ಸ್ಲಂ ನಿವಾಸಿಗಳು, ನಿರ್ಗತಿಕರಿಗೆ ಪರಪ್ಪನ ಅಗ್ರಹಾರ ಪೊಲೀಸರಿಂದ ದಿನಸಿ ಕಿಟ್ ವಿತರಣೆ

ಸ್ಲಂ ನಿವಾಸಿಗಳು, ನಿರ್ಗತಿಕರಿಗೆ ಪರಪ್ಪನ ಅಗ್ರಹಾರ ಪೊಲೀಸರಿಂದ ದಿನಸಿ ಕಿಟ್ ವಿತರಣೆ

ಆನೇಕಲ್: ಮಹಾಮಾರಿ ಕೊರೊನಾ ವಿರುದ್ಧದ ಹೊರಾಟಕ್ಕೆ ಇಡೀ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಈ ನಡುವೆ ಜನ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅನ್ನ ನೀರು ಇಲ್ಲದೆ ಪರಿತಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಪೊಲೀಸರು ಸ್ಲಂ ನಿವಾಸಿಗಳಿಗೆ, ನಿರ್ಗತಿಕರಿಗೆ ದಿನಸಿ ಕಿಟ್​ಗಳನ್ನ ವಿತರಿಸಿ ಹಸಿದವರಿಗೆ ನೆರವಾಗಿದ್ದಾರೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸ್ಲಂ ನಿವಾಸಿಗಳಿಗೆ, ನಿರ್ಗತಿಕರಿಗೆ ಪರಪ್ಪನ ಅಗ್ರಹಾರ ಠಾಣಾ ಇನ್ಸ್ಪೆಕ್ಟರ್ ನಂದೀಶ್ ಕಿಟ್ ವಿತರಣೆ ಮಾಡಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ದಿನಸಿ ಕಿಟ್ ವಿತರಣೆ ಮಾಡಲಾಗಿದೆ.

Click on your DTH Provider to Add TV9 Kannada