ಸರ್ಕಾರಿ ಭೂಮಿಯಲ್ಲಿ ಅಕ್ರಮ ಸಸಿ: ಸರ್ವೆಗೆ ಆದೇಶಸಿದ ಕೆಐಡಿಬಿ

ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಶಪಡಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ದಾಬಸ್‌ಪೇಟೆ‌ ಸುತ್ತಮುತ್ತಲಿನ ಭೂಮಿಯಲ್ಲಿ ಸಸಿ ನೆಟ್ಟು ಅಕ್ರಮ ಎಸಗಿರುವ ಬಗ್ಗೆ ಟಿವಿ9ನಲ್ಲಿ ವಿಸ್ತೃತ ವರದಿ ಮಾಡಿದ ಬೆನ್ನಲ್ಲೇ ಎಚ್ಚತ್ತು, ಈ ಬಗ್ಗೆ ಸರ್ವೆ ನಡೆಸುವಂತೆ ಕೆಐಎಡಿಬಿ ಆದೇಶಸಿದೆ.

ಸರ್ಕಾರಿ ಭೂಮಿಯಲ್ಲಿ ಅಕ್ರಮ ಸಸಿ: ಸರ್ವೆಗೆ ಆದೇಶಸಿದ ಕೆಐಡಿಬಿ
ಕೆಐಎಡಿಬಿ
ಬಿ ಮೂರ್ತಿ, ನೆಲಮಂಗಲ Edited By: ವಿವೇಕ ಬಿರಾದಾರ

Updated on: May 22, 2024 | 10:33 AM

ನೆಲಮಂಗಲ, ಮೇ 22: ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವಶಪಡಿಸಿಕೊಂಡಿರುವ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ನೆಲಮಂಗಲದ (Nelamangala) ದಾಬಸ್‌ಪೇಟೆ‌ ಸುತ್ತಮುತ್ತಲಿನ ಭೂಮಿಯಲ್ಲಿ ಸಸಿ ನೆಟ್ಟು ಅಕ್ರಮ ಎಸಗಿರುವ ಬಗ್ಗೆ ಟಿವಿ9ನಲ್ಲಿ ವಿಸ್ತೃತ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಕೆಐಎಡಿಬಿ, ಎಷ್ಟು ಎಕರೆ ಪ್ರದೇಶದಲ್ಲಿ ಸಸಿ ನಡೆಲಾಗಿದೆ ಎಂಬುವುದರ ಬಗ್ಗೆ ಜಂಟಿ ಸರ್ವೆ ನಡೆಸಿ, ವರದಿ ಸಲ್ಲಿಸುವಂತೆ ಕೆಐಡಿಬಿ ಸಿಇಒ ಮಹೇಶ್​ ಆದೇಶ ಹೊರಡಿಸಿದ್ದಾರೆ. ಮುಖ್ಯ ಅಭಿಯಂತರರು, ವಿಶೇಷ ಭೂಸ್ವಾಧೀನಾಧಿಕಾರಿ ನೇತೃತ್ವದಲ್ಲಿ ಸರ್ವೆ ನಡೆಸಿ, ಮೂರು ದಿನದಲ್ಲಿ ವರದಿ ನೀಡುವಂತೆ ಸೂಚಿಸಿದ್ದಾರೆ.

ಈ ಅಕ್ರಮದಲ್ಲಿ ಮಧ್ಯವರ್ತಿಗಳ ಜೊತೆ ಕೆಐಎಡಿಬಿ ಅಧಿಕಾರಿಗಳು ಭಾಗಿಯಾಗಿರುವ ಆರೋಪ ಕೇಳಿಬಂದಿದೆ.
ಕೈಗಾರಿಕಾ ಉದ್ದೇಶಕ್ಕೆಂದು ರೈತರ ಭೂಮಿಯನ್ನು ಕೆಐಎಡಿಬಿ(KIADB) ಖರೀದಿಸುತ್ತದೆ. ಆದರೆ, ಸರ್ಕಾರ ಹಣ ನೀಡಿ‌ ಖರೀದಿಸಿದರೂ ಮತ್ತೊಂದು ಮಾರ್ಗದಲ್ಲಿ ಬ್ರೋಕರ್​ಗಳ ಮುಖಾಂತರ ಕೆಐಎಡಿಬಿ‌ ಅಧಿಕಾರಿಗಳು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಕೆಲ ಖಾಸಗಿ ಶಾಲೆಗಳು ಕಾರ್ಯಾರಂಭ: ಮಕ್ಕಳ ಹಕ್ಕುಗಳ ಆಯೋಗದಿಂದ ದಾಳಿ

ನೆಲಮಂಗಲ, ದಾಬಾಸ್ ಪೇಟೆ‌ಯ ಸುತ್ತಮುತ್ತಲಿನ ಪ್ರದೇಶದಲ್ಲಿನ ಭೂಮಿಗೆ ಸರ್ಕಾರ ವಶಕ್ಕೆ ಪಡೆಯೊದಕ್ಕೆ ನೀಡುವ ಹಣಕ್ಕಿಂತ ಹೆಚ್ಚಿನ ಹಣ‌ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಈ ಹಿನ್ನಲೆ ತೋಟಗಾರಿಕೆ ಇಲಾಖೆ ಮತ್ತು ಕೆಐಎಡಿಬಿ ಅಧಿಕಾರಿಗಳು ಆಂಧ್ರದ ರಾಜಮಂಡ್ರಿ ನರ್ಸರಿಯಿಂದ ರಾತ್ರೋರಾತ್ರಿ‌‌ ಅಡಿಕೆ, ಮಾವು, ಹುಣಸೆ ಸೇರಿ ಲಕ್ಷಾಂತರ ಸಸಿಗಳನ್ನು ತರಿಸಿ ನೆಟ್ಟು, ಪ್ರತಿ ಗಿಡಕ್ಕೂ ಪರಿಹಾರದ ಹಣ ಪಡೆದು, ಈ ಹಣವನ್ನು ಗುಳುಂ ಮಾಡುವ ಪ್ಲ್ಯಾನ್‌ ಇದಾಗಿದೆ.

ಒಂದೊಂದು ಸಸಿಗೂ ರೈತರಿಗೆ ಸರ್ಕಾರ ಪರಿಹಾರ ನೀಡುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಅಧಿಕಾರಿಗಳು, ಒಂದೊಂದು ಎಕರೆಯಲ್ಲಿ ಸಾವಿರಾರು‌ ಮರದ ಸಸಿಗಳನ್ನು ತಂದು ನೆಟ್ಟು, ಬ್ರೋಕರ್​ಗಳ ಜೊತೆ ಸೇರಿ ಅಧಿಕಾರಿಗಳು ಕೋಟ್ಯಾಂತರ ಹಣ ಗುಳುಂ ಮಾಡಲು ಮುಂದಾಗಿದ್ದಾರೆ. ಅಮಾಯಕ ರೈತರಿಗೆ ಬೋಗಸ್ ದಾಖಲೆ ಸೃಷ್ಟಿಸಿ ಹಣ ಪೀಕಲು ಸಜ್ಜಾಗಿದ್ದು, ಮಾಚನಹಳ್ಳಿ, ಘಂಟೆ ಹೊಸಹಳ್ಳಿ, ಗೆದ್ದಲಹಳ್ಳಿ, ಹುಲಕುಂಟೆ, ಕೋಡಿಪಾಳ್ಯ, ಬಿದಲೂರು,‌ ಹನುಮಂತಪುರ, ಗೊಟ್ಟಿಕೆರೆ, ಬರಗೇನಹಳ್ಳಿ, ಕಾಸರಘಟ್ಟ,ಕಂಬಾಳು, ಓಬಳಾಪುರ ಸೇರಿದಂತೆ ‌ಹಲವು ಗ್ರಾಮದಲ್ಲಿನ ಭೂಮಿ, ಮತ್ತು ಈಗಾಗಲೇ ರಾಜ್ಯದ ಹಲವು ಜಿಲ್ಲೆಯಲ್ಲಿ ಐಎಡಿಬಿ‌ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಹಣ ಗುಳಂ ಮಾಡಿರುವ ಆರೋಪ ಕೇಳಿಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Loading...
Unable to load recommendations.
Follow Us