ನರ್ಸಿಂಗ್​ ಮಾಡಲು ಬಿಹಾರದಿಂದ ಬಂದಿದ್ದ, ಓದಿನಲ್ಲೂ ಮುಂದಿದ್ದ ಆದರೆ ಪ್ರೇಮಪಾಶಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟ

ಆತ ಬಿಹಾರದಿಂದ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಿದ್ದ, ಆದ್ರೆ ತನ್ನೂರಿನ ಯುವತಿಯೊಂದಿಗೆ ಪ್ರೇಮದಾಟದಲ್ಲಿ ಮುಳುಗಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓದಿ ನರ್ಸಿಂಗ್ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಬೇಕಿದ್ದ ಯುವಕ ಹದಿಹರೆಯದ ವಯಸ್ಸಿನಲ್ಲಿ ಪ್ರೇಮದ ಮೋಹಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿರುವುದು ದುರದೃಷ್ಟಕರ.

ನರ್ಸಿಂಗ್​ ಮಾಡಲು ಬಿಹಾರದಿಂದ ಬಂದಿದ್ದ, ಓದಿನಲ್ಲೂ ಮುಂದಿದ್ದ ಆದರೆ ಪ್ರೇಮಪಾಶಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟ
ಬಿಹಾರದಿಂದ ಶಿಕ್ಷಣಕ್ಕಾಗಿ ಬಂದಿದ್ದ, ಪ್ರೇಮಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ
Edited By: ಸಾಧು ಶ್ರೀನಾಥ್​

Updated on: Mar 21, 2024 | 9:53 AM

ಆತ ದೂರದ ಬಿಹಾರದಿಂದ (Bihar) ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಿದ್ದ, ಓದೋದ್ರಲ್ಲೂ ಮುಂದೆ ಇದ್ದ, ಓದ್ಕೊಂಡು ಇದ್ದೀನಿ, ನಾನಾಯ್ತು ನನ್ನ ಪಾಡಾಯ್ತು ಅಂತಿದ್ರೆ ಎಲ್ಲವೂ ಸರಿಯಾಗಿ ಇರೋದು, ಆದ್ರೆ ತನ್ನೂರಿನ ಯುವತಿಯೊಂದಿಗೆ ಪ್ರೇಮದಾಟದಲ್ಲಿ ಮುಳುಗಿದ್ದ ಆತ ಕೊನೆಗೆ ಪ್ರೀತಿಯ ವಿಚಾರದಲ್ಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶವಗಾರದ ಬಳಿ ಪೋಷಕರ ಗೋಳಾಟ,ಸಹಪಾಠಿಗಳ ದಿವ್ಯ ಮೌನ. ಮೇಲಿನ ಫೋಟೋದಲ್ಲಿರುವ ಈತ 19 ವರ್ಷದ ಸೋನುಕುಮಾರ್‌.

ಬಿಹಾರ ಮೂಲದ ಸೋನು ಕುಮಾರ್‌ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala) ನಗರದ ಸನ್ ಫ್ಲವರ್ ಕಾಲೇಜೊಂದರಲ್ಲಿ ಬಿಎಸ್ಸಿ ನರ್ಸಿಂಗ್‌ ವ್ಯಾಸಂಗ (Nursing) ಮಾಡುತ್ತಿದ್ದ. 2 ನೇ ವರ್ಷದ ನರ್ಸಿಂಗ್‌ ವ್ಯಾಸಂಗ ಮಾಡುತ್ತಿದ್ದ ಸೋನುಕುಮಾರ್‌ ಓದಿನಲ್ಲೂ ಮುಂದೆ ಇದ್ದ, ಪ್ರೇಮದ ವಿಚಾರದಲ್ಲಿ ಬೇಸತ್ತಿದ್ದ ಸೋನು ತಾನು ವಾಸವಿದ್ದ ಹಾಸ್ಟೆಲ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಿಹಾರ ಮೂಲದ ಅಂದರೆ ತನ್ನೂರಿನ ಯುವತಿಯೊಂದಿಗೆ ಪ್ರೀತಿಯಲ್ಲಿ (Love) ಮುಳುಗಿದ್ದ ಯುವಕ ಪ್ರೇಮ ಪಾಷದ ವಿಚಾರದಲ್ಲಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಹೌದು ಮೃತ ಸೋನುಕುಮಾರ್‌ ಹಲವು ದಿನಗಳಿಂದ ಪ್ರೀತಿಯಲ್ಲಿ ಮುಳುಗಿಹೋಗಿದ್ದ, ತರಗತಿಗಳು ಮುಗಿಯುತ್ತಿದ್ದಂತೆ ಪ್ರೇಯಸಿ ಜೊತೆ ಸದಾಕಾಲ ಫೋನ್‌ನಲ್ಲಿ ಬ್ಯುಸಿ ಇರುತ್ತಿದ್ದನಂತೆ.

Also Read: ಪ್ರೀತಿ ಪ್ರೇಮ ಪ್ರಣಯ ಎಂದು ಕಾಲೇಜಿಗೆ ಚಕ್ಕರ್ ಹಾಕಿ ಹುಡುಗಿ ಹಿಂದೆ ಸುತ್ತಾಡ್ತಿದ್ದ, ಕೇರಳಕ್ಕೆ ಹೋದವನು ಹೆಣವಾಗಿ ಬಂದ

ಇತ್ತೀಚೆಗೆ ಆತ ಪ್ರೀತಿಸುತ್ತಿದ್ದ ಯುವತಿಯೊಡನೆ ಯಾವಾಗಲೂ ಜಗಳ ಆಡುತ್ತಿದ್ದನಂತೆ. ಮೊನ್ನೆ ಮಂಗಳವಾರ ರಾತ್ರಿಯೂ ಸಹ ತನ್ನ ಪ್ರೇಯಸಿಯೊಂದಿಗೆ ಜೋರಾಗಿ ಜಗಳ ಆಡುತ್ತಿದ್ದನಂತೆ. ಸ್ನೇಹಿತರೆಲ್ಲ ಅದನ್ನ ನೋಡಿ ಸಮಾಧಾನ ಮಾಡಿದ್ದರಂತೆ. ಬಳಿಕ ಇಡೀ ರಾತ್ರಿ ಜಗಳ ಆಡಿ ಮನನೊಂದು ಬೇಸರದಲ್ಲಿ ಇದನಂತೆ.

ಬೆಳಿಗ್ಗೆ ಎಂದಿನಂತೆ ಎಲ್ಲರೂ ಕಾಲೇಜಿಗೆ ತೆರಳಿದ್ರಂತೆ. ಅದ್ರೆ ಈತ ನನಗೆ ಹೊಟ್ಟೆನೋವು ಇದೆ, ಇವತ್ತು ನಾನು ಕಾಲೇಜಿಗೆ ಬರಲ್ಲವೆಂದು ಹಾಸ್ಟೆಲ್ ನಲ್ಲೇ ಇದ್ದನಂತೆ. ಮಧ್ಯಾಹ್ನ ಊಟಕ್ಕೆ ಬಂದಾಗ ಹಾಸ್ಟೆಲ್ ರೂಂ ನಿಂದ ನೋಡಿದಾಗ ಆತ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿದ್ದನಂತೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Read More
Follow Us