ದೇವನಹಳ್ಳಿ: ಮತ್ತೆ ಮೈಕ್ರೋಫೈನಾನ್ಸ್ ಕಿರಿಕಿರಿ ಶುರು, ಸೆಲ್ಫಿ ವಿಡಿಯೋ ಮಾಡಿಟ್ಟು ವ್ಯಕ್ತಿ ಆತ್ಮಹತ್ಯೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೋಕರೆ ಗ್ರಾಮದ 38 ವರ್ಷದ ಓರ್ವ ವ್ಯಕ್ತಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಸೆಲ್ಫಿ ವಿಡಿಯೋ ಮಾಡಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಬ್ಯಾಂಕ್ ವಿರುದ್ಧ ಮೃತನ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ದೇವನಹಳ್ಳಿ, ಜೂನ್ 30: ಕರ್ನಾಟಕದಲ್ಲಿ ಮತ್ತೆ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದೆ. ಮೈಕ್ರೋ ಫೈನಾನ್ಸ್ (Microfinance) ಕಿರುಕುಳಕ್ಕೆ ಬೇಸತ್ತು ಸೆಲ್ಫಿ ವಿಡಿಯೋ ಮಾಡಿ ವಿಷಸೇವಿಸಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೋಕರೆ ಗ್ರಾಮದಲ್ಲಿ ನಡೆದಿದೆ. ಸುಬ್ರಹ್ಮಣಿ(38) ಆತ್ಮಹತ್ಯೆ (death) ಮಾಡಿಕೊಂಡ ವ್ಯಕ್ತಿ. ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಜನ ಫೈನಾನ್ಸ್ ಬ್ಯಾಂಕ್ನಲ್ಲಿ ಸುಬ್ರಹ್ಮಣಿ 5 ಲಕ್ಷ ರೂ ಲೋನ್ ಪಡೆದಿದ್ದರು. ಇತ್ತೀಚಿಗೆ ಕಂತು ಡ್ಯೂ ಇದ್ದಿದ್ದಕ್ಕೆ ಮನೆ ಜಪ್ತಿ ಮಾಡುವುದಾಗಿ ಬ್ಯಾಂಕ್ನಿಂದ ನೋಟಿಸ್ ಜಾರಿ ಮಾಡಿದ್ದರು. ಹೀಗಾಗಿ ನನ್ನ ಸಾವಿಗೆ ಜನ ಫೈನಾನ್ಸ್ ಬ್ಯಾಂಕ್ ಕಾರಣ ಅಂತಾ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿದ್ದಾರೆ. ಜನ ಫೈನಾನ್ಸ್ ಬ್ಯಾಂಕ್ ವಿರುದ್ಧ ಮೃತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂತು ಕಟ್ಟಿಲ್ಲವೆಂದು ಮನೆಯಿಂದ ಹೊರಹಾಕಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ
ಇನ್ನು ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಐದು ತಿಂಗಳು ಕಂತು ಡ್ಯೂ ಇದೆ ಅಂತ ಕುಟುಂಬವನ್ನು ಮನೆಯಿಂದ ಹೊರ ಹಾಕಿದ್ದ ಘಟನೆ ನಡೆದಿತ್ತು. ಅಂದಹಾಗೆ ಪಟ್ಟಣ ರೆಹಮತ್ ನಗರ ನಿವಾಸಿ ಮುನಿರಾಜು ಎಂಬುವವರು 2021 ರಲ್ಲಿ ಎಸ್.ಬಿ.ಎಪ್.ಸಿ ಮೈಕ್ರೋ ಫೈನಾನ್ಸ್ನಲ್ಲಿ 21 ಲಕ್ಷ ರೂ ಲೋನ್ ತೆಗೆದುಕೊಂಡಿದ್ದರಂತೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಖಾಡಕ್ಕಿಳಿದ ಆರ್ಟಿಓ ಅಧಿಕಾರಿಗಳು: ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆಟೋಗಳು ಸೀಜ್
ಇನ್ನೂ ಅಂದಿನಿಂದ 2024 ರವರೆಗೂ ಪ್ರತಿ ತಿಂಗಳು ಬಡ್ಡಿ ಸಮೇತ ಕಂತುಗಳನ್ನ ಕಟ್ಟಿಕೊಂಡು ಬಂದಿದ್ದರು. ಆದರೆ ಕಳೆದ ವರ್ಷ ಮುನಿರಾಜುಗೆ ಆಪರೇಷರ್ನಿಂದ ಕಂತು ಕಟ್ಟದೇ ಇದೇ ಜನವರಿಯಲ್ಲಿ ಒಂದು ವರ್ಷದ ಕಂತು ನಾಲ್ಕು ಲಕ್ಷ ರೂ ಕಟ್ಟಿದ್ದರಂತೆ. ಇದೀಗ ನಾಲ್ಕೈದು ತಿಂಗಳಿನಿಂದ ಕಂತು ಕಟ್ಟಲು ತಡವಾದ ಹಿನ್ನಲೆ ಯಾವುದೇ ನೋಟಿಸ್ ಕೊಡದೆ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಏಕಾಏಕಿ ಮನೆಯಿಂದ ಹೊರಹಾಕಿ ಬೀಗ ಜಡಿದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬೀದಿಗೆ ಬಂದ ಮುನಿರಾಜು ಕಣ್ಣಿರು ಹಾಕಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:30 pm, Mon, 30 June 25







