ವಸತಿ ಶಾಲೆ ಮಾಲೀಕನಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಗಂಡನ ಕೃತ್ಯ ಮುಚ್ಚಿಡಲು ನಿತ್ಯ ಪಪ್ಪಾಯ ತಿನ್ನಿಸುತ್ತಿದ್ದ ಹೆಂಡ್ತಿ

ಮಕ್ಕಳು ಓದಿ ದೊಡ್ಡ ನೌಕರಿ ಪಡೆಯಲೆಂದು ತಮಗೆ ಎಷ್ಟೇ ಕಷ್ಟವಾದರೂ ಸಹ ಪೋಷಕರು ಲಕ್ಷ ಲಕ್ಷ ಪೀಸ್ ಕಟ್ಟಿ ಶಾಲೆ ಕಳುಹಿಸುತ್ತಾರೆ. ಆದ್ರೆ ಪೋಷಕರ ಸ್ಥಾನದಲ್ಲಿ ನಿಲ್ಲಬೇಕಾದ ವಸತಿ ಶಾಲೆ ಮಾಲೀಕ, ಮಕ್ಕಳ ಮೇಲೆ ತನ್ನ ಕಾಮದ ತೀಟೆ ತೀರಿಸಿಕೊಂಡಿದ್ದಾನೆ. ಇನ್ನು ಗಂಡನ ಕೃತ್ಯ ಮುಚ್ಚಿಡಲು ಹೆಂಡ್ತಿ ಸಹ ಮಕ್ಕಳಿಗೆ ನಿತ್ಯ ಪಪ್ಪಾಯ ತಿನ್ನಿಸಿ ಪೋಷಕರಿಗೆ ಹೇಳದಂತೆ ಬೆದರಿಕೆ ಹಾಕಿದ್ದು, ಇದೀಗ ಇಬ್ಬರೂ ಜೈಲುಪಾಲಾಗಿದ್ದಾರೆ.

ವಸತಿ ಶಾಲೆ ಮಾಲೀಕನಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಗಂಡನ ಕೃತ್ಯ ಮುಚ್ಚಿಡಲು ನಿತ್ಯ ಪಪ್ಪಾಯ ತಿನ್ನಿಸುತ್ತಿದ್ದ ಹೆಂಡ್ತಿ
ಪ್ರಾತಿನಿಧಿಕ ಚಿತ್ರ
Edited By:

Updated on: Mar 01, 2026 | 7:43 PM

ಬೆಂಗಳೂರು, (ಮಾರ್ಚ್ 01): ವಸತಿ ಶಾಲೆ ಮಾಲೀಕ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ (physical harassment) ಎಸಗಿ ಇದೀಗ ಜೈಲುಪಾಲಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural)  ಜಿಲ್ಲೆ ದೇವನಹಳ್ಳಿ (Devanahalli) ಪಟ್ಟಣದಲ್ಲಿ ನಡೆದಿದೆ. ಖಾಸಗಿ ವಸತಿ ಶಾಲೆ ಸಂಸ್ಥೆ ಮಾಲೀಕ ಧನಂಜಯ್ ಎನ್ನುವಾತ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಪೋಷಕರನ್ನು ಭೇಟಿ ಮಾಡದಂತೆ ಮಕ್ಕಳನ್ನು 15 ದಿನಗಳ ಕಾಲ ವಸತಿ ಶಾಲೆಯಲ್ಲಿ ಕೂಡಿ ಹಾಕಿದ್ದಾನೆ. ಇನ್ನು ಗಂಡನ ನೀಚ ಕೃತ್ಯವನ್ನು ಮುಚ್ಚಿ ಹಾಕಲು ಪತ್ನಿ ಶೈಲಜಾ ಸಹ ಬಾಲಕಿಗೆ ನಿತ್ಯ ಪರಂಗಿ ಹಣನ್ನು ತಿನ್ನಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಕ್ಕಳಿಗೆ ಪರೀಕ್ಷೆ ನೆಪದಲ್ಲಿ ಪೋಷಕರನ್ನ ಬೇಟಿ ಮಾಡಲು ಫೋನ್ ನಲ್ಲಿ ಮಾತನಾಡಲು ಬಿಡದೆ ಕೂಡಿ ಹಾಕಿದ್ದಾರೆ. ಜೊತೆಗೆ ನಡೆದ ವಿಚಾರ ಯಾರಿಗೂ ಹೇಳದಂತೆ ಆರೋಫಿಗಳಾದ ಧನಂಜಯ್ ಹಾಗೂ ಅವನ ಪತ್ನಿ ಶೈಲಜಾ ಬಾಲಕಿಗೆ ಪರಂಗಿ ಹಣನ್ನ ನಿತ್ಯ ತಿನ್ನಿಸಿ ಕಿರುಕುಳ ನೀಡಿದ್ದಾರೆ. ಇನ್ನೂ 15 ದಿನಗಳ ಕಾಲ ಕಿರಕುಳವನ್ನೆಲ್ಲ ಸಹಿಸಿಕೊಂಡಿದ್ದ ಮಕ್ಕಳು ನಿನ್ನೆ (ಫೆಬ್ರವರಿ 28) ಶಿಕ್ಷಕಿಯೊಬ್ಬರ ಫೋನ್ ನಿಂದ ಪೋಷಕರಿಗೆ ಕರೆ ಮಾಡಿ ಅಳುತ್ತಾ ತಮ್ಮ ಮೇಲಾದ ದೌರ್ಜನ್ಯವನ್ನು ಹೇಳಿದ್ದಾರೆ. ಕೂಡಲೇ ಪೋಷಕರು ಸಹ ಶಾಲೆಗೆ ದೌಡಾಯಿಸಿ ವಿಚಾರಿಸಿದಾಗ ಮಕ್ಕಳು ಹೇಳಿದ ಮಾತನ್ನು ಕೇಳಿ ಶಾಕ್ ಆಗಿದ್ದಾರೆ. ಬಳಿಕ ಪೋಷಕರು, ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಧನಂಜಯ್ ಹಾಗೂ ಆತನ ಪತ್ನಿ ವಿರುದ್ದ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಅನ್ವಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಧನಂಜಯ್ ಹಾಗೂ ಪತ್ನಿ ಶೈಲಾಜಾಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ವಸತಿ ಶಾಲೆಯ ಬಾಲಕಿಯರಿಗೆ ಲೈಂಗಿಕ ಕಿರುಕುಳ; ಶಾಲೆ ನಡೆಸುತ್ತಿದ್ದ ದಂಪತಿ ಮೇಲೆ ಪೋಕ್ಸೋ ಕೇಸ್!

ವಾರ್ಡನ್​​ ರೂಮನಲ್ಲೇ ಕೃತ್ಯ

ಇನ್ನು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ವಿಚಾರ ಗೊತ್ತಾಗ್ತಿದ್ದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲೇ ಮಾಲೀಕ ಧನಂಜಯ್ ವಾರ್ಡನ್ ರೂಮ್​​ನಲ್ಲೇ ಮಂಚ ಎಲ್ಲಾ ಹಾಕಿ ಹೈಫೈ ಮಾಡಿಕೊಂಡಿಕೊಂಡಿರುವುದು ಬೆಳಕಿಗೆ ಬಂದಿದ್ದು,  ಅದೇ ಕೊಠಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಅನಧಿಕೃತ ಹಾಸ್ಟೆಲ್ ನಡೆಸುತ್ತಿದ್ದ

ಶಾಲೆಯಲ್ಲಿ ಬಾಲಕಿಯರ ವಸತಿ ಶಾಲೆ ನಡೆಸಲು ಯಾವುದೇ ಅನುಮತಿ ಪಡೆಯದ ಆರೋಪ ಕೇಳಿ ಬಂದಿದ್ದು ಅಕ್ರಮವಾಗಿ ಹಾಸ್ಟೆಲ್ ನಡೆಸುತ್ತಿರುವುದು ಸಹ ತನಿಖೆಯಲ್ಲಿ ಬಯಲಾಗಿದೆ. ಇನ್ನೂ ಇಷ್ಟೆಲ್ಲ ನಡೆಯುತ್ತಿದ್ದರೂ ಬಿಇಒ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೈಲೆಂಟ್ ಇದ್ದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಈ ಬಗ್ಗೆ ಡಿಡಿಪಿಐ ಅವರನ್ನ ಕೇಳಿದರೆ ಇದು ನಮ್ಮ ವ್ಯಾಪ್ತಿಗೆ ಬರಲ್ಲ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುತ್ತೆ ಎಂದು ಜಾರಿಕೊಂಡಿದ್ದಾರೆ.

ಇನ್ನೂ ವಸತಿ ಶಾಲೆಯಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದಂತೆಯೇ  ಪೋಷಕರು ಶಾಲೆ ಬಳಿ ಬಂದು ಮಾಲೀಕನ ಕೃತ್ಯವನ್ನು ಖಂಡಿಸಿ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ದೇವನಹಳ್ಳಿ ಪೊಲೀಸರು, ದಂಪತಿಯನ್ನು ಪೋಕ್ಸೋ ಪ್ರಕರಣದಲ್ಲಿ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More
Follow Us