ಕೊರೊನಾ ಸೋಂಕಿತರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಒತ್ತಡ; ಕೊವಿಡ್ ತುರ್ತು ಸಹಾಯವಾಣಿಯಿಂದಲೂ ಸಿಗದ ನೆರವು

ಫೋರ್ಟಿಸ್ ಆಸ್ಪತ್ರೆಯಲ್ಲಿ ರೋಗಿಯನ್ನು ದಾಖಲಿಸಿಕೊಂಡ ಅಲ್ಲಿನ ಸಿಬ್ಬಂದಿಗಳು, ಮುಂಜಾನೆ ವೇಳೆಗೆ 11 ಸಾವಿರ ರೂಪಾಯಿ ಬಿಲ್ ಮಾಡಿದ್ದಾರೆ. ನಂತರ ರೋಗಿಯ ಕೊವಿಡ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದ ಹಿನ್ನೆಲೆ ಸೋಂಕಿತನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಒತ್ತಡ ಹೇರಿದ್ದಾರೆ.

  • TV9 Web Team
  • Published On - 7:39 AM, 18 Apr 2021
ಕೊರೊನಾ ಸೋಂಕಿತರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಒತ್ತಡ; ಕೊವಿಡ್ ತುರ್ತು ಸಹಾಯವಾಣಿಯಿಂದಲೂ ಸಿಗದ ನೆರವು
ಫೋರ್ಟಿಸ್ ಆಸ್ಪತ್ರೆ

ಬೆಂಗಳೂರು: ಸೋಂಕಿತರೊಬ್ಬರಿಗೆ ಕೊವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಒತ್ತಡ ಹೆರಿದ ಘಟನೆ ಬೆಂಗಳೂರಿನ ನಾಗರಬಾವಿ ಫೋರ್ಟಿಸ್ ಆಸ್ಪತ್ರೆಯಲ್ಲಿ ನಡೆದಿದೆ. ವ್ಯಕ್ತಿಗೆ ಉಸಿರಾಟದ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ತಡರಾತ್ರಿ 12 ಗಂಟೆ ಸುಮಾರಿಗೆ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದ್ದಾರೆ. ಮೊದಲು ಜಿ.ಎಂ.ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ದಿದ್ದ ಕುಟುಂಬ, ಅಲ್ಲಿ ಚಿಕಿತ್ಸೆ ಸಿಗದ ಹಿನ್ನೆಲೆ ಫೋರ್ಟಿಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಫೋರ್ಟಿಸ್ ಆಸ್ಪತ್ರೆಯಲ್ಲಿ ರೋಗಿಯನ್ನು ದಾಖಲಿಸಿಕೊಂಡ ಅಲ್ಲಿನ ಸಿಬ್ಬಂದಿಗಳು, ಮುಂಜಾನೆ ವೇಳೆಗೆ 11 ಸಾವಿರ ರೂಪಾಯಿ ಬಿಲ್ ಮಾಡಿದ್ದಾರೆ. ನಂತರ ರೋಗಿಯ ಕೊವಿಡ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದ ಹಿನ್ನೆಲೆ ಸೋಂಕಿತನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಒತ್ತಡ ಹೇರಿದ್ದಾರೆ. ಸ್ಯಾಚಯರೇಷನ್ ಲೆವೆಲ್ 65 ಇರುವ ರೋಗಿಯನ್ನ ದಾಖಲಿಸಿಕೊಳ್ಳದೇ ಚಿಕಿತ್ಸೆ‌ ಮುಂದುವರೆಸಲು ನಿರಾಕರಣೆ ಮಾಡಿದ್ದು, ಬೇರೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಸದ್ಯ ಇರುವ ಆಸ್ಪತ್ರೆಯಿಂದ ತಂದೆಯನ್ನು ಶಿಫ್ಟ್ ಮಾಡಲಾಗದ ಪರಿಸ್ಥಿತಿಯಲ್ಲಿ ಪುತ್ರಿ ಇದ್ದಾರೆ.

ಆಸ್ಪತ್ರೆಯಲ್ಲಿ 10 ಬೆಡ್ ಮಾತ್ರ ಕೊವಿಡ್‌ಗೆ ಮೀಸಲಿದೆ. ಕೊವಿಡ್ ಸೋಂಕಿತನ ಶ್ವಾಸಕೋಶದಲ್ಲಿ ಇನ್ಫೆಕ್ಷನ್ ಆಗಿದೆ. ನಿಮ್ಮ ರಿಸ್ಕ್‌ನಲ್ಲಿ ಆಸ್ಪತ್ರೆಯಿಂದ ತೆರಳಿ ಎಂದು ಫೋರ್ಟಿಸ್ ಆಸ್ಪತ್ರೆ ಸಿಬ್ಬಂದಿ ಒತ್ತಡ ಹೇರಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಕೊವಿಡ್ ತುರ್ತು ಸಹಾಯವಾಣಿಗೆ ಕರೆ ಮಾಡಿದರೆ ಅವರು ಕೂಡ ನಿರ್ಲಕ್ಷ್ಯ ತೋರಿದ್ದಾರೆ. ಇನ್ನು ಬೆಳಗ್ಗೆ 9.30ರ ಬಳಿಕ ಬೆಡ್ ಖಾಲಿಯಾದರೆ ಹೇಳುತ್ತೇವೆ ಎಂದು ಹೇಳಿರುವ ಆಸ್ಪತ್ರೆ ಸಿಬ್ಬಂದಿಗಳು ಅಲ್ಲಿಯವರೆಗೂ ಬೆಡ್ ಖಾಲಿ ಇಲ್ಲ ಎಂದಿದ್ದಾರೆ ಎಂದು ಸೋಂಕಿತರ ಪುತ್ರಿ ಅಳಲು ತೋಡಿಕೊಂಡಿದ್ದಾರೆ. ಸದ್ಯ ಈತ ತಂದೆಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಕೊರೊನಾ ಸೋಂಕಿತ ವ್ಯಕ್ತಿಯ ಪುತ್ರಿ ಆತಂಕದಲ್ಲಿದ್ದಾರೆ.

ಇದನ್ನೂ ಓದಿ:

ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಹೊರಗುತ್ತಿಗೆ ವೈದ್ಯರು, ಸಿಬ್ಬಂದಿಗಳ ಸೇವಾವಧಿ ವಿಸ್ತರಣೆ: ಸಚಿವ ಡಾ. ಸುಧಾಕರ್

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಕೊರೊನಾ ಸೋಂಕು; ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ

(Hospital staff refused to give treatment to covid 19 patient in Bangalore)