Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಸುದ್ದಿ ಬಳಿಕ‌ ಎಚ್ಚೆತ್ತ ಕೆಐಎಡಿಬಿ: ಸರ್ಕಾರ‌ಕ್ಕೆ ಮಂಕುಬೂದಿ ಎರಚಿ ಲೂಟಿ ಪ್ಲಾನ್ ವಿಫಲ

ರಾತ್ರೋರಾತ್ರಿ ಖಾಲಿ ಜಾಗದಲ್ಲಿ ಲಕ್ಷಾಂತರ ಮರಗಳು ತಲೆಎತ್ತಿದ್ದ‌ ಬಗ್ಗೆ ‌ನಿನ್ನೆಯಷ್ಟೆ‌ ಟಿವಿ9 ವಿಸ್ತೃತ ವರದಿ ಬಿತ್ತರಿಸಿತ್ತು. ಸರ್ಕಾರ‌ ಮಂಕುಬೂದಿ ಎರಚಿ ಲೂಟಿ ಮಾಡಲು ಮಾಡಿಕೊಂಡಿದ್ದ ಪ್ಲಾನ್ ಫ್ಲಾಪ್ ಆಗುವಂತೆ ಕೆಐಎಡಿಬಿ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಹಣ ಮಾಡಲು ಕೆಲ ಬ್ರೋಕರ್​​ಗಳು ಹಾಗೂ ಅಧಿಕಾರಿ ವರ್ಗ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಈ ಬಗ್ಗೆ ಟಿವಿ9 ಸುದ್ದಿ ಮಾಡುತ್ತಿದ್ದಂತೆ ಸರ್ಕಾರ ನಿದ್ದೆಯಿಂದ ಎದ್ದಿದೆ.

ಟಿವಿ9 ಸುದ್ದಿ ಬಳಿಕ‌ ಎಚ್ಚೆತ್ತ ಕೆಐಎಡಿಬಿ: ಸರ್ಕಾರ‌ಕ್ಕೆ ಮಂಕುಬೂದಿ ಎರಚಿ ಲೂಟಿ ಪ್ಲಾನ್ ವಿಫಲ
ಟಿವಿ9 ಸುದ್ದಿ ಬಳಿಕ‌ ಎಚ್ಚೆತ್ತ ಕೆಐಎಡಿಬಿ, ಸರ್ಕಾರ‌ಕ್ಕೆ ಮಂಕುಬೂದಿ ಎರಚಿ ಲೂಟಿ ಪ್ಲಾನ್ ವಿಫಲ
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on: May 22, 2024 | 9:42 PM

ನೆಲಮಂಗಲ, ಮೇ 22: ರಾತ್ರೋರಾತ್ರಿ ಖಾಲಿ ಜಾಗದಲ್ಲಿ ಲಕ್ಷಾಂತರ ಮರಗಳು ತಲೆಎತ್ತಿದ್ದ‌ ಬಗ್ಗೆ ‌ನಿನ್ನೆಯಷ್ಟೆ‌ ಟಿವಿ9 ವಿಸ್ತೃತ ವರದಿ ಬಿತ್ತರಿಸಿತ್ತು. ಸರ್ಕಾರ‌ ಮಂಕುಬೂದಿ ಎರಚಿ ಲೂಟಿ ಮಾಡಲು ಮಾಡಿಕೊಂಡಿದ್ದ ಪ್ಲಾನ್ ಫ್ಲಾಪ್ ಆಗುವಂತೆ ಕೆಐಎಡಿಬಿ (KIADB) ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಈ ಬಗ್ಗೆ ಒಂದು ವರದಿ ಇಲ್ಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಕೆಐಎಡಿಬಿ ಕೈಗಾರಿಕ ವಲಯ ಎಂದು ಗುರುತಿಸಿದ ಭೂಭಾಗದಲ್ಲಿ ರೈತ ಮತ್ತು ಸರ್ಕಾರಕ್ಕೆ ವಂಚಿಸಿ ಕೋಟ್ಯಾಂತರ ರೂ. ಹಣ ಮಾಡಲು ಕೆಲ ಬ್ರೋಕರ್​​ಗಳು ಹಾಗೂ ಅಧಿಕಾರಿ ವರ್ಗ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಈ ಬಗ್ಗೆ ಟಿವಿ9 ಸುದ್ದಿ ಮಾಡುತ್ತಿದ್ದಂತೆ ಸರ್ಕಾರ ನಿದ್ದೆಯಿಂದ ಎದ್ದಿದೆ.

ಕೆಐಎಡಿಬಿ‌ ಅಧಿಸೂಚನೆ ‌ಹೊರಡಿಸಿದ ಭೂಮಿಯಲ್ಲಿ ಬಂದ ಅಕ್ರಮದ ವಾಸನೆ ಬಗ್ಗೆ ಟಿವಿ9 ವರದಿ ಮಾಡಿತ್ತು. ಭೂ ಸ್ವಾಧಿನ ಪಡೆಸಿಕೊಳ್ಳುವ ಭೂಮಿಯಲ್ಲಿ ರಾತ್ರೋರಾತ್ರಿ ‌ಲಕ್ಷಾಂತರ ಮರಗಳನ್ನು ನೆಟ್ಟು ಹೆಚ್ಚುವರಿ ಪರಿಹಾರ ಪಡೆಯುವ ಸಂಚಿಗೆ ಬ್ರೇಕ್ ಹಾಕುವಂತೆ ಮಾಡಿದೆ. ಬ್ರೋಕರ್​​ಗಳ‌ ಜೊತೆ ಕೆಐಎಡಿಬಿ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಆರೋಪವೂ ಕೇಳಿಬಂದಿತ್ತು.

ಇದನ್ನೂ ಓದಿ: KIADB ಅಧಿಕಾರಿಗಳಿಂದ ಕೋಟ್ಯಂತರ ರೂ. ಗುಳುಂ ಮಾಡಲು ಪ್ಲ್ಯಾನ್‌? ರಾತ್ರೋರಾತ್ರಿ ತಲೆ ಎತ್ತಿದೆ ವಿವಿಧ ಹಣ್ಣಿನ ಲಕ್ಷಾಂತರ ಸಸಿಗಳು

ಕೋಟ್ಯಾಂತರ ಹಣವನ್ನು ಗುಳುಂ ಮಾಡಲು ನಿಂತಿದ್ದ ಬ್ರೋಕರ್​​ಗಳು‌ ಮತ್ತು ಅಧಿಕಾರಿಗಳ ನಿದ್ದೆಯನ್ನು ಟಿವಿ9 ಇದೀಗ ಹಾಳು ಮಾಡಿದೆ. ಸುದ್ದಿ ಪ್ರಸಾರವಾಗುತ್ತಿದ್ದಂತೆ ಜಂಟಿ ಸರ್ವೆ ನಡೆಸಿ, ವರದಿ ನೀಡಿ ಎಂದು ಕೆಐಎಡಿಬಿ ಸಿಇಓ ಐಎಎಸ್ ಅಧಿಕಾರಿ ಮಹೇಶ್ ಆದೇಶಿಸಿದ್ದಾರೆ.

ಅಧಿಸೂಚನೆ ದಿನಾಂಕದ ಬಳಿಕ ತಲೆ ಎತ್ತಿದ್ದ ಅಕ್ರಮ ಕಟ್ಟಡ, ಮರ, ಮಲ್ಕಿಗೆ ಹಣ ಬಿಡುಗಡೆ ಮಾಡೋದೇ ಇಲ್ಲಾ. ಇಸ್ರೋ ಸ್ಯಾಟಲೈಟ್ ಇಮೇಜ್ ಆಧರಿಸಿ‌ ನಂತರ‌ ಪರಿಹಾರ ನೀಡುವಂತೆ ಖಡಕ್ ಸೂಚನೆಯನ್ನು ನೀಡಿದ್ದಾರೆ. ಇದೆಲ್ಲದಕ್ಕೂ ಮೊದಲು ವರದಿಯನ್ನು ಮೂರು ದಿನಗಳೊಳಗೆ ಸಲ್ಲಿಸಿ ಎಂದು ಖಾರವಾಗಿ‌ ಆದೇಶಿಸಿದ್ದಾರೆ.

ಇದನ್ನೂ ಓದಿ: KIADB ಮತ್ತೊಂದು ಹಗರಣ: ಸತ್ತವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ಹೊಡೆದಿದ್ದಾರಂತೆ! ಸಿಐಡಿ, ರಾಜ್ಯ ಸರ್ಕಾರ ಸೈಲೆಂಟ್

ಕಡಿದ ಮರದ ಬದಲಿಗೆ ಮರ ಹಾಕಿ ಎಂದರೆ ಡೋಂಟ್ ಕೇರ್ ಅನ್ನೊ ಸರ್ಕಾರಿ ಅಧಿಕಾರಿಗಳಿಗೆ, ವಾಮಮಾರ್ಗದಲ್ಲಿ ದುಡ್ಡುಮಾಡಲು ರಾತ್ರೋರಾತ್ರಿ ಬೃಹತ್ ಮರ ನೆಡೊ ಕಾರ್ಯಕ್ರಮ ಮಾಡೋದು ನಿಜಕ್ಕೂ ವಿಪರ್ಯಾಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Daily Horoscope: ಕರ್ಮಕಾರಕ ಶನಿ ಕುಂಭದಿಂದ ಮೀನ ರಾಶಿಯತ್ತ ಪ್ರವೇಶ
Daily Horoscope: ಕರ್ಮಕಾರಕ ಶನಿ ಕುಂಭದಿಂದ ಮೀನ ರಾಶಿಯತ್ತ ಪ್ರವೇಶ
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ