ಅಧಿಕಾರಿಗಳ ಕಾರು ತಡೆದು ಹಲ್ಲೆ ಯತ್ನ ಕೇಸ್ಗೆ ಟ್ವಿಸ್ಟ್: ಸರ್ಕಾರಿ ಅಧಿಕಾರಿ ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿ ಸೇರಿ ನಾಲ್ವರ ಸೆರೆ
ಮೇ 25ರಂದು ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರಿ ಅಧಿಕಾರಿ ಮುಕುಂದ ಮೇಲೆ ನಡೆದ ಹಲ್ಲೆಗೆ ಟ್ವಿಸ್ಟ್ ಸಿಕ್ಕಿದ್ದು, ಸರ್ಕಾರಿ ಅಧಿಕಾರಿ ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿ ಸೇರಿ ನಾಲ್ವರನ್ನ ಬಂಧಿಸಲಾಗಿದೆ.
ದೇವನಹಳ್ಳಿ: ಅಧಿಕಾರಿಗಳ ಕಾರು ತಡೆದು ಹಲ್ಲೆ, ದರೋಡೆ ಯತ್ನ ಕೇಸ್ಗೆ ಟ್ವಿಸ್ಟ್ ಸಿಕ್ಕಿದ್ದು, ಸರ್ಕಾರಿ ಅಧಿಕಾರಿ ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿ ಸೇರಿ ನಾಲ್ವರನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ. ಮೇ 25ರಂದು ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರಿ ಅಧಿಕಾರಿ ಮುಕುಂದ ಮೇಲೆ ಹಲ್ಲೆಯಾಗಿತ್ತು. ದರೋಡೆಕೋರರು ಹಲ್ಲೆ ನಡೆಸಿದ್ದಾರೆಂದು ಮುಕುಂದ ದೂರು ನೀಡಿದ್ದ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರಿಂದ ಪ್ರಕರಣದ ತನಿಖೆ ಮಾಡಿದ್ದು, ಈ ವೇಳೆ ಪತಿ ಹತ್ಯೆಗೆ ಪತ್ನಿ ಮಮತಾ ಸುಪಾರಿ ನೀಡಿದ್ದು ಬೆಳಕಿಗೆ ಬಂದಿದೆ. ಪತ್ನಿ ಮಮತಾ ಸಾಲದ ವಿಚಾರಕ್ಕೆ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಜಗಳದ ಬಗ್ಗೆ ಗೆಳತಿ ತಸ್ಲೀಮಾ ಬಳಿ ವಿಚಾರ ಹೇಳಿಕೊಂಡಿದ್ದ ಮಮತಾ, ಪತಿ ಮುಕುಂದನ ಹತ್ಯೆಗೆ ಸುಪಾರಿ ನೀಡುವಂತೆ ತಸ್ಲೀಮಾಳಿಂದ ಸಲಹೆ ಪಡೆದಿದ್ದಾಳೆ.
ಸುಫಾರಿ ನೀಡಲು ಮನೆಯಲ್ಲಿದ್ದ ಚಿನ್ನಾಭರಣ ಮಾರಿದ್ದ ಪತ್ನಿ
ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯ ಹಂತಕರಿಗೆ ಮಮತಾ 40 ಲಕ್ಷಕ್ಕೆ ರೂ. ಸುಪಾರಿ ನೀಡಿ, ಮುಂಗಡವಾಗಿ 10 ಲಕ್ಷ ರೂ. ನೀಡಿದ್ದಳು. ಸುಫಾರಿ ನೀಡಲು ಮನೆಯಲ್ಲಿದ್ದ ಚಿನ್ನಾಭರಣ ಮಾರಿದ್ದ ಪತ್ನಿ, 10 ಲಕ್ಷಕ್ಕೆ ಚಿನ್ನಾಭರಣಗಳನ್ನ ಮಾರಿ ಸುಪಾರಿ ಕಿಲ್ಲರ್ಸ್ಗೆ ಅಡ್ವಾನ್ಸ್ ನೀಡಿದ್ದಾಳೆ. ನಟೋರಿಯಸ್ ಸುಫಾರಿ ಕಿಲ್ಲರ್ ಮೌಲಗೆ ಪತ್ನಿ ಅಡ್ವಾನ್ಸ್ ನೀಡಿದ್ದಳೆ. ಆದರೆ ಅಂದು ಕಾರಿನಲ್ಲಿ ಅಧಿಕಾರಿಗಳು ಮತ್ತು ರಸ್ತೆಯಲ್ಲಿ ಜನ ಬಂದ ಕಾರಣ ಪ್ಲಾನ್ ಪ್ಲಾಪ್ ಆಗಿದೆ. ಪ್ಲಾನ್ ಪ್ಲಾಪ್ ಆದ ನಂತರ ಮನೆಯಲ್ಲಿ ಟೆನ್ಷನ್ ನಲ್ಲಿದ್ದ ಪತ್ನಿ ಮಮತಾ, ಮೊದಲಿಗೆ ದರೋಡೆ ಕೇಸ್ ಅಂತ ಬೆನ್ನತ್ತಿದ್ದ ಪೊಲೀಸರಿಗೆ ನಂತರ ಸುಫಾರಿ ಸುಳಿವು ಸಿಕ್ಕಿದೆ. ಕಾರಿನ ನಂಬರ್ ಮೇಲೆ ತನಿಖೆಗಿಳಿದಿದ್ದ ಪೊಲೀಸರು, ಆದರೆ ಅಷ್ಟೋತ್ತಿಗಾಗಲೆ ಕಾರು 7 ಜನರ ಕೈ ಬದಲಾವಣೆಯಾಗಿತ್ತು. ಹೀಗಾಗಿ ಮೊದಲನೇ ಅವನಿಂದ ಕಾರು ಖರೀದಿಸಿದ್ದವರ ಬೆನ್ನತ್ತಿದ್ದ ಪೊಲೀಸರು, ಒಬ್ಬೂಬ್ಬರಾಗಿ ವಿಚಾರಣೆ ಮಾಡಿಕೊಂಡು ಬಂದಾಗ 7ನೇ ಅವನಾಗಿ ನಟೋರಿಯಸ್ ಸುಫಾರಿ ಕಿಲ್ಲರ್ ಮೌಲ ಸಿಕ್ಕಿ ಬಿದಿದ್ದಾನೆ.
ಇದನ್ನೂ ಓದಿ: ರೋಚಕ ಕ್ರಿಕೆಟ್ ಪಂದ್ಯ: ಗಳಿಸಿದ್ದೇ 30 ರನ್..ಆದರೂ ಪಂದ್ಯ ಟೈ ಆಯ್ತು..!
ಮೇ 25ರಂದು ಅಧಿಕಾರಿ ಮುಕುಂದನ ಮೇಲೆ ಸುಪಾರಿ ಗ್ಯಾಂಗ್ ಹಲ್ಲೆ ನಡೆಸಿದೆ. ಪೊಲೀಸರ ತನಿಖೆ ವೇಳೆ ಪತ್ನಿ ಮಮತಾ ಸುಪಾರಿ ನೀಡಿದ್ದು ಬೆಳಕಿಗೆ ಬಂದಿದೆ. ಮೌಲಾ ಅಲಿಯಾಸ್ ಡಾಂಬರ್ ಮೌಲಾ, ಸೈಯದ್ ನಹೀಮ್, ಅಧಿಕಾರಿ ಮುಕುಂದನ ಪತ್ನಿ ಮಮತಾ, ಸ್ನೇಹಿತೆ ತಸ್ಲೀಮಾನನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚೀಟಿ ವ್ಯವಹಾರದಿಂದ ಕೈ ಸುಟ್ಟುಕೊಂಡಿದ್ದ ಪತ್ನಿ ಮಮತಾ
ಪಕ್ಕದ ಮನೆಯಲ್ಲಿದ್ದವರು ಚೀಟಿ ನಡೆಸುತ್ತಿದ್ದಾರೆ ಅಂತ ಪರಿಚಯಸ್ಥರ ಬಳಿಯೆಲ್ಲ ಮಮತಾ ಚೀಟಿ ಹಾಕಿಸಿದ್ದಳು. ಆದರೆ ಚೀಟಿ ಹಾಕಿಸಿಕೊಂಡವರು ರಾತ್ರೋ ರಾತ್ರಿ ಊರು ಬಿಟ್ಟು ಎಸ್ಕೇಪ್ ಆಗಿದ್ದು, ಚೀಟಿ ಕಟ್ಟಿದ್ದವರು ಮಮತಾಳ ಬಳಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ. ಪೀಣ್ಯ ದಾಸರಹಳ್ಳಿ ಬಳಿಯ ಮನೆಗೆ ಬಂದು ಚೀಟಿ ಕಟ್ಟಿದ್ದವರು ಗಲಾಟೆ ಮಾಡುತ್ತಿದ್ದರು. ಹೀಗಾಗಿ ವಿಚಾರ ತಿಳಿದು 25 ಲಕ್ಷವರೆಗೂ ಗಂಡ ಮುಕುಂದ ಸಾಲ ತೀರಿಸಿದ್ದ. ಆದರೆ ಇನ್ನೂ 10 ರಿಂದ 15 ಲಕ್ಷ ಸಾಲವಿದ್ದ ಕಾರಣ ಇದೇ ವಿಚಾರಕ್ಕೆ ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಕಂಡ ಕಂಡವರ ಬಳಿ ಬಡ್ಡಿಗೆ ಹಣ ಪಡೆದು ಕಟ್ಟಿದವರ ಹಣ ವಾಪಸ್ ನೀಡಿದ್ದ ಮಮತಾ, ಅದೇ ರೀತಿ ಕೊಲೆ ಪ್ಲಾನ್ ಕೊಟ್ಟ ತಸ್ಲಿಮಾ ಗಂಡನ ಬಳಿಯು ಮೂರು ಲಕ್ಷ ಸಾಲ ಪಡೆದಿದ್ದಳು. ತಸ್ಲಿಮಾ ಮನೆ ಲೀಸ್ಗೆ ಹಾಕಿಕೊಳ್ಳಲು ಅಂತ ಇಟ್ಟುಕೊಂಡಿದ್ದ ಹಣ ಬಡ್ಡಿ ಕೊಡೋದಾಗಿ ಹೇಳಿ ಪಡೆದುಕೊಂಡಿದ್ಲು. ಆದರೆ ಹಣ ಎಷ್ಟು ದಿನವಾದ್ರು ಕೊಡದಿದ್ದಾಗ ತನ್ನ ಕಷ್ಟವನ್ನ ಗೆಳತಿಗೆ ಹೇಳಿಕೊಂಡಿದ್ದಳೆ. ಹೀಗಾಗಿ ಗಂಡನನ್ನ ಮುಗಿಸಿದ್ರೆ ಟಾರ್ಚರ್ ಜೊತೆಗೆ ಸಾಲದ ಬಾದೆಯು ತಪ್ಪುತ್ತೆ ಅಂತ ತಸ್ಲಿಮಾ ಐಡಿಯಾ ನೀಡಿದ್ದಾಳೆ. ತಸ್ಲಿಮಾ ಪ್ಲಾನ್ ನಂತೆ ಗಂಡನನ್ನ ಮುಗಿಸಿ ಸಾಲ ತೀರಿಸಿ ಸುಖ ಜೀವನ ನಡೆಸಲು ಮಮತಾ ಪ್ಲಾನ್ ಮಾಡಿದ್ದಾಳೆ.
ಸಂಘಟನೆಯೊಂದರಿಂದ ಸುಫಾರಿ ಕಿಲ್ಲರ್ಗಳ ಪರಿಚಯ
ಆರೋಪಿ ತಸ್ಲಿಮಾಗೆ ಕನ್ನಡ ಪರ ಸಂಘಟನೆಯೊಂದರಲ್ಲಿ ಪರಿಚಿತವಾಗಿದ್ದ A2 ಆರೋಪಿ ಸೈಯದ್ ನಹೀಮ್, ಒಂದೇ ಸಂಘಟನೆಯಲ್ಲಿ ಪರಿಚಯವಾಗಿದ್ದ ಕಾರಣ ತಸ್ಲಿಮಾ ಸೈಯದ್ ನಹಿಮ್ ಸಹಾಯ ಕೇಳಿದ್ದಳೆ. ಈ ವೇಳೆ ಮೌಲ ಬಗ್ಗೆ ಹೇಳಿ 40 ಲಕ್ಷಕ್ಕೆ ಡೀಲ್ ಪಕ್ಕಾ ಮಾಡಿ, ನಂತರ ಮಮತಾಗೆ ಪರಿಚಯ ಮಾಡಿಸಿ ಪತ್ನಿ ಹೆಸರು ಹೊರ ಬರದಂತೆ ಕೊಲೆ ಮಾಡಿಸೂದಾಗಿ ಫ್ರೀ ಪ್ಲಾನ್ ಮಾಡಲಾಗಿದೆ. ಫ್ರೀ ಪ್ಲಾನ್ನೊಂದಿಗೆ ಫೀಲ್ಡಿಗಳಿದು ಕೊಲೆ ಉದ್ದೇಶದಿಂದಲೆ ಹಲ್ಲೆ ಮಾಡಿದ್ದ ಆರೋಪಿಗಳು, ಮುಕುಂದ ಬರೋ ರಸ್ತೆಯನ್ನೆಲ್ಲ ವಾಚ್ ಮಾಡಿ ಕೈಗಾರಿಕಾ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಕೊಲೆಗೆ ಸ್ಕೇಚ್ ಹಾಕಿದ್ದರು. 6 ಜನ ಗ್ಯಾಂಗ್ ಬಂದು ಮೊದಲೇ ಕೊಲೆ ಮಾಡಲು ಕಾದು ಕುಳಿತಿದ್ದ ಆರೋಪಿಗಳು, ಆದರೆ ಈ ವೇಳೆ ಕಾರಿನಲ್ಲಿ ಒಬ್ಬನೇ ಬಾರದೆ ನಾಲ್ವರು ಅಧಿಕಾರಿಗಳ ಜೊತೆ ಮುಕುಂದ ಬಂದಿದ್ದಾರೆ. ಹೀಗಾಗಿ ಕೊಲೆ ಮಾಡಲು ಆರೋಪಿಗಳು ಹಿಂಜರಿದಿದ್ದಾರೆ. ನಂತರ ಹಿಂದೆ ವಾಹನಗಳು ಬಂದ ಕಾರಣ ಸಣ್ಣಪುಟ್ಟ ಗಾಯಗಳೊಂದಿಗೆ ಅಧಿಕಾರಿ ಮುಕುಂದ ಬಚಾವ್ ಆಗಿದ್ದ. ಮೌಲ ಮೂಲಕ ಸೈಯದ್, ಸೈಯದ್ ಮೂಲಕ ತಸ್ಲೀಮಾ, ತಸ್ಲಿಮಾ ಮೂಲಕ ಪತ್ನಿ ಮಮತಾ, ನಾಲ್ವರನ್ನು ಬಂಧಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಜೈಲಿಗಟ್ಟಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.