ಬಾರ್ ಓಪನ್ ಆದ ಮೊದಲ ದಿನವೇ ಧರಣಿ ನಡೆಸಿ ಬಾರ್ ಮುಚ್ಚಿಸಿದ ಮಹಿಳೆಯರು; ಮತ್ತೆ ತೆರೆಯಲು ಅವಕಾಶ ಕೊಡಲ್ಲವೆಂದು ಪಟ್ಟು

ಬಾರ್ ಓವನ್ ಆದ ಮೊದಲ ದಿನವೇ ಬಾರ್ ಮೇಲೆ‌ ಮಹಿಳೆಯರು ದಿಢೀರ್ ದಾಳಿ ನಡೆಸಿದ್ದಾರೆ. ನೂರಕ್ಕೂ ಹೆಚ್ಚು‌ ಮಹಿಳೆಯರು ಬಾರ್ ಮುಚ್ಚುವಂತೆ ಪ್ರತಿಭಟನೆ ನಡೆಸಿ ಬಾರ್ ಮುಚ್ಚಿಸಿದ್ದಾರೆ.

ಬಾರ್ ಓಪನ್ ಆದ ಮೊದಲ ದಿನವೇ ಧರಣಿ ನಡೆಸಿ ಬಾರ್ ಮುಚ್ಚಿಸಿದ ಮಹಿಳೆಯರು; ಮತ್ತೆ ತೆರೆಯಲು ಅವಕಾಶ ಕೊಡಲ್ಲವೆಂದು ಪಟ್ಟು
ಬಾರ್ ಓಪನ್ ಆದ ಮೊದಲ ದಿನವೇ ಧರಣಿ ನಡೆಸಿ ಬಾರ್ ಮುಚ್ಚಿಸಿದ ಮಹಿಳೆಯರು; ಯಾವುದೇ ಕಾರಣಕ್ಕೂ ಬಾರ್ ಓಪನ್ ಗೆ ಅವಕಾಶ ಕೊಡಲ್ಲವೆಂದು ಪಟ್ಟು
Follow us
TV9 Web
| Updated By: ಆಯೇಷಾ ಬಾನು

Updated on:Mar 25, 2022 | 9:54 PM

ಬೆಂಗಳೂರು ಗ್ರಾಮಾಂತರ: ಮಾಚೋಹಳ್ಳಿಯಲ್ಲಿ ಜನವಸತಿ ಪ್ರದೇಶದಲ್ಲಿ ನೂತನವಾಗಿ ತೆರೆಯಲಾಗಿದ್ದ ಬಾರ್ ಮುಚ್ಚುವಂತೆ ಮಹಿಳೆಯರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಶೀಘ್ರದಲ್ಲೇ ಬಾರ್ ತೆರವು ಮಾಡುವಂತೆ ನೂರಾರು ಮಹಿಳೆಯರು ಪ್ರತಿಭಟನೆ ಮಾಡಿದ್ದು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬಾರ್ ಓವನ್ ಆದ ಮೊದಲ ದಿನವೇ ಬಾರ್ ಮೇಲೆ‌ ಮಹಿಳೆಯರು ದಿಢೀರ್ ದಾಳಿ ನಡೆಸಿದ್ದಾರೆ. ನೂರಕ್ಕೂ ಹೆಚ್ಚು‌ ಮಹಿಳೆಯರು ಬಾರ್ ಮುಚ್ಚುವಂತೆ ಪ್ರತಿಭಟನೆ ನಡೆಸಿ ಬಾರ್ ಮುಚ್ಚಿಸಿದ್ದಾರೆ. ಶೀಘ್ರದಲ್ಲೇ ಬಾರ್ ತೆರವು ಮಾಡಬೇಕು ಯಾವುದೇ ಕಾರಣಕ್ಕೂ ಬಾರ್ ಓಪನ್ ಗೆ ಅವಕಾಶ ಕೊಡಲ್ಲವೆಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ ಬಳಿಯ ಮೂಕಾಂಬಿಕನಗರದಲ್ಲಿರುವ ಜನ ವಸತಿ ಪ್ರದೇಶದಲ್ಲಿ ನೂತನವಾಗಿ ಪ್ರಾರಂಭವಾದ MRP ಬಾರ್ ವಿರೋಧಿಸಿ ಮೊದಲ ದಿನವೇ ಬಾರ್ ಮೇಲೆ‌ ಸ್ಥಳೀಯ ಮಹಿಳೆಯರು ದಿಢೀರ್ ದಾಳಿ ನಡೆಸಿದ್ದಾರೆ. ಶುಕ್ರವಾರವಾದ ಇಂದು ಒಳಗೊಳಗೆ ಗುಪ್ತವಾಗಿ ಸುಳ್ಳು ದಾಖಲೆಯನ್ನು ನೀಡಿ ಜನ ವಸತಿ ಪ್ರದೇಶದಲ್ಲಿ ಬಾರ್ ಓಪನ್ ಮಾಡಲು ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ಬಾರ್ ಆರಂಭ ಮಾಡಿದ್ದಾರೆಂದು ಅರೋಪಿಸಿದ್ದಾರೆ. ಇದರಿಂದ ಮನನೊಂದ ಸ್ಥಳೀಯ ನೂರಕ್ಕೂ ಹೆಚ್ಚು‌ ಮಹಿಳೆಯರಿಂದ ಬಾರ್ ಮುಚ್ಚುವಂತೆ ಬಾರ್ ಮುಂದೆ ಬೆಂಕಿ ಹಾಕಿ ಪ್ರತಿಭಟನೆ ಮಾಡಿದ್ರು ಇನ್ನೂ ಮಹಿಳೆಯರ ಪ್ರತಿಭಟನೆ ತೀವ್ರವಾದ ಹಿನ್ನೆಲೆ ಬಾರ್ ಕ್ಲೋಜ್ ಮಾಡಿ ಸಿಬ್ಬಂದಿ ಸ್ಥಳದಿಂದ ಪರಾರಿಯಾದ್ರೂ, ಶ್ರೀರಂಗನಾಥ ಹೆಸರಿನ ಬಾರ್ ರಾಮಕೃಷ್ಣ ಅವರಿಗೆ ಸೇರಿದ್ದಾಗಿದೆ.

ಹೆಂಗಸರು, ಮಕ್ಕಳು, ಬಾಲಕಿಯರು ಇದೇ ರಸ್ತೆಯಲ್ಲಿ ಹೆಚ್ಚಾಗಿ ಓಡಾಡುವುದರಿಂದ ಪಾನಮತ್ತರ ಭಯ ಕೂಡ ಹೆಚ್ಚಾಗಿ ನಮಗೆ ಅಭದ್ರತೆ ಇರುತ್ತೆ,ಈಗಲೇ ಗಂಡಂದಿರು ದೂರದ ಬಾರ್ ನಿಂದ ಕುಡಿದು ಬಂದು ಮನೆಯಲ್ಲಿ ಸಾಕಷ್ಟು ನೆಮ್ಮದಿ ಹಾಳು ಮಾಡುತ್ತಿದ್ದಾರೆ,ಇಂತಹವರಿಗೆ ಸ್ಥಳೀಯವಾಗಿ ಸಿಕ್ರೆ ಇರೋ ನೆಮ್ಮದಿಯೂ ಹಾಳಗುತ್ತೆ ಅಂತ ಸ್ಥಳೀಯ ಮಹಿಳೆ ತಮ್ಮ ಅಳಲನ್ನ ತೋಡಿಕೊಂಡ್ರು, ಶೀಘ್ರದಲ್ಲೇ ಬಾರ್ ತೆರವು ಮಾಡಲೇ ನಾವೆಲ್ಲರೂ ಸೇರಿ ಯಾವುದೇ ಕಾರಣಕ್ಕೂ ಬಾರ್ ಓಪನ್ ಗೆ ಅವಕಾಶ ಕೊಡಲ್ಲವೆಂದು ಮಹಿಳೆಯರ ಪ್ರತಿಭಟನೆ ಮಾಡಿದ್ರು,ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಯವರು ಪ್ರತಿಭಟನೆ ಕೈ ಬಿಟ್ಟು ದೂರು ಕೊಡಲು ತಿಳಿಸಿದ್ರು,ಸಧ್ಯ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bar Protest 1

ಬಾರ್ ಓಪನ್ ಆದ ಮೊದಲ ದಿನವೇ ಧರಣಿ ನಡೆಸಿ ಬಾರ್ ಮುಚ್ಚಿಸಿದ ಮಹಿಳೆಯರು; ಯಾವುದೇ ಕಾರಣಕ್ಕೂ ಬಾರ್ ಓಪನ್ ಗೆ ಅವಕಾಶ ಕೊಡಲ್ಲವೆಂದು ಪಟ್ಟು

ಕೋಳಿ ಅಂಗಡಿ ಮಾಲೀಕನ ಮನೆಯಲ್ಲಿ ಚಿನ್ನ, ನಗದು ಕದ್ದು ಪರಾರಿಯಾದ ಕಳ್ಳ ನೆಲಮಂಗಲ: ಹಾಡಹಗಲೆ ಕೋಳಿ ಅಂಗಡಿ ಮಾಲೀಕನ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ವಾಜರಹಳ್ಳಿಯಲ್ಲಿ ನಡೆದಿದೆ. ಕೆಂಪರಾಜು ಎನ್ನುವವರ ಮನೆಯಲ್ಲಿ‌ ಕಳ್ಳತನ‌ ನಡೆದಿದೆ. ಮನೆಯ ಹೊರಗಡೆ ಕೆಂಪರಾಜು ಪತ್ನಿ ಕಸ ಗುಡಿಸುತ್ತಿದ್ದಾಗಲೇ ಕಳ್ಳ ಕೃತ್ಯವೆಸಗಿದ್ದಾನೆ. ವಾಪಸ್ ಮನೆಯೊಳಗೆ ನೋಡಿದ್ರೆ ಬೀರು ಓಪನ್ ಆಗಿದ್ದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಬೀರುವಿನಲ್ಲಿದ್ದ 250 ಚಿನ್ನಭರಣ, ಒಂದುವರೆ ಲಕ್ಷ ರೂಪಾಯಿ ಹಣ ನಗದು ಕಳವಾಗಿದೆ. ಮನೆಯ ಹೊರಗೆ ಚಪ್ಪಲಿ‌ ಬಿಟ್ಟು ಮನೆಗಳ್ಳ ಪರಾರಿಯಾಗಿದ್ದಾನೆ. ನೆಲಮಂಗಲ ಟೌನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 23/03/2022 ರಂದು ಸಂಜೆ ಐದು ಗಂಟೆಯ ಸಮಯದಲ್ಲಿ ರೇಖಾ w/o ಕೆಂಪರಾಜು ವಾಜರಹಳ್ಳಿ ಇವರು ಎಂದಿನಂತೆ ಮನೆಮುಂದಿನ ಬಾಗಿಲ ಚಿಲಕವನ್ನು ಹಾಕಿ ಮನೆಯ ಮುಂದೆ ಕಸವನ್ನು ಗುಡಿಸುತ್ತಾ ಮನೆಯ ಸುತ್ತಲೂ ಕಸವನ್ನು ಗುಡಿಸಿ ಮರಳಿ ಮನೆಗೆ ಬಂದಾಗ ಮನೆಯ ಮುಂಬಾಗಿಲ ಚಿಲಕವನ್ನು ಯಾರೋ ಒಬ್ಬ ಅಸಾಮಿ ಹಾಕುತ್ತಿದ್ದು ತಕ್ಷಣ ನೀನು ಯಾರು ಎಂದು ಇವರು ಕೂಗುತ್ತಿದ್ದಾಗ ಆತನು ಅಲ್ಲಿನಿಂದ ಓಡಿಹೋಗಿ ತಪ್ಪಿಸಿಕೊಂಡಿದ್ದಾನೆ, ತಕ್ಷಣ ಇವ್ರು ಮನೆಯೊಳಗೆ ಹೋಗಿ ನೋಡಲಾಗಿ ರೂಮಿನ ಒಳಗೆ ಇದ್ದ ಬೀರುವಿನಲ್ಲಿ ಇಟ್ಟಿದ್ದ ಚಿನ್ನದ ಒಡವೆ ಸುಮಾರು 140 ರಿಂದ 150 ಗ್ರಾಂ ಮತ್ತು ಒಂದೂವರೆ ಲಕ್ಷದಷ್ಟು ಹಣ ಕಳ್ಳತನವಾಗಿರುವುದು ಗೊತ್ತಾಗುತ್ತದೆ ಈ ಬಗ್ಗೆ ನೋಡಿ ನೀಡಿದ ದೂರಿನ ಮೇರೆಗೆ ಠಾಣಾ ಕ್ರೈಂ ನಂಬರ್ 51/2022 u/s 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ಕ್ರಮಕೈಗೊಂಡು ಇರುತ್ತದೆ, ಸದರಿ ಯವರು ಹೊಸ ಮನೆ ಹೊಸ ಕಟ್ಟಡ ಕಟ್ಟಿಸುತ್ತಿದ್ದ ಕಾರ್ಮಿಕರು ಆಗಿಂದಾಗೆ ಮನೆಗೆ ಬಂದು ಹೋಗುತ್ತಿದ್ದ ಬಗ್ಗೆ ಅನುಮಾನ ವ್ಯಕ್ತಪಡಿಸಿರುತಾರೆ.

ಇದನ್ನೂ ಓದಿ: ಮತ್ತೆ ಹಾಟ್ ಆಗಿ ಕಾಣಿಸಿಕೊಂಡ ದಿಶಾ ಪಟಾನಿ; ಇಲ್ಲಿವೆ ಫೋಟೋಗಳು

ಸವದತ್ತಿ ಎಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಜೊತೆ ಭಕ್ತರ ಹರಕೆ ಪತ್ರಗಳು!

Published On - 9:46 pm, Fri, 25 March 22

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?