆ, ಗಂಡ ಮನೆಯಲ್ಲೆ ಇರ್ತಿದ್ದ. ಇತ್ತೀಚೆಗೆ ಪತ್ನಿ ಶೀಲದ ಮೇಲೂ ಶಿವು ಅನುಮಾನ ಪಡುತ್ತಿದ್ದ. ಜೊತೆಗೆ ಸಾಲ ಹೆಚ್ಚಾಗಿ ಹಣವಿಲ್ಲದ ಕಾರಣ ಎರಡು ಮೂರು ತಿಂಗಳಿಂದೆಯೇ ದಂಪತಿ ಸಾಯುವ ನಿರ್ಧಾರ ಮಾಡಿದ್ದರು. ತಾವು ಸತ್ತರೆ ಮಕ್ಕಳು ತಬ್ಬಲಿಗಳಾಗ್ತಾರೆ ಅಂತ ಅವರನ್ನು ಸಾಯಿಸೋಣ ಅಂತ ನಿರ್ಧರಿಸಿದ್ದರು.
ಶನಿವಾರ ತಿಂಡಿ ತರಲು ಮಂಜುಳಾ ನನ್ನು ರಾತ್ರಿ ಅಂಗಡಿಗೆ ಕಳಿಸಿದ್ದ ಶಿವು, ಈ ವೇಳೆ ಮಕ್ಕಳಿಬ್ಬರಿಗೂ ವೇಲ್ನಿಂದ ಕುತ್ತಿಗೆ ಬಿಗಿದಿದ್ದ. ಆದರೆ ವೇಲ್ನಿಂದ ಸಂಪೂರ್ಣ ಜೀವ ಹೋಗದ ಕಾರಣ ಮತ್ತೆ ಇಬ್ಬರನ್ನು ಬಕೆಟ್ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದ. ಮಕ್ಕಳಿಬ್ಬರ ಸಾವು ಖಚಿತ ಮಾಡಿಕೊಂಡು ಬಳಿಕ ಶಿವು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ವಾಕಿಂಗ್ ಮಾಡ್ತಿದ್ದ ನಿವೃತ್ತ ಎಸಿಪಿ ಮೇಲೆ ಹಲ್ಲೆ, ರಾಬರಿ; ಚಿನ್ನಾಭರಣ ದೋಚಿದ್ದ ಮೂವರು ಲಾಕ್
ಇತ್ತ ಅಂಗಡಿಗೆ ಹೋಗಿದ್ದ ಮಂಜಳಾ ಮನೆಗೆ ಬಂದು ನೋಡುವಷ್ಟರಲ್ಲಿ ಗಂಡ ಮತ್ತು ಮಕ್ಕಳು ಸಾವಿನ ಮನೆ ಸೇರಿದ್ದರು. ಗಂಡ ಮಕ್ಕಳ ಸಾವು ಕಂಡು ಗೋಗರೆದ ಮಂಜಳಾ, ಬಳಿಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಳು. ಅಷ್ಟರಲ್ಲಿ ಸ್ಥಳಿಯರು ರಕ್ಷಣೆ ಮಾಡಿ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಂಜಳಾ ಹೊಸಕೋಟೆ ಪೊಲೀಸರ ವಶದಲ್ಲಿದ್ದಾಳೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







