ಬಕ್ರೀದ್ ಸಮೀಪಿಸುತ್ತಿರುವ ಹಿನ್ನೆಲೆ ಹೆಚ್ಚಾದ ಕುರಿ-ಮೇಕೆ ಕಳ್ಳತನ: ರೈತರು ಕಂಗಾಲು

ಬಕ್ರೀದ್​​ ಹಬ್ಬ ಸಮೀಪಿಸುತ್ತಿದ್ದಂತೆ ನೆಲಮಂಗಲ ತಾಲ್ಲೂಕಿನ ವಿವಿಧೆಡೆ ಕುರಿ-ಮೇಕೆ ಕಳ್ಳತನ ಹೆಚ್ಚಾಗಿದೆ. ಸುಮಾರು 25 ರಿಂದ 30 ಸಾವಿರ ರೂ. ಬೆಲೆ ಬಾಳುವ ಒಂದೊಂದು ಮೇಕೆಗಳನ್ನು ಕಳದುಕೊಂಡ ರೈತರು ಕಂಗಾಲಾಗಿದ್ದಾರೆ.  

ಬಕ್ರೀದ್ ಸಮೀಪಿಸುತ್ತಿರುವ ಹಿನ್ನೆಲೆ ಹೆಚ್ಚಾದ ಕುರಿ-ಮೇಕೆ ಕಳ್ಳತನ: ರೈತರು ಕಂಗಾಲು
ಕುರಿ-ಮೇಕೆ ಕಳ್ಳತನ
Follow us
|

Updated on: Jun 23, 2023 | 11:25 AM

ನೆಲಮಂಗಲ: ಇನ್ನೇನು ಕೆಲವೇ ದಿನಗಳಲ್ಲಿ ಬಕ್ರೀದ್ (Bakrid)​​ ಹಬ್ಬ ಸಮೀಪಿಸುತ್ತಿದೆ. ಈದ್-ಉಲ್-ಅಧಾ ಹಬ್ಬ  ಹಿನ್ನೆಲೆ ನೆಲಮಂಗಲ ತಾಲ್ಲೂಕಿನ ವಿವಿಧೆಡೆ ಕುರಿ (Sheep) ಮೇಕೆ ಕಳ್ಳತನ ಹೆಚ್ಚಾಗಿದೆ. ರಾತ್ರಿ 2 ಗಂಟೆ ಸಮಯದಲ್ಲಿ ಹೆಚ್ಚಾಗಿ ಕಳ್ಳತನ ನಡೆಯುತ್ತಿದೆ. ರೈತ ರಾಮಯ್ಯ ಎಂಬುವವರಿಗೆ ಸೇರಿದ ನಾಲ್ಕು ಮೇಕೆಗಳನ್ನ ಖದೀಮರು ಕಳ್ಳತನ ಮಾಡಿದ್ದಾರೆ. ಕಳೆದ 15 ದಿನದ ಹಿಂದಷ್ಟೇ ಒಂದು ಮೇಕೆ ಕದ್ದೊಯ್ದಿದ್ದರು. ಒಂದೊಂದು ಮೇಕೆಗಳು 25 ರಿಂದ 30 ಸಾವಿರ ರೂ. ಬೆಲೆ ಬಾಳುತ್ತವೆ.

ನೆಲಮಂಗಲ ತಾಲೂಕು ಸೇರಿದಂತೆ ಮಾದನಾಯಕನಹಳ್ಳಿ ಠಾಣ ವ್ಯಾಪ್ತಿಯಲ್ಲಿ ಕಳೆದ ಹದಿನೈದು ದಿನಗಳಲ್ಲಿ ನೂರಕ್ಕೂ ಹೆಚ್ಚು ಕುರಿ ಮೇಕೆ ಕಳ್ಳತನ ಆಗಿದೆ. ಕುರಿ ಕಳ್ಳತನದಿಂದ ವ್ಯಾಪಾರ ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಮಹಿಳೆ ಸಾವು

ಚಾಲಾಕಿ ಕಳ್ಳರ ಹಾವಳಿ: ಚಿನ್ನಾಭರಣ ಕಳ್ಳತನ

ಶಿವಮೊಗ್ಗ: ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಕೆಲ ಗ್ಯಾಂಗ್​ಗಳು ಯಮಾರಿಸಿ ಚಿನ್ನಾಭರಣವನ್ನ ರಾಬರಿ ಮಾಡುತ್ತಿರುವ ಘಟನೆ ನಗರದಲ್ಲಿ ಕಂಡುಬಂದಿದೆ. ಕಳೆದ ವಾರವಷ್ಟೇ ಗೋಪಿ ವೃತ್ತದದ ಹೆಡ್ ಪೋಸ್ಟ್ ಆಫೀಸ್ ಬಳಿ ಭದ್ರಾವತಿಯಿಂದ ಬಂದಿದ್ದ ಮಹಿಳೆಯ ಮೈಮೇಲೆಯಿದ್ದ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿತ್ತು.

ತಾವು ಚಕ್ಕಿಂಗ್ ಆಫೀಸರ್ ಎಂದು ಪರಿಚಯ ಮಾಡಿಕೊಂಡು ಕಾಳಜಿ ತೋರಿಸಿದ್ದಾರೆ. ಪೇಪರ್​ನಲ್ಲಿ ಚಿನ್ನಾಭರಣವನ್ನ ಇಟ್ಟುಕೊಂಡು ಹೋಗಿ ಎಂದು ಕುತ್ತಿಗೆಯಲ್ಲಿದ್ದ ಬಂಗಾರದ 50 ಗ್ರಾಂದ ಮಾಂಗಲ್ಯವನ್ನು ತೆಗೆಯಿಸಿದ್ದಾರೆ. ಬಳಿಕ ಅದನ್ನು ಪೇಪರ್​ನಲ್ಲಿ ಹಾಕಿಕೊಟ್ಟಂತೆ ನಟಿಸಿ, ಇಬ್ಬರು ಕಳ್ಳರು ಚಿನ್ನಾಭರಣವನ್ನು ಎಗರಿಸಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದವರಿಂದ ಸುಲಿಗೆ ಆರೋಪ: ಕಾಂಗ್ರೆಸ್ ಮುಖಂಡ ಸೇರಿದಂತೆ 4 ಜನ ಅರೆಸ್ಟ್​​ ​

ಲಾರಿ-ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

ಮಡಿಕೇರಿ: ಕುಶಾಲನಗರ ತಾಲೂಕಿನ ಕೂಡ್ಲೂರು ಗ್ರಾಮದ ಬಳಿ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಗಾಧರ್​(35) ಮೃತ ವ್ಯಕ್ತಿ. ಹಾಸನ ಜಿಲ್ಲೆ ಅರಸೀಕೆರೆ ನಿವಾಸಿ ಗಂಗಾಧರ್​​; ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ