ಬೆಂಗಳೂರು, ಮೇ.30: ಬೆಂಗಳೂರಿಗೆ ಇಂದು(ಮೇ.30) ಮಧ್ಯರಾತ್ರಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಆಗಮಿಸುತ್ತಿದ್ದಾರೆ. ಈ ಹಿನ್ನಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಸ್ಐಟಿ(SIT)ತಂಡ ಬಂದಿದ್ದಾರೆ. ಮೊದಲು ವಿಮಾನ ಇಳಿದು ಇಮಿಗ್ರೇಷನ್ಗೆ ಆಗಮಿಸುವ ಪ್ರಜ್ವಲ್ ರೇವಣ್ಣ, ಇಮಿಗ್ರೇಷನ್ ವೇಳೆಯೇ ಏರ್ಪೋರ್ಟ್ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ನಂತರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೋಲೀಸರಿಗೆ ಒಪ್ಪಿಸಲಿದ್ದು, ಬಳಿಕ ಏರ್ಪೋರ್ಟ್ ಪೋಲೀಸರ ಮೂಲಕ ಎಸ್ಐಟಿ ವಶಕ್ಕೆ ಪಡೆಯಲಿದೆ.
ಇನ್ನು ಮಧ್ಯರಾತ್ರಿ 12.30 ಕ್ಕೆ ಪ್ರಜ್ವಲ್ ರೇವಣ್ಣ ಅವರು ಹತ್ತಿರುವ ವಿಮಾನ ಏರ್ಪೋರ್ಟ್ಗೆ ಆಗಮಿಸಲಿದೆ. ಈ ವೇಳೆ ಏರ್ಪೋರ್ಟ್ ರೀತಿ-ರಿವಾಜು ಮುಗಿಯುವುದಕ್ಕೆ ಕನಿಷ್ಠ 20 ರಿಂದ 30 ನಿಮಿಷ ಕಾಲಾವಕಾಶ ಇರಲಿದೆ. ನಂತರ ವಿಮಾನ ನಿಲ್ದಾಣದಿಂದ ಪ್ರಜ್ವಲ್ ಹೊರ ಬರಲಿದ್ದಾರೆ. ಈ ಹಿನ್ನಲೆ ಏರ್ಪೋರ್ಟ್ ಟರ್ಮಿನಲ್ ಒಳಗೆ ತೆರಳಲು 8ರಿಂದ 10 ಅಧಿಕಾರಿಗಳಿಗೆ ಪಾಸ್ ನೀಡುವಂತೆ ಪತ್ರ ಏರ್ಪೋರ್ಟ್ ಭದ್ರತಾ ಪಡೆಗೆ ಎಸ್ಐಟಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣ ಹಾಸಿಗೆ, ದಿಂಬನ್ನೇ ಕೊಂಡೊಯ್ದ ಎಸ್ಐಟಿ!
ಪಾಸ್ ನೀಡಿದ ನಂತರ ಅಂದರೆ ರಾತ್ರಿ 10 ಗಂಟೆಯ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ SIT ಅಧಿಕಾರಿಗಳು ಆಗಮಿಸಲಿದ್ದಾರೆ. ಈಗಾಗಲೇ ಅಧಿಕಾರಿಗಳ ಆಧಾರ್ ಕಾರ್ಡ್ ಜೊತೆ ವಿವರಣೆ ನೀಡಿರುವ ಎಸ್ಐಟಿ, ಪಾಸ್ ಮಾಡಿಕೊಡುವ ಕೆಲಸದಲ್ಲಿ ಏರ್ಪೋರ್ಟ್ ಸಿಬ್ಬಂದಿ ನಿರತರಾಗಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್, ‘ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬಂದ ತಕ್ಷಣ ಬಂಧಿಸಲಾಗುವುದು. ಅವರ ಬಂಧನಕ್ಕೆ ಈಗಾಗಲೇ ವಾರೆಂಟ್ ಸಿದ್ಧಪಡಿಸಲಾಗಿದೆ. ವಿಶೇಷ ತನಿಖಾ ತಂಡದ ಅಧಿಕಾರಿಗಳು ಮುಂದಿನ ಕ್ರಮಕೈಗೊಳ್ಳುತ್ತಾರೆ. ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬರುತ್ತಿರುವ ಬಗ್ಗೆ ಮಾಹಿತಿಯಿದೆ. ಆದರೆ, ಬೆಂಗಳೂರಿಗೆ ಬಂದಾಗಲೇ ಖಚಿತವಾಗಲಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ