ದಸರಾ ಹಬ್ಬದಲ್ಲಿ ಖಾಸಗಿ ಬಸ್​ಗಳಿಗೆ ಸುಗ್ಗಿ: ಆರ್​ಟಿಒ ದಾಳಿ, ಲಗೇಜ್ ಕ್ಯಾರಿಯರ್​ಗಳಲ್ಲಿ ಪ್ರಯಾಣಿಕರನ್ನ ನೋಡಿ ಶಾಕ್

ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಖಾಸಗಿ ಬಸ್​ಗಳ ಪರಿಶೀಲನೆ ಮಾಡಲಾಗಿದ್ದು ಲಗೇಜ್ ಕ್ಯಾರಿಯರ್​​ನಲ್ಲೂ ಜನರು ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಬಸ್​ನ ಕೆಳ‌ ಭಾಗದ ಲಗೇಜ್ ಇಡುವ ಜಾಗದಲ್ಲಿ ಬೆಡ್​ ಹಾಕಿ ಜನ ಮಲಗಿಕೊಂಡು ಪ್ರಯಾಣಿಸುತ್ತಿದ್ದಾರೆ. ಗಾಳಿಯಾಡದ ಲಗೇಜ್ ಕ್ಯಾರಿಯರ್​​ನಲ್ಲಿ ಮಲಗಿ ಪ್ರಯಾಣಿಸುತ್ತಿದ್ದ ಮೂವರನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ.

ದಸರಾ ಹಬ್ಬದಲ್ಲಿ ಖಾಸಗಿ ಬಸ್​ಗಳಿಗೆ ಸುಗ್ಗಿ: ಆರ್​ಟಿಒ ದಾಳಿ, ಲಗೇಜ್ ಕ್ಯಾರಿಯರ್​ಗಳಲ್ಲಿ ಪ್ರಯಾಣಿಕರನ್ನ ನೋಡಿ ಶಾಕ್
RTO ಅಧಿಕಾರಿಗಳ ಕಾರ್ಯಾಚರಣೆ
Follow us
ನವೀನ್ ಕುಮಾರ್ ಟಿ
| Updated By: ಆಯೇಷಾ ಬಾನು

Updated on: Oct 17, 2023 | 9:13 AM

ದೇವನಹಳ್ಳಿ, ಅ.17: ದಸರಾ (Mysuru Dasara) ಹಬ್ಬ ಹಿನ್ನೆಲೆ ಖಾಸಗಿ ಬಸ್​ಗಳು ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಆರ್​ಟಿಒ ಅಧಿಕಾರಿಗಳು (RTO Officers) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಟೋಲ್​ ಮೇಲೆ ಆರ್​ಟಿಒ ಅಧಿಕಾರಿಗಳು ದಾಳಿ ನಡೆಸಿ ಖಾಸಗಿ ಬಸ್​ಗಳ ಪರಿಶೀಲನೆ ನಡೆಸಿ ಚಾಲಕ, ನಿರ್ವಾಹಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಖಾಸಗಿ ಬಸ್​ಗಳು ಲಗೇಜ್ ಕ್ಯಾರಿಯರ್​​ನಲ್ಲೂ ಜನರನ್ನು ಸಾಗಿಸುತ್ತಿರುವುದು ಕಂಡು ಬಂದಿದೆ.

ದಸರಾ, ನವರಾತ್ರಿ ಹಿನ್ನೆಲೆ ಸಾಲು ಸಾಲು ರಜೆಗಳು ಸಿಕ್ಕಿದ್ದು ಜನ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್​ಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ. ಹೀಗಾಗಿ ದೇವನಹಳ್ಳಿ RTO ಶ್ರೀನಿವಾಸಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ದೇವನಹಳ್ಳಿ, ಏರ್​​ಪೋರ್ಟ್​ ಟೋಲ್ ಬಳಿ ಅಧಿಕಾರಿಗಳು ಖಾಸಗಿ ಬಸ್​ಗಳ ಪರಿಶೀಲನೆ ನಡೆಸಿದ್ದಾರೆ.

ಲಗೇಜ್ ಕ್ಯಾರಿಯರ್​​ನಲ್ಲೂ ಜನರ ಪ್ರಯಾಣ

ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಖಾಸಗಿ ಬಸ್​ಗಳ ಪರಿಶೀಲನೆ ಮಾಡಲಾಗಿದ್ದು ಲಗೇಜ್ ಕ್ಯಾರಿಯರ್​​ನಲ್ಲೂ ಜನರು ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಬಸ್​ನ ಕೆಳ‌ ಭಾಗದ ಲಗೇಜ್ ಇಡುವ ಜಾಗದಲ್ಲಿ ಬೆಡ್​ ಹಾಕಿ ಜನ ಮಲಗಿಕೊಂಡು ಪ್ರಯಾಣಿಸುತ್ತಿದ್ದಾರೆ. ಗಾಳಿಯಾಡದ ಲಗೇಜ್ ಕ್ಯಾರಿಯರ್​​ನಲ್ಲಿ ಮಲಗಿ ಪ್ರಯಾಣಿಸುತ್ತಿದ್ದ ಮೂವರನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ. ಲಗೇಜ್ ಕ್ಯಾರಿಯರ್​​ನಲ್ಲಿದ್ದವರನ್ನು ಕೆಳಗಿಳಿಸಿ ಆರ್​​ಟಿಒ ಅಧಿಕಾರಿಗಳು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ಖಾಸಗಿ ಬಸ್ ಸಿಬ್ಬಂದಿಯನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಖಾಸಗಿ ಬಸ್​ಗಳಿಗೆ ದಂಡ ಹಾಕಿ ಬಿಸಿ ಮುಟ್ಟಿಸಿದ್ದಾರೆ. ಹೈದರಾಬಾದ್​​ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್​ಗಳ ಲಗೇಜ್​, ಪ್ರಯಾಣಿಕರ ಟಿಕೆಟ್ ದರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದ ದೇವಾಲಯಗಳ ಎಲ್ಲಾ ಮಾಹಿತಿಗೆ ಶೀಘ್ರದಲ್ಲೇ ಸರ್ಕಾರದಿಂದ ಕಾಲ್​ ಸೆಂಟರ್​ ಆರಂಭ

ಅತ್ತ KSRTC ಹೆಚ್ಚುವರಿ ಬಸ್ ರಸ್ತೆಗಳಿಸಿದ್ದು ಮಾತ್ರವಲ್ಲದೆ 5 ರಿಂದ 10% ರಿಯಾಯಿತಿಯನ್ನೂ ಕೊಟ್ಟಿದೆ. ಆದರೂ ಖಾಸಗಿ ಸಾರಿಗೆಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ. ಬೆಂಗಳೂರಿನಿಂದ ಬಹುತೇಕ ಎಲ್ಲಾ ಕಡೆಗಳಿಗೆ ದುಪ್ಪಟ್ಟು ದರ ನಿಗದಿಮಾಡಲಾಗಿದೆ. ಎಸಿ ವೋಲ್ವೋ ಮಲ್ಟಿ ಆ್ಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಬೆಂಗಳೂರು-ಚೆನೈಗೆ ಅಕ್ಟೋಬರ್ 16ರಂದು ಟಿಕೆಟ್ ದರ 620ರೂ. ರಿಂದ 850 ರೂ. ಇತ್ತು. ಆದರೆ ಅಕ್ಟೋಬರ್ 20ರಂದು 1800-2100 ರೂ. ಏರಿಕೆಯಾಗಿದೆ.‌ ಬೆಂಗಳೂರು- ಹೈದರಾಬಾದ್ ಟಿಕೆಟ್ ದರ ಅ.17ಕ್ಕೆ ₹1300ರಿಂದ ₹1900 ಇದೆ. ಅಕ್ಟೋಬರ್ 20 ದರ ₹2800-₹3300 ಆಗಿದೆ. ಬೆಂಗಳೂರು-ಕೊಯಮತ್ತೂರಿಗೆ ಈ ಹಿಂದೆ ಟಿಕೆಟ್ ದರ ₹700 ರಿಂದ ₹1100 ಇತ್ತು. ಆದರೆ ಅಕ್ಟೋಬರ್ 20 ದರ ₹2300-₹2800ಕ್ಕೆ ಏರಿದೆ. ಬೆಂಗಳೂರು – ಮುಂಬೈ ಟಿಕೆಟ್ ದರ ₹1300-₹1600 ದಿಂದ ₹2300-₹2700 ಆಗಿದೆ. ಅಲ್ಲದೆ ಬೆಂಗಳೂರಿಂದ ಗೋವಾಗೆ ಟಿಕೆಟ್ ದರ ₹1000 ದಿಂದ ₹1300 ಇತ್ತು. ಅಕ್ಟೋಬರ್ 20 ದರ ₹2800-₹3100ಕ್ಕೆ ಏರಿದೆ ಹೀಗಾಗಿ ಪ್ರಯಾಣಿಕರು ಬೆಲೆ ಏರಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್