ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಣ್ಣೆ ಗ್ರಾಮದಲ್ಲಿ ನಿನ್ನೆ(ಮಾ.23) ರಾತ್ರಿ ಗ್ರಾಮದ ಯುವಕರೆಲ್ಲ ವಾಲಿಬಾಲ್ ಆಟವಾಡುವುದಕ್ಕೆ ಒಂದೆಡೆ ಸೇರಿದ್ದಾರೆ. ಈ ವೇಳೆ ವಾಲಿಬಾಲ್ ಆಡುತ್ತಿದ್ದ ಜಾಗಕ್ಕೆ ಅದೇ ಗ್ರಾಮದ ಮತ್ತೊಬ್ಬ ಅಪ್ರಾಪ್ತ ಬಾಲಕ ಬಂದಿದ್ದು, ನಾನು ಸಹ ನಿಮ್ಮ ಜೊತೆ ವಾಲಿಬಾಲ್ ಆಡುತ್ತೇನೆ ಎಂದು ಕೇಳಿದ್ದಾನೆ. ಈ ವೇಳೆ ಪ್ರತಿಭಾರಿ ವಾಲಿಬಾಲ್ ಆಡುವುದಕ್ಕೆ ಸೇರಿಸಿಕೊಂಡರೆ ಕಿರಿಕ್ ಮಾಡಿ ಆಟವನ್ನೆ ಹಾಳು ಮಾಡುತ್ತಿದ್ದೀಯಾ ಎಂದು ಕೆಲ ಯುವಕರು ಅಪ್ರಾಪ್ತನನ್ನ ಆಟಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಹೀಗಾಗಿ ಅಪ್ರಾಪ್ತ ಬಾಲಕ ಮತ್ತು ಆಟವಾಡುತ್ತಿದ್ದ ಒಂದಷ್ಟು ಜನ ಯುವಕರ ಮಧ್ಯೆ ಗಲಾಟೆ ನಡೆದಿದ್ದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಕೆಲವರು ಜಗಳ ಬಿಡಿಸಿ ಕಳಿಸಿದ್ದಾರೆ. ಕೆಲ ಕಾಲ ಬೇರೆಡೆಗೆ ತೆರಳಿದ ಅಪ್ರಾಪ್ತ ಬಾಲಕ ಮತ್ತೆ ಅದೇ ಸ್ತಳಕ್ಕೆ ವಾಪಸ್ಸಾಗಿದ್ದು, ಆಟಕ್ಕೆ ಸೇರಿಸಿಕೊಳ್ಳಲು ಒಪ್ಪದ ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಯುವಕ ರವಿಕುಮಾರ್ ಎಂಬಾತ ಜಗಳ ಬಿಡಿಸುವುದಕ್ಕೆ ಹೋಗಿದ್ದು ಆತನ ಮೇಲಿಯೇ ಅಪ್ರಾಪ್ತ ಯುವಕ ಚಾಕು ಇರಿದು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಇನ್ನು ಚಾಕು ಇರಿತದಿಂದ ಗಾಯಗೊಂಡ ರವಿಕುಮಾರ್ನನ್ನ ಸ್ಥಳಿಯರು ದೇವನಹಳ್ಳಿಯ ಆಸ್ವತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು, ಬೆನ್ನಿಗೆ ಚೂರಿ ಹಾಕಿದ್ದ ಕಾರಣ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಇತ್ತೀಚೆಗೆ ಅಪ್ರಾಪ್ತ ಯುವಕನ ಉಪಟಳ ಗ್ರಾಮದಲ್ಲಿ ಹೆಚ್ಚಾಗಿದ್ದು ಇದೇ ರೀತಿ ಹಲವು ಭಾರಿ ಗಲಾಟೆ ಮಾಡಿ ಗ್ರಾಮದಲ್ಲಿ ಶಾಂತಿ ಕೆದಡುವ ಕೆಲಸ ಮಾಡಿದ್ದಾನೆ ಎಂದು ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ:Bengaluru: ದೇವಸ್ಥಾನದ ಬಳಿ ಕಟ್ಟೆ ಮೇಲೆ ಕುಳಿತಿದ್ದ ಇಬ್ಬರಿಗೆ ಚಾಕು ಇರಿತ! ಮೂವರು ಆಸ್ಪತ್ರೆಗೆ ದಾಖಲು
ಒಟ್ಟಾರೆ ಆಟವಾಡುವ ವಯಸ್ಸಲ್ಲಿ ಆಟವಾಡಲು ಸೇರಿಸಿಕೊಳ್ಳಲಿಲ್ಲ ಎಂದು ಅಪ್ರಾಪ್ತ ಯುವಕ ಚಾಕು ಇರಿದು ಹಲ್ಲೆ ನಡೆಸಲು ಯತ್ನಿಸಿರುವುದು ನಿಜಕ್ಕೂ ವಿಪರ್ಯಾಸ. ಇನ್ನು ಈ ಸಂಬಂಧ ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಬುದ್ದಿ ಕಲಿಸುವ ಕೆಲಸ ಮಾಡಬೇಕಿದೆ.
ವರದಿ: ನವೀನ್ ಟಿವಿ9 ದೇವನಹಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ