ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ಸಾವು, ಮತ್ತೋರ್ವನಿಗೆ ಮುಂದುವರೆದ ಚಿಕಿತ್ಸೆ

ಮೇ.17ರಂದು ದಾಬಸ್‌ಪೇಟೆ ಎಸ್​ಕೆ ಸ್ಟೀಲ್ ಕಂಪನಿಯಲ್ಲಿ ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಮೂವರು ಗಾಯಗೊಂಡಿದ್ದರು. ಘಟನೆಯಲ್ಲಿ ಸುಶೀಲ್ ಕುಮಾರ್ ಎಂಬುವವರಿಗೆ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.

ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಇಬ್ಬರು ಕಾರ್ಮಿಕರು ಸಾವು, ಮತ್ತೋರ್ವನಿಗೆ ಮುಂದುವರೆದ ಚಿಕಿತ್ಸೆ
ಸಾವು
Follow us
ಬಿ ಮೂರ್ತಿ, ನೆಲಮಂಗಲ
| Updated By: ಆಯೇಷಾ ಬಾನು

Updated on: May 23, 2024 | 8:54 AM

ನೆಲಮಂಗಲ, ಮೇ.23: ಮೇ.17ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ದಾಬಸ್‌ಪೇಟೆ ಎಸ್​ಕೆ ಸ್ಟೀಲ್ ಕಂಪನಿಯಲ್ಲಿ ದುರಂತವೊಂದು ಸಂಭವಿಸಿತ್ತು. ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಗಾಯಗೊಂಡಿದ್ದ ಇಬ್ಬರು ಕಾರ್ಮಿಕರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ (Death). ಬಿಹಾರ ಮೂಲದ ಅಶೋಕ್ ಕುಮಾರ್ (49) ಹಾಗೂ ಒಡಿಶಾ ಮೂಲದ ಮುಖೇಶ್ ಕುಮಾರ್(33) ಮೃತ ದುರ್ದೈವಿಗಳು. ಇನ್ನು ಘಟನೆಯಲ್ಲಿ ಸುಶೀಲ್ ಕುಮಾರ್ ಎಂಬುವವರಿಗೆ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.

ಮೇ.17ರಂದು ದಾಬಸ್‌ಪೇಟೆ ಎಸ್​ಕೆ ಸ್ಟೀಲ್ ಕಂಪನಿಯಲ್ಲಿ ಮೆಟಲ್ ಗ್ಯಾಸ್ ಬ್ಲಾಸ್ಟ್ ಆಗಿ ಮೂವರು ಗಾಯಗೊಂಡಿದ್ದರು. ಇಬ್ಬರು ಮೃತಪಟ್ಟಿದ್ದು ಓರ್ವರಿಗೆ ಚಿಕಿತ್ಸೆ ಮುಂದುವರೆದಿದೆ. ಸೂಪರ್ವೈಸರ್ ಪಪ್ಪುಯಾದವ್, ಆಡಳಿತ ಮಂಡಳಿ ವಿರುದ್ಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಕಲಂ 337,304a ರೀತ್ಯಾ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮುಜರಾಯಿ ದೇಗುಲಗಳಿಗೂ ಬಂತು ಸೆಲ್ಫ್ ಕಿಯೋಸ್ಕ್ ಮಷಿನ್: ರಶೀದಿ ಪಡೆಯಲು ಇನ್ನು ಕ್ಯೂ ನಿಲ್ಲಬೇಕಿಲ್ಲ

ಕೊಲೆ ಮಾಡಿ ಮರದ ಎಲೆಗಳನ್ನು ಮುಚ್ಚಿದ ಪತಿ?

ಕೊಲೆ ಮಾಡಿ ಮರದ ಎಲೆಗಳನ್ನು ಮುಚ್ಚಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಗಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ‌ ಮಂಗಾಡಹಳ್ಳಿ ಬಳಿ ಘಟನೆ ನಡೆದಿದ್ದು, ಮಂಗಾಡಹಳ್ಳಿ ನಿವಾಸಿಯ ಅಶ್ವಿನಿ ಶವ ಎಂದು ಗುರುತು ಪತ್ತೆ ಹಚ್ಚಲಾಗಿದೆ. ಅಪರಿಚಿತರ ಜೊತೆ ವಿಡಿಯೋ ಕಾಲ್ ‌ಮಾಡಿದಕ್ಕೆ ಪತಿ‌ ರಮೇಶ್​​ನೇ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

19 ವರ್ಷಗಳ ಬಳಿಕ ನಕ್ಸಲ್ ಕೊತ್ತಗೆರೆ ಶಂಕರ ಬಂಧನ

19 ವರ್ಷಗಳ ಬಳಿಕ ನಕ್ಸಲ್ ಕೊತ್ತಗೆರೆ ಶಂಕರನನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮತ್ತು ಬೆಂಗಳೂರು ಆಂತರಿಕ ಭದ್ರತಾ ವಿಭಾಗ ಹಾಗೂ ಸಿಐ ತಂಡವೂ ಬಂಧಿಸಿದೆ. 2005 ರಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಪೊಲೀಸ್ ಕ್ಯಾಂಪ್ ಮೇಲೆ 300 ನಕ್ಸಲರು ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ದಾಳಿ ನಡೆಸಿದ್ದರು. 7 ಪೊಲೀಸ್ ಅಧಿಕಾರಿಗಳು ಸೇರಿ ಖಾಸಗಿ ಬಸ್‌ನ ಕ್ಲೀನರ್‌ ಮೃತಪಟ್ಟಿದ್ದ. ದಾಳಿಯಲ್ಲಿ ಐವರು ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ